Monday, August 4, 2025

Latest Posts

ಮಾಲೆಂಗಾವ್‌ ಸ್ಫೋಟ ಪ್ರಕರಣಕ್ಕೆ ತಾರ್ಕಿಕ ಅಂತ್ಯ

- Advertisement -

17 ವರ್ಷಗಳ ಬಳಿಕ ಮಾಲೆಂಗಾವ್‌ ಸ್ಫೋಟ ಪ್ರಕರಣದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ, 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಬಿಜೆಪಿ ಮಾಜಿ ಸಂಸದೆ ಪ್ರಗ್ಯಾ ಠಾಕೂರ್‌, ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌‌ ಪ್ರಸಾದ್‌, ಶ್ರೀಕಾಂತ್ ಪುರೋಹಿತ್‌ ಸೇರಿ ಎಲ್ಲರನ್ನು ನಿರ್ದೋಷಿಗಳೆಂದು ಹೇಳಿದೆ.

ಸಾಕ್ಷ್ಯಾಧಾರ ಕೊರತೆ ಇರುವುದರಂದ, ಪ್ರಕರಣವನ್ನು ಮುಂದುವರೆಸಲು ಸಾಧ್ಯವಿಲ್ಲ. ನೈತಿಕ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಅಂತಾ ವಿಶೇಷ ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.

2008ರ ಸೆಪ್ಟೆಂಬರ್‌ 29ರಂದು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ, ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಮಲೆಂಗಾವ್‌ ನಗರದಲ್ಲಿ ಘಟನೆ ಸಂಭವಿಸಿತ್ತು. ಸ್ಫೋಟಕ ಜೋಡಿಸಲಾಗಿದ್ದ ಬೈಕ್ ಸ್ಫೋಟಗೊಂಡು, 6 ಮಂದಿ ಮೃತಪಟ್ಟಿದ್ರು. 100ಕ್ಕೂ ಅಧಿಕ ಜನರು ತೀವ್ರವಾಗಿ ಗಾಯಗೊಂಡಿದ್ರು. ಈ ಪ್ರಕರಣವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸುತ್ತಿತ್ತು. ಬಳಿಕ 2011ರಲ್ಲಿ ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು.

ಸ್ಫೋಟಕ್ಕೆ ಬಳಸಲಾದ ಬೈಕಿನ ಮಾಲೀಕರಾದ ಪ್ರಗ್ಯಾ ಠಾಕೂರ್‌. ಮಿಲಿಟರಿ ಗುಪ್ತಚರ ವಿಭಾಗದಲ್ಲಿ ನಿಯೋಜನೆಗೊಂಡಿದ್ದ ಸೇನಾಧಿಕಾರಿ, ಲೆಫ್ಟಿನೆಂಟ್ ಕರ್ನಲ್‌ ಪುರೋಹಿತ್‌, ಬೈಕಿಗೆ ಸ್ಫೋಟಕ ಜೋಡಿಸಲು ನೆರವಾಗಿದ್ದಾರೆ. ಮತ್ತು ಹಿಂದೂ ಸಂಘಟನೆಯಾದ ಅಭಿನವ್‌ ಭಾರತ್‌, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಅಂತಾ ಆರೋಪಿಸಲಾಗಿತ್ತು. ಆದ್ರೀಗ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಯಾವುದೇ ಬಲವಾದ ದಾಖಲೆಗಳು ಇಲ್ಲ. ಹೀಗಂತ ವಿಶೇಷ ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಾ 7 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಹಿಂದೂ ಭಯೋತ್ಪಾದಕಿ ಕಳಂಕದಿಂದ, ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಮುಕ್ತರಾಗಿದ್ದಾರೆ.

- Advertisement -

Latest Posts

Don't Miss