Monday, August 4, 2025

Latest Posts

ಮೈಸೂರಿಗೆ ಎಂಟ್ರಿ ಸಜ್ಜಾದ ದಸರಾ ಗಜಪಡೆ

- Advertisement -

ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಪ್ರಾರಂಭವಾಗಿದೆ. ನಾಡಹಬ್ಬದ ಪ್ರಮುಖ ಆಕರ್ಷಣೆ ಗಜಪಯಣ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ನಡೆದಿದ್ದು, ಆಗಸ್ಟ್‌ ೪ ರಂದು ೧೪ ಆನೆಗಳು ಅರಮನೆಗೆ ಎಂಟ್ರಿ ಕೊಡಲಿವೆ.

ನಾಗರಹೊಳೆ ವೀರನಹೊಸಹಳ್ಳಿ ಗ್ರಾಮದ ಬಳಿ ದಸರಾ ಗಜಪಯಣಕ್ಕೆ ಸಕಲ ಸಿದ್ಧತೆ ವೀಕ್ಷಿಸಿ ಮಾತನಾಡಿದರುವ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಐ.ಬಿ. ಅವರು, ಮೈಸೂರು ದಸರಾ ಕಾರ್ಯಕ್ರಮದಲ್ಲಿ ಗಜಪಯಣ ಪ್ರಮುಖ ಘಟ್ಟವಾಗಿದೆ. ವೀರನಹೊಸಹಳ್ಳಿ ವಲಯದಂಚಿನಲ್ಲಿ ಬೃಹತ್ ವೇದಿಕೆ ನಿರ್ಮಾಣ ಪ್ರಗತಿಯಲ್ಲಿದ್ದು, ಗಜಪಯಣ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೊಂಡಂತೆ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಸಂಪುಟ ಹಾಗೂ ಗಣ್ಯರು, ಸ್ಥಳಿಯರು ಸೇರಿದಂತೆ ಅಂದಾಜು 4 ರಿಂದ 5 ಸಾವಿರ ಭಾಗವಹಿಸುವ ಅಂದಾಜಿದೆ. ಸರ್ವರೂ ಕುಳಿತು ಕಾರ್ಯಕ್ರಮ ವೀಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವೀರನಹೊಸಹಳ್ಳಿ ವಲಯದ ನಾಗರಹೊಳೆ ಪ್ರವೇಶದ್ವಾರದ ಬಳಿ ಎಂದಿನಂತೆ ಗಜಪಯಣಕ್ಕೆ ಗಣ್ಯರು ಚಾಲನೆ ನೀಡಿದ ಬಳಿಕ ಆನೆಗಳನ್ನು ಸುರಕ್ಷಿತವಾಗಿ ಮೈಸೂರಿಗೆ ಲಾರಿಗಳಲ್ಲಿ ಕರೆತರಲಾಗುವುದು. ಆನೆ ಸಾಗಿಸುವ ಸಂಬಂಧ ಇಲಾಖೆ ಟೆಂಡ‌ರ್ ಕರೆದಿದ್ದು, ಆ. 1 ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.

ಪೂಜಾ ಕೈಂಕರ್ಯವನ್ನು ಮೈಸೂರಿನ ಪುರೋಹಿತ ಪ್ರಹ್ಲಾದ್ ಮತ್ತು ತಂಡದವರು ನೆರವೇರಿಸುವರು. ಆನೆಯೊಂದಿಗ ಮೈಸೂರಿಗೆ ಬರುವ ಮಾವುತ ಮತ್ತು ಕಾವಾಡಿಗರ ಕುಟುಂಬಕ್ಕೆ ಈಗಾಗಲೇ ತಾತ್ಕಾಲಿಕ ವಾಸ್ತವ್ಯಕ್ಕೆ ಜಲ ನಿರೋಧಕ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಎರಡು ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss