ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರ ಇಲಾಖೆ ಮಹತ್ವದ ಸೂಚನೆ ನೀಡಿದೆ. ಕಡ್ಡಾಯವಾಗಿ 1 ತಿಂಗಳಲ್ಲಿ e-KYC ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತೆ. ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಬಹುಮುಖ್ಯ ಸೂಚನೆಗಳನ್ನು ನೀಡಿದ್ದಾರೆ.
ಪ್ರತಿಯೊಬ್ಬ ಪಡಿತರ ಚೀಟಿದಾರರು ತಮ್ಮ ಮಾಹಿತಿ ಸರಿಯಾಗಿ ದಾಖಲಿಸಬೇಕು. ಅಕ್ರಮವಾಗಿ ಹೊಂದಿದ ಕಾರ್ಡ್‌ಗಳನ್ನು ರದ್ದು ಮಾಡುವುದು ಹಾಗೂ ನಿಜವಾದ ಫಲಾನುಭವಿಗಳಿಗೆ ಮಾತ್ರ ಸರ್ಕಾರಿ ಸೌಲಭ್ಯ ಒದಗಿಸಲು ಈ ಇ-ಕೆವೈಸಿ ಅತ್ಯಂತ ಅವಶ್ಯಕವಾಗಿದೆ. ಇದರಿಂದ ಕಾರ್ಡ್‌ಗಳ ಡುಪ್ಲಿಕೇಟು, ಅಕ್ರಮ ಹಕ್ಕುದಾರರು, ಮತ್ತು ನಕಲಿ ಹೆಸರಿನಲ್ಲಿ ಸೌಲಭ್ಯ ಪಡೆಯುವವರ ವಿರುದ್ಧ ಕಾರ್ಯವೈಖರಿ ನಡೆಸಲು ಸಹಾಯವಾಗುತ್ತದೆ.
ಎಲ್ಲಾ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆನ್ನು ಪೂರ್ಣಗೊಳಿಸಲು ಸರ್ಕಾರವು ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಕಾಲಾವಕಾಶದ ಒಳಗೆ ನೀವು e-KYC ಮಾಡಿಸದೇ ಇಂದರೆ ನಿಮ್ಮ ಪಡಿತರ ಕಾರ್ಡ್ ಅನ್ನು ರದ್ದು ಮಾಡಲಾಗುತ್ತೆ.
ಪ್ರತಿ ಜಿಲ್ಲೆಯಲ್ಲಿ ಇ-ಕೆವೈಸಿ ಬಗ್ಗೆ ಜನಜಾಗೃತಿ ಮೂಡಿಸಲು ವಿಶೇಷ ಸಮಿತಿಗಳನ್ನು ರಚಿಸಬೇಕು. ಇ-ಕೆವೈಸಿ ಪ್ರಕ್ರಿಯೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಅನಗತ್ಯವಾಗಿ ಅಥವಾ ಅಕ್ರಮವಾಗಿ ಪಡಿತರ ಕಾರ್ಡ್ ವಿತರಣೆ ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಕೂಡಾ ನೀಡಲಾಗಿದೆ.
ಇ-ಕೆವೈಸಿ ಪ್ರಕ್ರಿಯೆ ಹೇಗೆ ಮಾಡಬೇಕು? ಅಂತ ಸಂಕ್ಷಿಪ್ತವಾಗಿ ನೋಡೋದಾದ್ರೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತೆಗೆದುಕೊಂಡು ತಕ್ಷಣವೇ ನಿಮ್ಮ ಹತ್ತಿರದ ಪೌರ ಸೇವಾ ಕೇಂದ್ರ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ. ಬಯೋಮೆಟ್ರಿಕ್ ಪರಿಶೀಲನೆ ನಂತರ ನಿಮ್ಮ ಇ-ಕೆವೈಸಿ ದೃಢೀಕರಣವಾಗುತ್ತದೆ.
ವರದಿ : ಲಾವಣ್ಯ ಅನಿಗೋಳ