ಸ್ಮಾರ್ಟ್ ಸಿಟಿ ಹೆಸರಿನಲ್ಲಿ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಅನುದಾನಗಳು ಬರುವುದು ನಿಜ. ಆದರೆ ಆ ಹಣ ಜನರ ಬದುಕು ಸುಗಮವಾಗಿಸಲು ಎಷ್ಟು ಖರ್ಚಾಗುತ್ತಿದೆ ಎಂಬುದರ ಮೇಲೆ ದೊಡ್ಡ ಪ್ರಶ್ನೆ ಮೂಡಿದೆ. ಯಾಕಂದ್ರೆ ಅಧಿಕಾರಿಗಳ, ಜನಪ್ರತಿನಿಧಿಗಳ ಜೇಬಿಗೆ ಹೋಗಿದ್ದೆ ಜಾಸ್ತಿ.
ಇದು ಹುಬ್ಬಳ್ಳಿ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ. ಆದರೆ ರಿಯಲ್ ಆಗಿ ಇದು ಕೆಸರು ಸಿಟಿ. ಹಾಗೆ ನೋಡಿದ್ರೆ ಗ್ರಾಮ ಪಂಚಾಯತಿಯ ಹಳ್ಳಿ ರಸ್ತೆಗಳು ಎಷ್ಟೋ ಉತ್ತಮವಾಗಿವೆ. ಆದರೆ ಹುಬ್ಬಳ್ಳಿ ರಸ್ತೆಗಳಿಗೆ ಡಾಂಬರ್ ಇರಲಿ, ಮಣ್ಣು ಸಹ ಇಲ್ಲ. ರಸ್ತೆಯಲ್ಲಿ ನಡೆದು ನೋಡಿದರೆ, ಇದು ಗುಂಡಿ ಸಿಟಿ ಅಥವಾ ಕೆಸರು ನಗರ ನಾ ಅನಿಸುತ್ತೆ.
ಇದೀಗ ನಮ್ಮ ರಿಪೋರ್ಟರ್ ತಂಡ ಸ್ಥಳಕ್ಕೆ ಹೋಗಿ ನಡೆಸಿರುವ ರಿಯಾಲಿಟಿ ಚೆಕ್ ಇಲ್ಲಿದೆ – ನೋಡಿ, ಹುಬ್ಬಳಿ ರಸ್ತೆಗಳ ಕರ್ಮಕಾಂಡ ಬಯಲಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ – ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಇದ್ರೂ ಕೂಡ ಇಲ್ಲಿ ರಸ್ತೆಗಳಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲಿ ರಸ್ತೆಗಳಿವೆ ಅನ್ನೋ ಹಾಗಾಗಿದೆ. ಹುಬ್ಬಳ್ಳಿ ವಿವಿಧ ಏರಿಯಾಗಳಲ್ಲಿ ಇಂದಿಗೂ ಸಹ ಮಣ್ಣು ರಸ್ತೆ. ಡಾಂಬರ್‌ಗಿಲ್ಲ ದಾರಿಯೇ ಇಲ್ಲ. ಅಭಿವೃದ್ಧಿ ಸಹ ಆಗಿಲ್ಲ. ಹುಬ್ಬಳ್ಳಿಯ ಶಬರಿ ನಗರ, ಸನ್ ಸಿಟಿ, ಪರ್ಲ್ ಲೇಔಟ್, ನಂದಿನಿ ಲೇಔಟ್ ಗಳಲ್ಲಿ ರಸ್ತೆಗಳಿಲ್ಲದೆ ಜನರಿಗೆ ಸಂಕಷ್ಟ ಎದುರಾಗಿದೆ.
ಇದೇ ಏರಿಯಾದಲ್ಲಿ ಜನಪ್ರತಿನಿಧಿಗಳ ಮನೆಗಳಿದ್ದರೂ ಜಾಣ ಕುರುಡುತನ ತೋರುತ್ತಿದ್ದಾರೆ. ವಾಹನ ಸಂಚಾರ ಇರಲಿ ಹಿರಿಯರಿಗೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ನಡೆದುಕೊಂಡು ಸಹ ಹೋಗಲು ಈ ರಸ್ತೆಗಳಲ್ಲಿ ಅವಕಾಶ ಇಲ್ಲ ಹದಗೆಟ್ಟ ರಸ್ತೆಗಳಿಂದ ಬೇಸತ್ತು ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮೇಲ್ನೋಟಕ್ಕೆ ಪ್ರಗತಿಪರ ಯೋಜನೆಗಳು, ಹೆಸರಿನಲ್ಲಿ ಸ್ಮಾರ್ಟ್ ಸಿಟಿ ಮಿಷನ್, ಅಮೃತ ಯೋಜನೆಗಳು ಆದ್ರೆ ಅಭಿವೃದ್ಧಿಗಳು. ನಗರ ಸಭೆ, ಮಹಾನಗರ ಪಾಲಿಕೆ ಕೋಟ್ಯಂತರ ರೂ. ಹಣ ಸಂಗ್ರಹ ಮಾಡತ್ತೆ ಆದ್ರೆ ತೃಪ್ತಿಕರ ಕೆಲಸ ಮಾತ್ರ ಇಲ್ಲ. ಒಟ್ಟಿನಲ್ಲಿ, ಕಾಗದದಲ್ಲಿ ಮಾತ್ರ ಹುಬ್ಬಳ್ಳಿ ಸ್ಮಾರ್ಟ್ ಸಿಟಿ. ನೆಲದ ಮೇಲೆ – ಗುಂಡಿಗಳ ನಗರ. ಅಧಿಕಾರಿಗಳ ಕಣ್ಣೆದುರು ಈ ದುಸ್ಥಿತಿ ಇದ್ರೂ ಕಣ್ಮುಚ್ಚಿ ಕುಳಿತಿದ್ದಾರೆ.