ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಕೆಲವರ ಕೆಟ್ಟ ಕಾಮೆಂಟ್‌ಗಳ ವಿರುದ್ಧ ನಟಿ ರಮ್ಯಾ ಅವರು ದೂರು ದಾಖಲಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ ರಮ್ಯಾ ಅವರು ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ.
ದೂರು ಕೊಟ್ಟ ಬಳಿಕ ರಮ್ಯಾ ಅವರು ಮಾತನಾಡಿದರು. ರೇಣುಕಾಸ್ವಾಮಿ ಬದಲು ನನ್ನನ್ನು ಕೊಲೆ ಮಾಡಬೇಕಿತ್ತು ಎಂಬ ಒಂದು ಕಾಮೆಂಟ್ ಅನ್ನು ರಮ್ಯಾ ನೆನಪಿಸಿಕೊಂಡರು. ಈ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳು ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳನ್ನು ಹಾಕಿರೋ ವಿಚಾರವನ್ನು ನಟಿ ಬಹಿರಂಗಪಡಿಸಿದರು.
ರೇಣುಕಾಸ್ವಾಮಿ ಮಾಡಿದ್ದಕ್ಕೂ ಅವರ ಅಭಿಮಾನಿಗಳು ಮಾಡುತ್ತಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ನಾನು ಅರಿತುಕೊಂಡೆ. ಹಾಗಾಗಿ ಇದನ್ನ ಸುಮ್ನೆ ಬಿಡಬಾರದು ಅಂತ ನಾನು ಇವತ್ತು ಬಂದು ಕಮಿಷನರ್ ಗೆ ಕಂಪ್ಲೇಂಟ್ ಕೊಟ್ಟಿದ್ದೇನೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳೋದಾಗಿ ಕಮಿಷನರ್ ತಿಳಿಸಿದ್ದಾರೆ.
ಟ್ರೋಲ್ ಮಾಡುವವರು ಕುಟುಂಬಗಳು ಮತ್ತು ಮಕ್ಕಳನ್ನು ಸಹ ಅದರಲ್ಲಿ ಎಳೆಯುತ್ತಾರೆ ಎಂದು ರಮ್ಯಾ ಟೀಕಿಸಿದರು. ಮತ್ತೊಂದೆಡೆ, ಸಾಮಾಜಿಕ ಮಾಧ್ಯಮದಲ್ಲಿ ತನಗೆ ಸಿಕ್ಕಿರುವ ಬೆಂಬಲದಿಂದ ಆಶ್ಚರ್ಯವಾಗಿದೆ ಎಂದು ನಟಿ ವ್ಯಕ್ತಪಡಿಸಿದ್ದಾರೆ.
ನಟಿ ರಮ್ಯಾ ದೂರು ಕೊಟ್ಟು ಬಂದ ಬಳಿಕ 5 ಪ್ರಮುಖ ಪ್ರಶ್ನೆಯನ್ನು ಎತ್ತಿದ್ದಾರೆ. ಆ 5 ಪಂಚಿಂಗ್ ಪ್ರಶ್ನೆಗಳು ಯಾವುವು ಅಂತ ನೋಡೋದಾದ್ರೆ..
ಮೊದಲನೇ ಪ್ರಶ್ನೆ 01. ‘ರೇಣುಕಾಸ್ವಾಮಿಗೂ ಹಾಗು ದರ್ಶನ ಅಭಿಮಾನಿಗಳು ಏನು ವ್ಯತ್ಯಾಸ?’
ನಾನು ಇನ್ಸ್ಟಾಗ್ರಾಮ್ ಅಲ್ಲಿ ಶೇರ್ ಮಾಡಿದ ಬಳಿಕ ಟ್ರೊಲ್ ಮಾಡೋಕೆ ಶುರು ಹಚ್ಕೊಂಡ್ರು ನಾನು ಯಾವತ್ತೂ ಈ ಮಟ್ಟಕ್ಕೆ expiriance ಮಾಡಿರಲಿಲ್ಲ. ಈ ರೇಣುಕಾಸ್ವಾಮಿಗೂ ದರ್ಶನ್ ಫ್ಯಾನ್ಸ್ ಮಾಡಿದ ಮೆಸೇಜ್ ಗು ಏನು ವ್ಯತ್ಯಾಸ ಇಲ್ಲ. ನನಗೆ ಈ ರೀತಿಯಾಗಿ ಕಳ್ಸಿದ್ದಾರೆ ಅಂದ್ರೆ ಸಾಮಾನ್ಯ ಹೆಣ್ಣು ಮಕ್ಕಳಿಗೆ ಯಾವ ರೀತಿಯಾಗಿ ಮೆಸೇಜ್ ಮಾಡಬಹುದು ಅಂತ ಹೇಳಿದ್ದಾರೆ.
2ನೇ ಪ್ರಶ್ನೆ.. ‘ನೀವು ಕಾನೂನು ಕೈಗೆ ತೆಗೆದುಕೊಂಡು ಸಮಾಜಕ್ಕೆ ನೀವು ಏನು ಸಂದೇಶ ಕೊಡ್ತಿದ್ದಿರಾ?’ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೀತಿದೆ. ಕೊಲೆಗಳು ನಡೀತಾ ಇವೆ. ಹಾಗಂತ ನಾವೇ ಕಾನೂನು ಕೈಗೆತ್ತಿಕೊಂಡ್ರೆ ಕಾನೂನು ಯಾಕಿದೆ, ಯಾಕೆ ಇರ್ಬೇಕು ಅಂತ ಕೇಳಿದ್ದಾರೆ..
3ನೇ ಪ್ರಶ್ನೆ.. ‘ಯಶ್ – ಸುದೀಪ್ ಸ್ಟಾರ್ ವಾರ್ ನಡೆದಾಗ ಹೆಂಡ್ತಿ ಮಕ್ಕಳ ಬಗ್ಗೆ ಕೆಟ್ಟದ್ದಾಗಿ ಪೋಸ್ಟ್ ಮಾಡಿದ್ದರು’
ಹೌದು ನಾನು ೨ ವರ್ಷದ ಹಿಂದೇನೆ ಪೋಸ್ಟ್ ಒಂದನ್ನ ಹಾಕಿದ್ದೆ. ರಾಕಿಂಗ್ ಸ್ಟಾರ್ ಯಶ್ ಹಾಗು ಕಿಚ್ಚ ಸುದೀಪ್ ಫ್ಯಾನ್ ವಾರ್ ನಡಿಬೇಕಾದ್ರೆ ಅವರ ಹೆಂಡ್ತಿ ಮಕ್ಕಳ ಬಗ್ಗೆ ಬಹಳ ಕೆಟ್ಟದ್ದಾಗಿ ಪೋಸ್ಟ್ ಮಾಡಿದ್ದರು. ನಾನು ಅಂದೇ ಈ ಬಗ್ಗೆ ಮಾತನಾಡಿದ್ದೆ ಎಂದಿದ್ದಾರೆ
4ನೇ ಪ್ರಶ್ನೆ.. ‘ವಿಜಯಲಕ್ಷ್ಮಿ ಮತ್ತು ರಕ್ಷಿತಾ ನನ್ನ ಬಗ್ಗೆ ಮಾತನಾಡಿದ್ದಾರೆ ಅಂತ ನಂಗೆ ಅನಿಸುತ್ತಿಲ್ಲ’.
ಇನ್ನು ನಟ ದರ್ಶನ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ನಟಿ ರಕ್ಷಿತಾ ಪ್ರೇಮ್ ಕೂಡ ಈ ಬಗ್ಗೆ ನಿಗೂಢವಾದ ಪೋಸ್ಟ್ ಒಂದನ್ನ ಹಂಚಿಕೊಂಡಿದ್ರು. ಆದ್ರೆ ರಕ್ಷಿತಾ ಅವರು ಹಾಕಿರುವ ಪೋಸ್ಟ್ ಯಾರಿಗಾಗಿ ಸಂದೇಶವನ್ನು ಹಾಕಿದ್ದಾರೆ ಅನ್ನೋದು ಊಹಾಪೋಹವಾಗಿತ್ತು. ಹಾಗಾಗಿ ವಿಜಯಲಕ್ಷ್ಮಿ ಮತ್ತು ರಕ್ಷಿತಾ ನನ್ನ ಬಗ್ಗೆ ಮಾತನಾಡಿದ್ದಾರೆ ಅಂತ ನಂಗೆ ಅನಿಸುತ್ತಿಲ್ಲ ಅಂತ ನಟಿ ರಮ್ಯಾ ಹೇಳಿದ್ದಾರೆ.
5ನೇ ಪ್ರಶ್ನೆ.. ‘ಎಲ್ಲ ಸೆಲೆಬ್ರೆಟಿಗಳು ಹೆದರಿಕೊಂಡಿದ್ದಾರೆ ‘
ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಸೆಲೆಬ್ರೆಟಿಗಳು ಒಂದಾಗಬೇಕು. ಆದರೆ ಅವ್ರು ಹೆದರಿಕೊಂಡಿದ್ದರೋ ಅಥವಾ ಟಾರ್ಗೆಟ್ ಆಗ್ತಿವೋ, ಫ್ಯಾನ್ ವಾರ್ಸ್ ಆಗತ್ತೆ ಅಂತ ಸೈಲೆನ್ಸ್ ಇಸ್ ಬೆಸ್ಟ್ ಅನ್ನೋ ಹಾಗೆ ಸುಮ್ಮನಿದ್ದಾರೆ. ಈ ರೀತಿ ಸುಮ್ಮನಿರೋದ್ರಿಂದಾನೆ ಇಷ್ಟೆಲ್ಲ ಆಗ್ತಾಯಿದೆ ಅಂತ ಹೇಳಿಕೊಂಡಿದ್ದಾರೆ.
ಸದ್ಯ ರಮ್ಯಾ ಅವರು ತಮಗೆ ಕೆಟ್ಟದ್ದಾಗಿ ಮೆಸೇಜ್ ಮಾಡಿದವರ ಮೇಲೆ ದೂರು ದಾಖಲಿಸಿ ಬಂದಿದ್ದು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅಂತ ಕಾದು ನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ


