Monday, July 21, 2025

Latest Posts

ಅಕ್ರಮ ಸಂಬಂಧಕ್ಕೆ ಗಂಡನಿಗೆ ಚಟ್ಟ ಕಟ್ಟಿದ ಕಿರಾತಕಿ! : ಕೊಲೆಯ ಪ್ಲ್ಯಾನ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

- Advertisement -

ನವದೆಹಲಿ : ಹೆಂಡತಿ ತನ್ನ ಗಂಡನನ್ನು ತುಂಡು ತುಂಡು ಮಾಡಿ ಡ್ರಮ್​​ನಲ್ಲಿ ತುಂಬಿದ್ದ ಪ್ರಕರಣವು ಎಲ್ಲರನ್ನೂ ಶಾಕ್​​ಗೆ ಒಳಗಾಗಿಸಿತ್ತು. ಅಲ್ಲದೆ ನವ ವಿವಾಹಿತ ಯುವತಿ ತನ್ನ ಗಂಡನ ಕೊಲೆಗೆ ಸುಪಾರಿ ನೀಡಿದ್ದ ರಾಜಾ ರಘುವಂಶಿ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಇದೀಗ ಅದೇ ಮಾದರಿಯ ಪ್ರಕರಣವೊಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಇನ್ನೂ ದೆಹಲಿಯ ಸುಷ್ಮಿತಾ ಎನ್ನುವ ಮಹಿಳೆಯು ತನ್ನ ಗಂಡ 36 ವರ್ಷದ ಕರಣ್ ದೇವ್ ಎನ್ನುವವರನ್ನು ತನ್ನ ಅಕ್ರಮ ಸಂಬಂಧಕ್ಕಾಗಿ ಕೊಲೆ ಮಾಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಸುಷ್ಮಿತಾಗೆ ಗಂಡನ ಸಹೋದರ ಸಂಬಂಧಿ ಜೊತೆಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮಿಬ್ಬರ ನಡುವೆ ಅಡ್ಡಿಯಾಗಿದ್ದ ಗಂಡನ ಕಥೆ ಮುಗಿಸಲು ಸಂಚು ಹೂಡಿದ್ದಳು. ಆರಂಭದಲ್ಲಿ ಗಂಡನ ಸಾವಿನ ಬಗ್ಗೆ ಕಟ್ಟು ಕಥೆಗಳನ್ನು ಕಟ್ಟಿದ್ದ ಮಹಿಳೆಯು, ವಿದ್ಯುತ್ ಶಾಕ್​​ನಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಳು. ಆದರೆ ಪ್ರಕರಣದ ತನಿಖೆಯ ಬೆನ್ನತ್ತಿದ್ದ ಪೊಲೀಸರಿಗೆ ಆತನ ಪತ್ನಿಯ ಪಾತ್ರದ ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ತನ್ನ ಗಂಡ ವಿದ್ಯುತ್ ಅವಘಡದಿಂದ ಗಾಯಗೊಂಡಿದ್ದಾನೆ ಎಂದು ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಆತನು ಮರಣ ಹೊಂದಿದ್ದಾಗಿ ವೈದ್ಯರು ಘೋಷಿಸಿದ್ದರು. ಮಗ ದಿಢೀರ್ ಆಗಿ ಸತ್ತಿದ್ದಾನೆ, ಇದರಲ್ಲಿ ಯಾವುದೇ ಮರಣೋತ್ತರ ಪರೀಕ್ಷೆ ಬೇಡ ಎಂದಿದ್ದರು. ಆದರೆ ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಪಟ್ಟು ಹಿಡಿದು ಪೋಸ್ಟ್ ಮಾರ್ಟಂ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೆ ಕರಣ್ ದೇವ್ ಪತ್ನಿ ಕಿರಾತಕಿ ಸುಷ್ಮಿತಾ ಹಾಗೂ ಆತನ ಸೋದರ ಸಂಬಂಧಿ ವಿರೋಧಿಸಿದ್ದರು. ಇವರಿಬ್ಬರ ವರ್ತನೆಯನ್ನು ಗಮನಿಸಿದ್ದ ಕರಣ್​ದೇವ್ ತಮ್ಮ ಕುನಾಲ್ ಅಣ್ಣನ ಕೊಲೆಯ ಬಗ್ಗೆ ಶಂಕಿಸಿದ್ದ. ಅಲ್ಲದೆ ಸುಷ್ಮಿತಾ ಹಾಗೂ ಆತನ ನಡುವಿನ ಇನ್ಸ್ಟಾಗ್ರಾಮ್ ಚಾಟ್​​ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದನು.

ಅಲ್ಲದೆ ಪ್ರಕರಣದಲ್ಲಿ ಮುಖ್ಯವಾಗಿ ಇಬ್ಬರೂ ಸೇರಿ ಮೊದಲು ಕರಣ್‌ಗೆ 15 ನಿದ್ರೆ ಮಾತ್ರೆಗಳನ್ನು ಊಟದಲ್ಲಿ ಬೆರೆಸಿದ್ದರು. ಆ ಮಾತ್ರೆಗಳು ಕೆಲಸ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಗೂಗಲ್‌ನಲ್ಲಿ ಹುಡುಕಿದ್ದರು. ಕರಣ್ ಪ್ರಜ್ಞಾಹೀನನಾದ ನಂತರ, ಸುಷ್ಮಿತಾ ಪ್ರಿಯಕರನಿಗೆ ತನಗೆ ನಿದ್ರೆ ಬರುತ್ತಿದೆ ಎಂದು ಹೇಳಿದಳು. ನಂತರ, ಆತನಿಗೆ ವಿದ್ಯುತ್ ಶಾಕ್ ನೀಡಿದರು. ಇದು ಆಕಸ್ಮಿಕ ಸಾವು ಎಂದು ಬಿಂಬಿಸಲು ಹೀಗೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೆ ಈ ಪ್ರಕರಣವೂ ಕೂಡ ದೆಹಲಿಯಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಎಲ್ಲಾ ಆರೋಪಿಗಳಿಗೂ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

- Advertisement -

Latest Posts

Don't Miss