‘ಹೃತೀಕ್ಷಾ ಸುರಕ್ಷಾʼ ಮಾದರಿಯಾದ ಸಚ್ಚಿದಾನಂದ
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ 3 ವರ್ಷದ ಹೃತೀಕ್ಷಾ ಸಾವನ್ನಪ್ಪಿದ ಘಟನೆ ಘೋರ ದುರಂತ. ಆ ಮನಕಲಕುವ ದೃಶ್ಯ, ಹೆತ್ತವರ ಕಣ್ಣೀರಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ‘ಹೃತೀಕ್ಷಾ ಸುರಕ್ಷಾ’ ಅನ್ನೋ ಹೆಸರಲ್ಲಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಶ್ರೀರಂಗಪಟ್ಟಣದ ಬಿಜೆಪಿ ಮುಖಂಡ ಎಸ್. ಸಚ್ಚಿದಾನಂದ ಅವರು ಉಚಿತವಾಗಿ 10 ಸಾವಿರ ಹೆಲ್ಮೆಟ್ ವಿತರಿಸಿ ಮಾದರಿಯಾಗಿದ್ದಾರೆ.
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಶ್ರೀ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನ 5ನೇ ವರ್ಷದ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ವಾರ್ಷಿಕೋತ್ಸವದ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭ ಕೂಡ ನಡೀತು. ಇದೇ ವೇಳೆ ಕಾರ್ಯಕ್ರಮದಲ್ಲಿ ಹೆಲ್ಮೆಟ್ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಹುಟ್ಟುಹಬ್ಬ ಇತ್ತೀಚಿಗೆ ಅವರ ಅಭಿಮಾನಿಗಳೆಲ್ಲಾ ಅದ್ದೂರಿಯಾಗಿ ಆಚರಿಸಿದ್ದರು. ಈ ಕಾರಣಕ್ಕೆ ಶ್ರೀರಂಗಪಟ್ಟಣ ಬಿಜೆಪಿ ಮುಖಂಡರಾಗಿರುವ ಎಸ್ ಸಚ್ಚಿದಾನಂದ ಅವರು ಸ್ವಾಮೀಜಿಗಾಗಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಆರ್ ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿ 1 ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಅವರಿಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರದಲ್ಲಿ ಸಂಗೀತ ನಿರ್ದೇಶಕರು, ಗಾಯಕರು ಆಗಿರುವ ವಿ. ಹರಿಕೃಷ್ಣ ಕೂಡ ಗೌರವ ಸಮರ್ಪಣೆ ನಡೆಯಿತು. ಕಳೆದ ಮೇ 26 ರಂದು ಪೊಲೀಸರು ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಅನ್ನು ತಡೆಯಲು ಮುಂದಾದಾಗ 3 ವರ್ಷದ ಮಗು ಹೃತೀಕ್ಷಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು. ಇದನ್ನು ಸ್ಮರಿಸಿಕೊಳ್ಳುತ್ತಾ ಈ ರೀತಿ ಘಟನೆಗಳು ಮುಂದುವರೆಯಾಬಾರದು. ಎಲ್ಲರೂ ಸುರಕ್ಷಿತರಾಗಿರಬೇಕು ಎಂದು ಸಚ್ಚಿದಾನಂದ ಅವರು ʼಹೃತೀಕ್ಷಾ ಸುರಕ್ಷಾʼ ಎಂಬ ಹೆಸರಿನಲ್ಲಿ ಅಭಿಯಾನ ನಡೆಸಿ 10 ಸಾವಿರ ಹೆಲ್ಮೆಟ್ ನೀಡಿದರು.
ಸ್ವಾಗತ ಭಾಷಣ ಮಾಡಿ ಮಾತನಾಡಿದ ಎಸ್ ಸಚ್ಚಿದಾನಂದ ಅವರು, ನನ್ನ ತಂದೆಯೂ ಅಪಘಾತದಲ್ಲಿ ತೀರಿಕೊಂಡಿದ್ದರು. ಹೃತೀಕ್ಷಾ ಎಂಬ ಪುಟ್ಟ ಬಾಲಕಿಯು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಅವತ್ತೇ ನಾನು ವಾಗ್ದಾನ ಮಾಡಿದ್ದೆ 10 ಸಾವಿರ ಹೆಲ್ಮೆಟ್ ಗಳನ್ನು ಕೋಡುತ್ತೇನೆ ಎಂದು. ಹಾಗಾಗಿ ನಿರ್ಮಲಾನಂದ ಸ್ವಾಮೀಜಿಗಳು ಮತ್ತು ಆರ್ ಅಶೋಕ್ ಅವರ ನೇತೃತ್ವದಲ್ಲಿ ಕೊಡಿಸುತ್ತಿದ್ದೇನೆ ಎಂದರು.
ವೇದಿಕೆ ಮೇಲೆ ಹೆಣ್ಣು ಮಕ್ಕಳಿಗೆ ಮತ್ತು ಪುರುಷರಿಗೆ ಹೆಲ್ಮೆಟ್ ವಿತರಣೆ ಮಾಡಿ ಮಾತನಾಡಿದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು, ಅಲ್ಪ ಸ್ವಲ್ಪ ಇತಿಹಾಸದ ತಿಳುವು ಇರುವವರೂ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರನ್ನು ಬಿಟ್ಟು ಮಾತನಾಡುವುದಕ್ಕೆ ಸಾಧ್ಯವಿಲ್ಲ ಎಂದರು. ಶ್ರೀ ಮಠದ ನೆಚ್ಚಿನ ಯುವಕ ಸಚ್ಚಿ ಜನ ಸೇವೆ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಹೆಸರಿಗೆ ತಕ್ಕ ಹಾಗೇ ಕೆಲಸ ಮಾಡುತ್ತಿದ್ದಾನೆ, ಉಚಿತ ವಿದ್ಯಾರ್ಥಿ ನಿಲಯವನ್ನು ಆದಿಚುಂವನಗಿರಿಗೆ ಕಟ್ಟಿಸಿ ಕೊಡಲು ಮುಂದೆ ನಿಂತು ಶ್ರಮಿಸಿದವರು ಸಚ್ಚಿದಾನಂದ ಎಂದು ಹಾಡಿ ಹೊಗಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಂಡ್ಯ ಅಂದರೆ ಇಂಡಿಯಾ. ಈ ಮಂಡ್ಯ ಪ್ರಖ್ಯಾತಿಗೆ ಕಾರಣ ಕೆಆರ್‌ಎಸ್ ಡ್ಯಾಂ, ಆ ಡ್ಯಾಂ ಕಟ್ಟಲು ನಾಲ್ವಡಿ ಒಡೆಯರ್ ಅವರು ತಮ್ಮ ಮನೆಯಲಿದ್ದ ಒಡವೆಗಳನ್ನು ಅಡ ಇಟ್ಟು ಕಟ್ಟಿದ್ದರು. ಅವರ ಕೊಡುಗೆಗಳು ಅಪಾರ. ಈಗ ಅಭಿವೃದ್ದಿಗಳನ್ನು ಮಾಡದೆ ನಾನು ನಾನು ಎನ್ನುವ ಅಹಂಕಾರ ಎಲ್ಲಿಗೆ ಹೊರಟು ಹೊಗುತ್ತದೆ. ನಾನು ಯಾರಿಗೂ ಯಾರನ್ನು ಹೋಲಿಕೆ ಮಾಡುವುದಿಲ್ಲ ನನಗೆ ಅಷ್ಟು ತಲೆ ಕೆಟ್ಟಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಒಂದು ರೀತಿ ತಿರುಗೇಟು ಕೊಟ್ಟಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ನಾರಯಣಗೌಡ ಅವರು ಮಾತನಾಡಿದರು. ಶ್ರೀ ಎನ್ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನಿಂದ ಮಾಡುತ್ತಿರುವ ಈ ಸಮಾಜಮುಖಿ ಕೆಲಸಗಳಿಗೆ ಶುಭ ಹಾರೈಸಿದ್ದರು. ಪಕ್ಷದ ಹಿರಿಯ ನಾಯಕ ಆರ್ ಅಶೋಕ್ ಅಣ್ಣ ನವರು ಮರಗಳನ್ನು ಕಡಿವುದಕ್ಕೆ ಕಡಿವಾಣ ಹಾಕಿದ ಕರ್ನಾಡಕದಲ್ಲಿ ಏಕೈಕ ವ್ಯಕ್ತಿ ಅಶೋಕಣ್ಣ ಎಂದು ಹಾಡಿ ಹೊಗಳಿದರು.
ಬೈಟ್: ನಾರಾಯಣಗೌಡ , ಮಾಜಿ ಸಚಿವ
ಶ್ರೀ ಎನ್ ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನ ಈ ಕಾರ್ಯಕ್ರಮದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ರೈತ ಮುಖಂಡರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಇದು ಬರೀ ಸನ್ಮಾನ ಕಾರ್ಯಕ್ರಮವಾಗದೆ, ಜನ ಸೇವೆ ಕಾರ್ಯಕ್ರಮವಾಗಿ 10 ಸಾವಿರ ಹೆಲ್ಮೆಟ್ ವಿತರಣೆ ಮಾಡಿದ್ದು ವಿಶೇಷ. ಮಂಡ್ಯದಲ್ಲೊಂದು ಮಾದರಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು ಅಂದರೂ ತಪ್ಪಾಗುವುದಿಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




