Friday, July 18, 2025

Latest Posts

ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಗಳಿಸಲು ಮುಂದಾದ ಬ್ರಿಟನ್‌ : ಮತ ಚಲಾವಣೆಗೆ ವಯಸ್ಸೆಷ್ಟು ಗೊತ್ತಾ?

- Advertisement -

ಬೆಂಗಳೂರು : ಮುಂಬರುವ 2029 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮತದಾನದ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸುವುದಾಗಿ ಬ್ರಿಟನ್ ಸರ್ಕಾರ ಘೋಷಿಸಿದೆ. ಈ ನಿರ್ಧಾರವು ಯುನೈಟೆಡ್ ಕಿಂಗ್‌ಡಮ್‌ನ ಪ್ರಜಾಪ್ರಭುತ್ವದಲ್ಲಿ ಹದಿಹರೆಯ ವಯಸ್ಸಿನವರಿಗೂ ಮತದಾನದ ಹಕ್ಕನ್ನು ನೀಡಲಿದೆ. ಅಲ್ಲದೆ ಈ ಹೆಜ್ಜೆಯು ದೇಶದ ಅತಿದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆಯಂದು ಬ್ರಿಟಿಷ್ ಸರ್ಕಾರ ತಿಳಿಸಿದೆ.

ಪ್ರಮುಖವಾಗಿ ಇದು ಕಳೆದ ಚುನಾವಣೆಯ ಸಮಯದಲ್ಲಿ ಲೇಬರ್ ಪಕ್ಷವು ಮಾಡಿದ್ದ ಪ್ರಣಾಳಿಕೆಯಲ್ಲಿನ ನಿರ್ಧಾರವಾಗಿದ್ದು, ಅದನ್ನು ಜಾರಿಗೆ ತರುವುದು ಅದರ ಬದ್ಧತೆಯಾಗಿದೆ. ಅಲ್ಲದೆ ಇದು ವಿಕೇಂದ್ರೀಕೃತ ಸ್ಕಾಟ್ಲೆಂಡ್ ಮತ್ತು ವೇಲ್ಸ್ ಪ್ರದೇಶಗಳಿಗೆ ಅನುಗುಣವಾಗಿ ಬ್ರಿಟನ್ ಸರ್ಕಾರ ಚುನಾವಣೆಗಳನ್ನು ನಡೆಸುತ್ತದೆ. ಇದು ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರಾಗುವುದು ಬೇಡ ಎಂದು ಮತದಾನ ಕೇಂದ್ರಗಳಲ್ಲಿ ನೀಡಲಾದ ಬ್ಯಾಂಕ್ ಕಾರ್ಡ್‌ಗಳನ್ನು ಅಂಗೀಕೃತ ಗುರುತಿನ ಚೀಟಿಯಾಗಿ ಬಳಸಲು ಅನುಮತಿಸುವ ಕಾರ್ಯವಾಗಿದೆ. ಅದರಲ್ಲಿಯೇ ಮತದಾರರ ಗುರುತಿನ ಚೀಟಿ ವ್ಯವಸ್ಥೆಯ ವಿಸ್ತರಣೆಯ ಯೋಜನೆಗಳೂ ಸೇರಿವೆ ಎಂದು ಬ್ರಿಟನ್‌ ಸರ್ಕಾರ ಹೇಳಿಕೊಂಡಿದೆ.

ಇನ್ನೂ ಇದಕ್ಕೂ ಮುನ್ನ ಇದ್ದ ಮತದಾನದ ಪದ್ದತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬ್ರಿಟನ್‌ ಉಪ ಪ್ರಧಾನ ಮಂತ್ರಿ ಏಂಜೆಲಾ ರೇನರ್‌, ಬಹಳ ಸಮಯದಿಂದ , ನಮ್ಮ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕರ ನಂಬಿಕೆಗೆ ಧಕ್ಕೆಯಾಗಿದೆ. ಇದು ನಮ್ಮ ಸಂಸ್ಥೆಗಳ ಮೇಲಿನ ಅವಿಶ್ವಾಸಕ್ಕೆ ಕಾರಣವಾಗಿದೆ ಎಂದು ಅಸಮಧಾನ ಹೊರಹಾಕಿದ್ದಾರೆ. ನಮ್ಮ ಪ್ರಜಾಪ್ರಭುತ್ವವನ್ನು ನಾವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ, ನಮ್ಮ ಚುನಾವಣೆಗಳನ್ನು ದುರುಪಯೋಗದಿಂದ ರಕ್ಷಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಅದರಲ್ಲಿ ಹೆಚ್ಚಿನ ಜನರ ಭಾಗವಹಿಸುವಿಕೆಯು, ಭವಿಷ್ಯಕ್ಕಾಗಿ ನಮ್ಮ ಸಮಾಜದ ಅಡಿಪಾಯವನ್ನು ಬಲಪಡಿಸುತ್ತೇವೆ ಎಂದು ರೇನರ್ ಅಭಿಪ್ರಾಯ ಪಟ್ಟಿದ್ದಾರೆ.

ನಾವು ನಮ್ಮ ಪ್ರಜಾಪ್ರಭುತ್ವವನ್ನು 21 ನೇ ಶತಮಾನಕ್ಕೆ ಸರಿಹೊಂದುವಂತೆ ಆಧುನೀಕರಿಸುತ್ತಿದ್ದೇವೆ. 16 ಮತ್ತು 17 ವರ್ಷ ವಯಸ್ಸಿನವರಿಗೆ ಮತದಾನದ ಹಕ್ಕನ್ನು ವಿಸ್ತರಿಸುವ ನಮ್ಮ ಪ್ರಣಾಳಿಕೆಯ ಬದ್ಧತೆಯನ್ನು ತಲುಪಿಸುವ ಮೂಲಕ, ಸಾರ್ವಜನಿಕ ನಂಬಿಕೆಯನ್ನು ಮತ್ತೆ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಯುಕೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ನಾವು ಒಂದು ಪೀಳಿಗೆಯಷ್ಟು ಹೆಜ್ಜೆಯನ್ನು ಮುಂದಿಡುತ್ತಿದ್ದೇವ., ಈ ಮೂಲಕ ನಮ್ಮ ಬದಲಾವಣೆಯ ಯೋಜನೆಯನ್ನು ಬೆಂಬಲಿಸುತ್ತಿದ್ದೇವೆ ಎಂದು ವಸತಿ, ಸಮುದಾಯಗಳು ಮತ್ತು ಸ್ಥಳೀಯ ಆಡಳಿತ ಸಚಿವಾಲಯದ ಪ್ರಜಾಪ್ರಭುತ್ವ ಸಚಿವ ರುಷನಾರ ಅಲಿ ಇದೇ ವೇಳೆ ಪ್ರತಿಪಾದಿಸಿದ್ದಾರೆ.

- Advertisement -

Latest Posts

Don't Miss