Monday, July 21, 2025

Latest Posts

ಮೇಕೆದಾಟು ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ!?

- Advertisement -

ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ವಿರುದ್ಧ, ಸಚಿವ ಕೃಷ್ಣ ಭೈರೇಗೌಡ ಗುಡುಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್​​ ಯುವ ಪರ್ವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ರು. ಈ ವೇಳೆ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಮ್ಮನ್ನು ಗೆಲ್ಲಿಸಿದ್ರೆ 1 ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇವೆ ಅಂತಾ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳು ಹೇಳಿದ್ರು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಪಡೆದಿವೆ. ಸರ್ಕಾರ ಬಂದು 1 ವರ್ಷ 3 ತಿಂಗಳಾಯ್ತು. ಇವತ್ತಿನವರೆಗೂ ಸಚಿವರಾಗಲಿ, ಸಂಸದರಾಗಲಿ ಬಾಯಿ ಬಿಟ್ಟು ಮಾತನಾಡಿದ್ದೀರಾ ಅಂತಾ ಪ್ರಶ್ನಿಸಿದ್ರು.

ಮೇಕೆದಾಟು ಯೋಜನೆ ಬಗ್ಗೆ ಉಸಿರು ಬಿಡ್ತಿಲ್ಲ, ಇದು ರಾಜ್ಯಕ್ಕೆ ಮಾಡಿದ ದ್ರೋಹ ಅಲ್ವಾ? ಪೆನ್ನು, ಅಧಿಕಾರ, ಸರ್ಕಾರ ಎಲ್ಲಾ ಇದೆ. ಆದರೂ ಯಾಕಾಗಿ ಸಹಿ ಮಾಡಿಸುತ್ತಿಲ್ಲ. ಇದಕ್ಕೆ ನೀವು ಉತ್ತರ ಕೊಡಬೇಕು. ಕನ್ನಡಿಗರು ನಿಮಗೆ ವೋಟು ಹಾಕಿದ್ದಾರೆ. ರಾಜ್ಯಕ್ಕೆ ದ್ರೋಹ, ಅನ್ಯಾಯ ಮಾಡಲು ದೆಹಲಿಗೆ ಕಳುಹಿಸಿದ್ದಾರಾ ಅಂತಾ ಪ್ರಶ್ನಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡಬೇಕು. ಇವರು 53 ಪೈಸೆ ಕೊಡಲಾಗದ ನಾಲಾಯಕ್‌ಗಳು. ಕೇಂದ್ರದ ಜೊತೆ ಮಾತನಾಡೋಕೆ ಧಮ್, ತಾಕತ್ ಇಲ್ಲ. ಇವರೆಲ್ಲರೂ ಕರ್ನಾಟಕದ ದ್ರೋಹಿಗಳು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಗಟ್ಟಿಯಾಗಿ ಮಾತಾಡ್ತಾರೆ. ನಮ್ಮ ನೀರು, ನಮ್ಮ ಪಾಲು ಅಂತಾ ಕೇಳಿದ್ದಕ್ಕೆ, ಇಡಿ, ಸಿಬಿಐ ಛೂ ಬಿಟ್ಟು ಕೇಸ್ ಹಾಕಿಸುತ್ತಾರೆ. ಹೀಗಂತ ಬಿಜೆಪಿ-ಜೆಡಿಎಸ್​ ವಿರುದ್ಧ ಸಚಿವ ಕೃಷ್ಣಾ ಭೈರೇಗೌಡ ಗುಡುಗಿದ್ದಾರೆ.

- Advertisement -

Latest Posts

Don't Miss