Friday, July 18, 2025

Latest Posts

ಸಿದ್ದು, ಡಿಕೆಶಿ ಇಬ್ರೂ ಕಿರಾತಕರೇ, ಅವರ ನಡುವೆ ಅಧಿಕಾರಕ್ಕಾಗಿ ಯುದ್ಧ ಶುರುವಾಗಿದೆ : ಸಿಎಂ, ಡಿಸಿಎಂ ವಿರುದ್ಧ ಸಾಮ್ರಾಟ್ ವಾಗ್ದಾಳಿ

- Advertisement -

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಬಗ್ಗೆ ಕಾಂಗ್ರೆಸ್​ ಪಾಳಯದಲ್ಲಿ ಮುಸುಕಿನ ಗುದ್ದಾಟ ಜೋರಾಗಿತ್ತು. ಆದರೆ ಇದಕ್ಕೆಲ್ಲ ಫುಲ್ ಸ್ಟಾಪ್ ನೀಡುವ ನಿಟ್ಟನಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ, ನಾನೇ ಐದು ವರ್ಷ ಅಧಿಕಾರ ನಡೆಸುತ್ತೇನೆ ಎನ್ನುವ ಮೂಲಕ ಚರ್ಚೆಗೆ ಅಂತ್ಯಹಾಡಲು ಪ್ರಯತ್ನಿಸಿದ್ದರು. ಆದರೆ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆಯೇ ವಿಪಕ್ಷ ನಾಯಕ ಆರ್.ಅಶೋಕ್ ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶ ಅಧಿಕಾರ ಹೋಗುವ ಭಯಕ್ಕೆ ಮಾಡುತ್ತಿದ್ದಾರೆ. ಇವರು ನನ್ನಿಂದ ಅಧಿಕಾರ ಕಿತ್ತುಕೊಂಡು ಬಿಡುತ್ತಾರೋ ಅಂತ ಹೆದರಿ ಸಿದ್ದರಾಮಯ್ಯ ಸಮಾವೇಶಕ್ಕೆ ಮುಂದಾಗಿದ್ದಾರೆ. ಹಾಗೆಯೇ ಡಿಕೆ ಶಿವಕುಮಾರ್ ಕೂಡ ಕನಕಪುರದಲ್ಲಿ ಸಮಾವೇಶ ಮಾಡಬೇಕು. ಇದೇ ಕಾರಣಕ್ಕಾಗಿ ಇವರಿಬ್ಬರ ನಡುವೆ ಯುದ್ಧ ಶುರುವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಹೀಗೆ ಒಬ್ಬರಿಗೊಬ್ಬರು ಫೈಟ್ ನೀಡುತ್ತಿರುವಾಗ, ಇಬ್ಬರೂ ಕಿರಾತಕರೇ ಆಗಿದ್ದಾರೆ. ಈ ರಾಜ್ಯದಲ್ಲಿ ಸದ್ಯದಲ್ಲಿರುವ ಮುಖ್ಯಮಂತ್ರಿ ಪರ್ಮನೆಂಟಾ ಅಥವಾ ಟೆಂಪ್ರವರಿನಾ? ಎಂದು ಪ್ರಶ್ನಿಸಿದ್ದಾರೆ. ಈ ಇಬ್ಬರ ಗುದ್ದಾಟದ ನಡುವೆ ಡಿಕೆ ಶಿವಕುಮಾರ್ ಯಾವಾಗ ಒದ್ದು ಅಧಿಕಾರ ಕಿತ್ಕೊಳ್ತಾರೋ, ಅವರ ಗ್ರಹಗತಿಯಲ್ಲಿ ಏನಿದೆ ನೋಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತಿವಿದಿದ್ದಾರೆ.

ಇನ್ನೂ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನಮ್ಮ ರಾಜ್ಯಾಧ್ಯಕ್ಷರು ಒಳ್ಳೆಯ ಅರ್ಥದಲ್ಲಿಯೇ ಹೇಳಿದ್ದಾರೆ. ನಮ್ಮಲ್ಲಿ ಗೋವಿಂದ ಕಾರಜೋಳ್ ಅವರನ್ನು ಡಿಸಿಎಂ ಮಾಡಿದ್ದೇವೆ, ಆದಿವಾಸಿ ಸಮುದಾಯದವರನ್ನು ಎರಡು ಸಲ ರಾಷ್ಟ್ರಪತಿಯಾಗಿಸಿದ್ದೇವೆ. ಆದರೆ ಕಾಂಗ್ರೆಸ್​​​ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎರಡು ಬಾರಿ ಸಿಎಂ ಆಗುವ ಅವಕಾಶ ಬಂದಿತ್ತು. ಆದರೆ ಅದನ್ನು ಅವರಿಗೆ ನೀಡದೆ ದೆಹಲಿಗೆ ಓಡಿಸಿಬಿಟ್ರಲ್ಲ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.

ಆಗ ಧರ್ಮಸಿಂಗ್ ಬದಲು ಖರ್ಗೆ ಸಿಎಂ ಆಗಬೇಕಿತ್ತು. ಈ ಅರ್ಥದಲ್ಲಿ ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ, ನಮ್ಮಲ್ಲಿ ಅವಕಾಶ ಬಂದಾಗ ನಾವು ಮಾಡೇ ಮಾಡ್ತೀವಿ. ಸಿದ್ದರಾಮಯ್ಯ ಯಾವ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ್ದಾರೆ? ಎಮರ್ಜೆನ್ಸಿ ವೇಳೆಯಲ್ಲೂ ಈ ಮನುಷ್ಯ ನಾಪತ್ತೆ. ಈಗ ಆರ್‌ಎಸ್ಎಸ್ ಎಲ್ಲಿ ಹೋಗಿತ್ತು‌, ಬಿಜೆಪಿ ಎಲ್ಲಿ ಹೋಗಿತ್ತು ಅಂತ ಪ್ರಶ್ನೆ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest Posts

Don't Miss