Tuesday, July 22, 2025

Latest Posts

ವಾಹನ ಸವಾರರೇ ಎಚ್ಚರ! : ಈ ತಪ್ಪು ಮಾಡಿದ್ರೆ ನಿಮ್ಮ DL ಕ್ಯಾನ್ಸಲ್!

- Advertisement -

ಟ್ರಾಫಿಕ್‌ ನಿಯಮಗಳಲ್ಲಿ ಈಗಾಗಲೇ ಬಹಳಷ್ಟು ಬದಲಾವಣೆಯನ್ನು ತಂದಿರುವ ಸಾರಿಗೆ ಸಚಿವಾಲಯ ಈಗ ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಸಣ್ಣ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ವಿಧಿಸಲು ಮತ್ತು ಡಿಎಲ್‌ ಕ್ಯಾನ್ಸಲ್‌ ಮಾಡಲು ಇದೀಗ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.

ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವಾಗ ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸಂಚಾರ ನಿಯಮ ಉಲ್ಲಂಘಿಸುವಂತಹ ವಾಹನಗಳ ಚಾಲಕರಿಗೆ ದುಪ್ಪಟ್ಟು ದಂಡ ವಿಧಿಸುವ ಬಗ್ಗೆ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.

ಇದರೊಂದಿಗೆ ಎಲ್ಲಾ ಚಾಲಕರಿಗೆ ಸಂಚಾರ ನಿಯಮಗಳ ಅನುಸರಣೆ ಅಥವಾ ಉಲ್ಲಂಘನೆ ಆದರೆ ಧನಾತ್ಮಕ ಅಥವಾ ಋಣಾತ್ಮಕ ಅಂಕಗಳನ್ನು ನೀಡುವ ಪದ್ಧತಿ ಆರಂಭಿಸಲು ಕೂಡ ಯೋಜನೆ ಹಾಕಿಕೊಳ್ಳುತ್ತಿದೆ. ಮಕ್ಕಳನ್ನು ಕರೆದುಕೊಂಡು ವಾಹನ ಚಾಲನೆ ಮಾಡುವ ಪೋಷಕರು, ಶಾಲಾ ಬಸ್ ಗಳ ಚಾಲಕರನ್ನು ರಸ್ತೆ ನಿಯಮ ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದಷ್ಟೆ ಅಲ್ಲದೆ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದವರ ಚಾಲನಾ ಪರವಾನಿಗೆ ಅಂದರೆ ಡಿಎಲ್ ರದ್ದು ಮಾಡುವುದು ಮತ್ತು ಧನಾತ್ಮಕ ಅಂಕ ಪಡೆದವರಿಗೆ ವಿಮಾ ಪ್ರೀಮಿಯಂ ಕಡಿತ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಚಾಲನಾ ಪರವಾನಿಗೆ ನವೀಕರಣ ಮಾಡುವಾಗ ಪರೀಕ್ಷೆ ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಈ ರೀತಿಯಾಗಿ ರಸ್ತೆ ಸಾರಿಗೆ ಸಚಿವಾಲಯ ಸುರಕ್ಷತೆಯ ದೃಷ್ಟಿಯಲ್ಲಿ ಈ ನಿಯಮ ತರಲು ಮುಂದಾಗಿದೆ. ಸೋ ಇನ್ಮೇಲೆ ವಾಹನ ಬಲಾಯಿಸುವಾಗ ನಿಮ್ಮ ಜೊತೆ ಮಕ್ಕಳಿದ್ದರೆ ಹುಷಾರಗಿ ಇರುವುದು ಒಳ್ಳೆಯದು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss