ತಮಿಳುನಾಡು ಬಿಜೆಪಿ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನಟಿ-ರಾಜಕಾರಣಿ ಖುಷ್ಬೂ ಸುಂದರ್ ಅವರ ಆಯ್ಕೆ ಆಗಿದೆ. ಇಷ್ಟು ದಿನ ಉಪಾಧ್ಯಕ್ಷರಾಗಿದ್ದ ನಾರಾಯಣನ್ ತಿರುಪತಿ ಅವರನ್ನು, ಬಿಜೆಪಿ ವಕ್ತಾರರನ್ನಾಗಿ ನಿಯೋಜಿಸಲಾಗಿದೆ.
2010ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಖುಷ್ಬೂ, ಡಿಎಂಕೆ ಪಕ್ಷ ಸೇರಿದ್ರು. 2014ರಲ್ಲಿ ಡಿಎಂಕೆ ಬಿಟ್ಟು ಕಾಂಗ್ರೆಸ್ ಸೇರಿದ್ರು. ಅಲ್ಲಿಯೂ ಸಕ್ಸಸ್ ಕಾಣದ ಖುಷ್ಬೂ ಸುಂದರ್, 2020ರಲ್ಲಿ ಕಮಲ ತೆಕ್ಕೆಗೆ ಜಾರಿದ್ರು. 2023ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಖುಷ್ಬೂ, 2024ರಲ್ಲಿ ರಾಜೀನಾಮೆ ನೀಡಿದ್ರು. ಇದೀಗ ತಮಿಳುನಾಡು ರಾಜ್ಯ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಖುಷ್ಬೂ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡೋದಾಗಿ ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಪಿ ಸಂಘಟನೆಯತ್ತ ಗಮನಹರಿಸುತ್ತೇವೆ. ದಕ್ಷಿಣ ಚೆನ್ನೈನಲ್ಲಿ ಹೆಚ್ಚು ಫೋಕಸ್ ಮಾಡುವುದು ಮುಖ್ಯ ಅಜೆಂಡಾ ಅಂತಾ ಹೇಳಿದ್ದಾರೆ.
ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ, ಟಿವಿಕೆ ಮುಖ್ಯಸ್ಥ ಕಂ ನಟ ವಿಜಯ್‌ಗೆ, ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ಬಿಜೆಪಿ-ಎಐಎಡಿಎಂಕೆ ಒಕ್ಕೂಟ ಸೇರಿಕೊಳ್ಳುವಂತೆ ಆಫರ್ ಕೊಟ್ಟಿದ್ದಾರೆ. ಆತನನ್ನು ತಮ್ಮನಂತೆ ಭಾವಿಸುತ್ತೇನೆ. ನಿಮ್ಮ ಯೋಚನೆ ಮತ್ತು ಯೋಜನೆಗಳು ನಮ್ಮ ಜೊತೆ ಸೇರಿದ್ರೆ, ಡಿಎಂಕೆ ಪಕ್ಷವನ್ನು ಸೋಲಿಸಬಹುದು. ನೀವು ನಮ್ಮ ಜೊತೆಯಾಗಿ. ಇದೊಂದು ಒಳ್ಳೆಯ ನಿರ್ಧಾರ ಅಂತಾ ನಾನು ಭಾವಿಸುತ್ತೇನೆ. ಹೀಗಂತ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ.
ನಟಿ ಖುಷ್ಬೂ ಕಾಲ್ಗುಣದಿಂದ, ಭವಿಷ್ಯದಲ್ಲಿ ತಮಿಳುನಾಡಿನಲ್ಲಿ ಕಮಲ ಅರಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.