ಕರ್ನಾಟಕ ಟಿವಿ ಹಾಸನ : ಚನ್ನರಾಪಟ್ಟಣದಲ್ಲಿ ಪಿಎಸ್ ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಇಡೀ ರಾಜ್ಯವನ್ನ ದಂಗುಬಡಿಸಿದೆ.. ಪಿಎಸ್ ಐ ಆಯ್ಮಹತ್ಯೆಗೆ ಶರಣಾಗಲು ಯಾರು ಕಾರಣ..? ಅವರ ಮೇಲೆ ಒತ್ತಡ ಹಾಕಿದ್ಯಾರು..? ಅನ್ನುವಅನುಮಾನಗಳು ಶುರುವಾಗಿದೆ. ರಾಜಕೀಯ ವ್ಯಕ್ತಿಗಳು ಅಥವಾ ಪೊಲೀಸ್ ಇಲಾಖೆಯ ದೊಡ್ಡ ಅಧಿಕಾರಿಗಳ ಪಾತ್ರವಿರುತ್ತೆ ಅನ್ನೋದು ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತದೆ.. ಇದೀಗ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸುವಂತೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಒತ್ತಾಯ ಮಾಡಿದೆ. ಈ ಸಂಬಂಧ ಪ್ರತಿಭಟನೆ ಮಾಡಲು ಸಹ ಮುಂದಾಗಿದ್ದಾರೆ.. ಈ ಕೂಡಲೇ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸುವಂತೆ ಚನ್ನರಾಯಪಟ್ಟಣ ಘಟಕದಅಧ್ಯಕ್ಷ ಶ್ರೀನಿವಾಸ್ ಒತ್ತಾಯ ಮಾಡಿದ್ದಾರೆ.
ಕರ್ನಾಟಕ ಟಿವಿ, ಹಾಸನ



