Friday, August 8, 2025

Latest Posts

Dr RajKumar – ಕತ್ತಲ ರಾತ್ರಿಯ ಕರಾಳ ಅಧ್ಯಾಯಕ್ಕೆ ಈಗ 25ವರ್ಷ

- Advertisement -

ಬೆಂಗಳೂರು : ವರ ನಟ ಡಾ. ರಾಜ್‌ ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹಿರಿಸಿದ್ದ ದಿನಕ್ಕೆ ಇಂದು 25 ವರ್ಷಗಳಾಗಿವೆ. ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದ ಕಾಲವಾಗಿದ್ದ 2000ನೇ ಇಸ್ವಿಯಲ್ಲಿ ನಡೆದಿದ್ದ ಈ ಘಟನೆಯೂ ಸಾಕಷ್ಟು ಸುದ್ದಿಯಾಗಿತ್ತು. ಇಡೀ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಂದಿನ ರಾಜ್ಯ ಸರ್ಕಾರ ನೆರೆಯ ತಮಿಳುನಾಡು ಸರ್ಕಾರದೊಂದಿಗೆ ರಾಜ್‌ ಬಿಡುಗಡೆಗಾಗಿ ಹಲವು ರೀತಿಯಲ್ಲಿ ಪ್ರಯತ್ನಿಸಿತ್ತು.

ರಾಜ್‌ಕುಮಾರ್‌ ಅಪಹರಣದ ದಿನ ಭೀಮನ ಅಮಾವಾಸ್ಯೆಯಿತ್ತು. ಹೀಗಾಗಿ ಅಂದು ಜುಲೈ 30 ರ ಕತ್ತಲ ರಾತ್ರಿಯಲ್ಲಿಯೇ ಖ್ಯಾತ ನಟನ ಕಿಡ್ನ್ಯಾಪ್‌ ಆಗಿತ್ತು. ತಮ್ಮ ಹುಟ್ಟೂರಾಗಿದ್ದ ಗಾಜನೂರಿನಲ್ಲಿ ಊಟ ಮಾಡಿ ವಿಶ್ರಾಂತಿ ಮಾಡುತ್ತಿದ್ದ ವೇಳೆಯೇ ವೀರಪ್ಪನ್‌ ಟೀಂ ಅವರನ್ನು ಅಪಹರಿಸಿತ್ತು.

ಕತ್ತಲೆಯಲ್ಲಿಯೇ ತನ್ನ 15 ಜನರ ತಂಡದೊಂದಿಗೆ ಬಂದಿದ್ದ ಕಾಡುಗಳ್ಳ, ಸರ್‌ ಬೇಕು ಎಂದು ಹೇಳಿದ್ದ. ಬಳಿಕ ಒಂದು ಕ್ಯಾಸೆಟ್‌ ಅನ್ನು ಡಾ. ರಾಜ್‌ ಕುಮಾರ್‌ ಪತ್ನಿ ಪಾರ್ವತಮ್ಮ ಅವರ ಕೈಗೆ ನೀಡಿದ್ದ. ಅದರಲ್ಲಿ ತನಗೆ ಬೇಕಾಗಿದ್ದ ಹಣದ ಬಗ್ಗೆ ಹೇಳಿಕೊಂಡಿದ್ದ. ಅಲ್ಲದೆ ಅಪಹರಣದ ಕಾರಣವನ್ನೂ ತಿಳಿಸಿದ್ದ.

ಇದನ್ನೂ ಓದಿ : ಆಂಧ್ರದಲ್ಲಿ ಲಿಂಬಾವಳಿ ಆಪ್ತನ ಬರ್ಬರ ಹತ್ಯೆ!

ರಾಜ್‌ ಅಪಹರಣದ ಬಳಿಕ ಅವರ ಬಿಡುಗಡೆಗಾಗಿ ವೀರಪ್ಪನ್‌ ಸಾಕಷ್ಟು ಶಾಕಿಂಗ್‌ ಬೇಡಿಕೆಗಳನ್ನು ಇಟ್ಟಿದ್ದನು. ಅದರಲ್ಲಿ ತಮಿಳನ್ನೂ ಎರಡನೇ ಆಡಳಿತ ಭಾಷೆಯನ್ನಾಗಿಸಬೇಕೆಂದು ಒತ್ತಾಯಿಸಿದ್ದ. ಇದಲ್ಲದೆ ಇನ್ನೂ ಹಲವು ದೊಡ್ಡ ಮಟ್ಟದ ಡಿಮ್ಯಾಂಡ್‌ಗಳನ್ನ ಆತ ಸರ್ಕಾರದ ಮುಂದೆ ಇಟ್ಟಿದ್ದ. ಈ ರೀತಿಯಾಗಿ ವೀರಪ್ಪನ್‌ ಬೇಡಿಕೆಗಳು ಜನರನ್ನು ಹಾಗೂ ಸರ್ಕಾರವನ್ನು ದಂಗು ಬಡಿಸಿದ್ದವು.

ವೀರಪ್ಪನ್‌ ರಾಜ್ ಕುಮಾರ್‌ ಅವರನ್ನು ಅಪಹರಿಸಿದ ಬಳಿಕ ಅವರ ಬಿಡುಗಡೆಗಾಗಿ ಸತತ ಮೂರು ತಿಂಗಳುಗಳ ಕಾಲ ಸರ್ಕಾರ ಪ್ರಯತ್ನಿಸಿತ್ತು. ಆದರೆ ದಿನಕಳೆದಂತೆ ಕಾಡಿನಲ್ಲಿದ್ದ ರಾಜ್‌ ಕುಮಾರ್ ಅವರ ಆರೋಗ್ಯ ಹದಗೆಡುತ್ತಿತ್ತು.‌ ಕಾಡಿಗೆ ವೈದ್ಯೆಯೊಬ್ಬರನ್ನು ಕಳುಹಿಸಿ ರಾಜ್‌ಕುಮಾರ್‌ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಅದರಲ್ಲಿ ರಾಜ್‌ ಇಷ್ಟು ದಿನಗಳ ಕಾಲ ಈ ವಾತಾವರಣದಲ್ಲಿ ಜೀವಂತ ಉಳಿದಿದ್ದೆ ಹೆಚ್ಚು ಎಂಬ ಆಘಾತಕಾರಿ ವಿಚಾರವನ್ನು ಆ ವೈದ್ಯೆ ನೀಡಿದ್ದರು,

ಬಳಿಕ ಕಾಡುಗಳ್ಳ ವೀರಪ್ಪನ್‌ ರಾಜ್‌ ಕುಮಾರ್‌ ಅವರ ಪ್ರಾಣಕ್ಕೆ ಧಕ್ಕೆಯಾದರೆ ನಾನು ಉಳಿಯುವುದಿಲ್ಲ ಎನ್ನುವುದನ್ನು ಅರಿತುಕೊಂಡಿದ್ದ. ಈ ಹಿನ್ನೆಲೆಯಲ್ಲಿ 2000ನೇ ಇಸ್ವಿಯ ನವೆಂಬರ್‌ 18ರಂದು ರಾಜ್‌ ಕುಮಾರ್‌ ಅವರನ್ನು ಬಿಡುಗಡೆ ಮಾಡಿದ್ದ. ಹೀಗೆ ಕತ್ತಲ ರಾತ್ರಿಯ ಕರಾಳ ಅಧ್ಯಾಯಗಳಲ್ಲಿ ಜುಲೈ 30 ಕೂಡ ಇಂದಿಗೂ ರಾಜ್‌ ಅಪಹರಣದ ಕಥೆಯನ್ನು ಬಿಚ್ಚಿಡುವಂತೆ ಮಾಡುತ್ತದೆ.

- Advertisement -

Latest Posts

Don't Miss