ಧರ್ಮಸ್ಥಳದ ಅಸಹಜ ಸಾವು ಪ್ರಕರಣದ ನಿಗೂಢತೆ ಇನ್ನೂ ಮುಂದುವರಿದಿದೆ. 1ನೇ ಪಾಯಿಂಟ್‌ನಲ್ಲಿ 2.5 ಅಡಿಯಷ್ಟು ಭೂಮಿ ಅಗೆದಾಗ, ಹರಿದ ಕೆಂಪು ಬಣ್ಣದ ಬ್ಲೌಸ್ ಸಿಕ್ಕಿದೆ. ಜೊತೆಗೆ 2 ಐಡಿ ಕಾರ್ಡ್, ಡೆಬಿಡ್, ಪಾನ್ ಕಾರ್ಡ್ ಪತ್ತೆಯಾಗಿವೆ. ಈ ಬಗ್ಗೆ ವಕೀಲರು ಪತ್ರಿಕಾ ಪ್ರಕಟಣೆ ರಿಲೀಸ್ ಮಾಡಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ತಾಯಿ, ಸುಜಾತಾ ಭಟ್ ಪರ ವಕೀಲರುin ಈ ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ.
2ನೇ ಪ್ರೆಸ್‌ನೋಟ್‌ನಲ್ಲಿ, ಯಾವ ಸ್ಥಳದಲ್ಲಿ ಎಷ್ಟು ಶವ ಹೂಳಲಾಗಿದೆ ಅನ್ನೋ ಮಾಹಿತಿ ನೀಡಿದ್ದಾರೆ. ದೂರುದಾರ ತೋರಿದ ಸ್ಥಳಗಳಲ್ಲಿ, ಒಟ್ಟು 58ಕ್ಕೂ ಹೆಚ್ಚು ಶವಗಳನ್ನು ಹೂಳಲಾಗಿದೆಯಂತೆ. 1 ಮತ್ತು 3ನೇ ಪಾಯಿಂಟ್‌ನಲ್ಲೇ ತಲಾ 2 ಶವಗಳು ಹೂಳಲಾಗಿದೆ ಅಂತಾ ದೂರುದಾರ ಹೇಳ್ತಿದ್ದಾನೆ.
ಪ್ರಕರಣ ತನಿಖಾ ಹಂತದಲ್ಲಿ ಇರುವಾಗಲೇ, ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈಗಾಗಲೇ ಮಾರ್ಕ್ ಮಾಡಿರುವ ಎಲ್ಲಾ ಸ್ಥಳಗಳಲ್ಲಿ, ಎಷ್ಟು ಶವಗಳಿವೆ ಅನ್ನೋದನ್ನ ವಿವರಣೆ ಕೊಟ್ಟಿದ್ದಾರೆ.
ಬೇರೆ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಶವಗಳಿವೆ ಅಂತಾ ಹೇಳಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.
ಇನ್ನು, ಮೊದಲ ಜಾಗದಲ್ಲಿ 15 ಅಡಿ ಅಗಲ – 8 ಅಡಿ ಆಳ,
2ನೇ ಜಾಗದಲ್ಲಿ 6 ಅಡಿ ಅಗಲ-6 ಅಡಿ ಆಳ, 3ನೇ ಜಾಗದಲ್ಲಿ 5 ಅಡಿ ಅಗಲ – 6 ಅಡಿ ಆಳ, 4ನೇ ಪಾಯಿಂಟ್‌ನಲ್ಲಿ 6 ಅಡಿ ಆಳ ಮತ್ತು 5ನೇ ಜಾಗದಲ್ಲೂ 5 ಅಡಿ ಅಗಲ-6 ಅಡಿ ಆಳಷ್ಟು ಅಗೆಯಲಾಗಿದೆ. ಅದರೆ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ.
ಆದರೆ, ಮೊದಲ 3 ಸ್ಥಳಗಳಲ್ಲಿ 6 ಮೃತದೇಹಗಳು ಹೂಳಿರೋದಾಗಿ ದೂರುದಾರ ಹೇಳಿದ್ದಾನಂತೆ. 13ನೇ ಪಾಯಿಂಟ್‌ನಲ್ಲಿ ಅತೀ ಹೆಚ್ಚು ಶವಗಳಿವೆ ಅಂತಾ ಹೇಳ್ತಿದ್ದಾನೆ.
ಒಂದೊಂದು ಗುರುತುಗಳಲ್ಲಿ ಅಗೆಯಲು, ಒಂದೊಂದು ಗಂಟೆ ಸಮಯವನ್ನು ಅಧಿಕಾರಿಗಳು ನಿಗದಿ ಮಾಡಿಕೊಂಡಿದ್ದಾರೆ. ಜೊತೆಗೆ ಕಾರ್ಯಾಚರಣೆ ಸ್ಥಳಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ರು.
ಒಟ್ನಲ್ಲಿ ಧರ್ಮಸ್ಥಳದ ಪ್ರಕರಣ ತನಿಖಾ ಹಂತದಲ್ಲಿ ಇರುವಾಗಲೇ, ವಕೀಲರು ಪ್ರೆಸ್‌ನೋಟ್ ರಿಲೀಸ್ ಮಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಜೊತೆಗೆ 2ನೇ ದಿನದ ಕಾರ್ಯಾಚರಣೆ ಅಂತ್ಯವಾಗಿದ್ದು, ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ.