Tuesday, August 5, 2025

Latest Posts

ರೇಪಿಸ್ಟ್‌ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ

- Advertisement -

ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿದೆ. ಆಗಸ್ಟ್‌ 1ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ದೋಷಿ ಅಂತಾ ತೀರ್ಪು ನೀಡಿತ್ತು. ಇಂದು ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ, ವಾದ-ಪ್ರತಿವಾದವನ್ನು ಕೋರ್ಟ್‌ ಆಲಿಸಿತ್ತು. ಇದಾದ ಬಳಿಕ ಪ್ರಜ್ವಲ್ ರೇವಣ್ಣ ಅವರಿಗೆ ಜೀವನ ಪರ್ಯಂತ ಸೆರೆವಾಸ ಅನುಭವಿಸುವಂತಾಗಿದೆ.

ಸರ್ಕಾರದ ಪರ ವಕೀಲರ ವಾದ!

1) ಕೋರ್ಟ್‌ ವಿಚಾರಣೆ ವಿಳಂಬ ಮಾಡುವ ಯತ್ನ ನಡೀತಿದೆ
2) ಹೇಳಿಕೊಳ್ಳಲು ಆಗದ ರೀತಿಯಲ್ಲಿ ಅತ್ಯಾಚಾರ ಎಸಗಿದ್ದಾನೆ
3) ತನ್ನ ಸ್ಥಾನ ದುರುಪಯೋಗ ಮಾಡಿಕೊಂಡಿದ್ದಾನೆ
4) ಒಪ್ಪಿಗೆ ಇಲ್ಲದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ
5) ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆಯನ್ನೇ ಕೊಡಬೇಕು
6) ಅಪರಾಧಿಯ ವಕ್ರ ಮನಸ್ಥಿತಿಯನ್ನು ಗಮನದಲ್ಲಿ ಇಡಬೇಕು
7) ಕಡಿಮೆ ಶಿಕ್ಷೆ ಇದ್ದಾಗ ಶಿಕ್ಷೆ ಪ್ರಮಾಣವನ್ನು ಸುಪ್ರೀಂ ಹೆಚ್ಚಿಸಿದೆ
9) ಶಿಕ್ಷೆ ಪ್ರಮಾಣ ಹೆಚ್ಚಿಸಿದಂತಹ ಹಲವಾರು ಉದಾಹರಣೆಗಳಿವೆ
10) ಬ್ಲಾಕ್‌ಮೇಲ್‌ ಉದ್ದೇಶದಿಂದ ವೀಡಿಯೋ ಮಾಡಿದ್ದಾನೆ
11) ವೀಡಿಯೋವನ್ನೇ ಅಸ್ತ್ರವನ್ನಾಗಿ ಆರೋಪಿ ಬಳಸಿಕೊಂಡಿದ್ದಾನೆ
12) ಆರೋಪಿ ವಿರುದ್ಧ ಹಲವು ಅತ್ಯಾಚಾರ ಆರೋಪ ಇದೆ
13) ಹೆದರಿಸಿ ಸಾಕ್ಷಿ ತಿರುಚುವ ಯತ್ನಗಳೂ ಆಗಿವೆ
14) ಅಪರಾಧಿ ತುಂಬಾ ಪ್ರಭಾವಿಯಾಗಿದ್ದಾನೆ
15) ಆರೋಪಿಗೆ ಯಾವುದೇ ಕನಿಕರ ತೋರಿಸಬಾರದು
16) ಸಂಸದರೇ ಇಂಥಾ ಕೃತ್ಯ ಎಸಗಿದ್ರೆ ಗರಿಷ್ಠ ಶಿಕ್ಷೆ ನೀಡಬೇಕು
17) ಜನ ಆಯ್ಕೆ ಮಾಡಿದ್ದು ಏಕೆ? ಈತ ಏನು ಮಾಡಿದ್ದಾನೆ?
18) ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲಿ ಸಂಸದನಾದ
19) ಈತನಿಗೆ ವಿಧಿಸುವ ಶಿಕ್ಷೆ ಜನರಿಗೆ ಮಾದರಿಯಾಗಬೇಕು
20) 1 ಕೇಸ್‌ನಲ್ಲಿ 25 ಲಕ್ಷ ದಂಡ ವಿಧಿಸಿದ ಉದಾಹರಣೆಗಳಿವೆ
21) ವೀಡಿಯೋ ವೈರಲ್‌ ಆದ್ಮೇಲೆ ಸಂತ್ರಸ್ತೆ ಕೆಲಸಕ್ಕೆ ಹೋಗದಂತೆ ಆಗಿದೆ
22) ಪ್ರಜ್ವಲ್‌ ರೇವಣ್ಣ ಬಡವನಲ್ಲ, ಕರೋಡ್‌ಪತಿಯಾಗಿದ್ದಾನೆ
23) ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗವನ್ನು ಸಂತ್ರಸ್ತೆಗೆ ನೀಡಬೇಕು
24) ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದ್ರೆ ಸಂತ್ರಸ್ತೆಗೆ ನ್ಯಾಯ ದೊರಕಿದಂತೆ ಆಗುತ್ತೆಹೀಗಂತ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ರು. ಇದಾದ ಬಳಿಕ ರೇಪಿಸ್ಟ್‌ ಪ್ರಜ್ವಲ್‌ ರೇವಣ್ಣ ಪರ, ಹಿರಿಯ ವಕೀಲೆ ನಳಿನಾ ಮಾಯಗೌಡ ವಾದ ಮಂಡಿಸಿದ್ದಾರೆ. ಪ್ರಜ್ವಲ್‌ ಪರ ಹಿರಿಯ ವಕೀಲೆಯ ವಾದವೇನು ಅನ್ನೋದನ್ನ ನೋಡೋದಾದ್ರೆ..

ಪ್ರಜ್ವಲ್‌ ಪರ ಹಿರಿಯ ವಕೀಲೆ ವಾದ

1) ಚುನಾವಣೆ ವೇಳೆಯೇ ವಿಡಿಯೋ ವೈರಲ್‌ ಏಕೆ?
2) ರಾಜಕೀಯ ದುರುದ್ದೇಶದಿಂದ ಪಿತೂರಿ ಮಾಡಲಾಗಿದೆ
3) ಹಣ ಮಾಡಲೆಂದೇ ಪ್ರಜ್ವಲ್‌ ರಾಜಕಾರಣಕ್ಕೆ ಬಂದಿಲ್ಲ
4) ಯುವ ಸಂಸದನಾಗಿ ಪ್ರಜ್ವಲ್‌ ಒಳ್ಳೆ ಕೆಲಸಗಳನ್ನೂ ಮಾಡಿದ್ದಾನೆ
5) ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡಿಲ್ಲ
6) ತನ್ನ ಸಂಸಾರದೊಂದಿಗೆ ಎಂದಿನಂತೆ ಜೀವನ ನಡೆಸುತ್ತಿದ್ದಾಳೆ
7) ಸಂತ್ರಸ್ತೆಗೆ ಈಗಾಗಲೇ ಮೊಮ್ಮಗ ಇದ್ದಾನೆ
8) ಆತ ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ
9) ಆತನಿಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ
10) ಪ್ರಜ್ವಲ್‌ ಯುವಕನಾಗಿದ್ದು, ಭವಿಷ್ಯವನ್ನು ಗಮನದಲ್ಲಿ ಇಡಬೇಕು
11) ಕನಿಷ್ಠ ಶಿಕ್ಷೆಯನ್ನು ನೀಡಿ
12) ಇವರ ತಾತಾ ಮಾಜಿ ಪ್ರಧಾನಮಂತ್ರಿಗಳು
13) ಕುಟುಂಬದ ಮೂರನೇ ತಲೆಮಾರಿನ ರಾಜಕಾರಣಿ
14) ಪ್ರಜ್ವಲ್‌ ರಾಜಕೀಯ ಭವಿಷ್ಯ ಸಹಿಸದೇ ಈ ರೀತಿ ಮಾಡಿದ್ದಾರೆ
15) ಈಗಾಗಲೇ ಪ್ರಜ್ವಲ್‌ ತೇಜೋವಧೆ ಆಗಿದೆ
16) ಸಂತ್ರಸ್ತೆಗಿಂತ ಸಂಸದರಿಗೇ ಹೆಚ್ಚು ಹಾನಿಯಾಗಿದೆ

ನ್ಯಾಯಾಧೀಶರ ಎದುರು ರೇಪಿಸ್ಟ್‌ ಗೋಳಾಟ

ತಾಯಿ ವಯಸ್ಸಿನ ಮಹಿಳೆಯೊಬ್ರು, ಪರಿಪರಿಯಾಗಿ ಕೇಳಿಕೊಂಡ್ರೂ ಬಿಟ್ಟಿರಲಿಲ್ಲ. ನಿಮ್ಮ ತಾತಾ, ತಂದೆಗೂ ಊಟ ಬಡಿಸಿದ್ದೇನೆ. ಬಿಟ್ಟುಬಿಡು ಅಂದ್ರೂ, ಕನಿಕರ ತೋರಿರಲಿಲ್ಲ. ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಜ್ವಲ್ ರೇವಣ್ಣ ಅವರು ತಾನು ಮಾಡಿದ ತಪ್ಪಿಗೆ ನ್ಯಾಯಾಲಯದ ಕಟಕಟೆಯಲ್ಲಿ ನಿಂತು, ಬಿಕ್ಕಿ ಬಿಕ್ಕಿ ಅಳುವಂತಾಗಿದೆ.

ಆಗಸ್ಟ್‌ 1ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಜ್ವಲ್‌ ರೇವಣ್ಣ ದೋಷಿ ಅಂತಾ ತೀರ್ಪು ನೀಡಿದೆ. ಇಂದು ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಏನಾದರೂ ಹೇಳುವುದು ಇದೆಯಾ ಅಂತಾ ಪ್ರಜ್ವಲ್‌ನನ್ನ ಕೇಳಿದ್ರು. ಈ ವೇಳೆ, ಅಳುತ್ತಲೇ ರೇಪಿಸ್ಟ್‌ ಪ್ರಜ್ವಲ್‌ ರೇವಣ್ಣ ಮಾತನಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಹೇಳಿದ್ದೇನು?

1) ನಾನು ಯಾವುದೇ ಅಪರಾಧ ಮಾಡಿಲ್ಲ
2) ನಾನು ರಾಜಕೀಯಕ್ಕೆ ಬಂದಿದ್ದೇ ದೊಡ್ಡ ತಪ್ಪು
3) ಹಾನಸದಲ್ಲಿ ನನ್ನ ಹೆಸರು ಕೆಡಿಸುವ ಕೆಲಸವಾಗಿದೆ
4) ನನಗೆ ಹಾಸನದಲ್ಲಿ ಒಳ್ಳೆಯ ಹೆಸರಿತ್ತು
5) ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀನಿ
6) ಯಾರೂ ನೇರವಾಗಿ ದೂರು ಕೊಟ್ಟಿಲ್ಲ
7) ಎಲೆಕ್ಷನ್‌ಗೂ ಮೊದಲೇ ಪಿತೂರಿ ಮಾಡಿದ್ದಾರೆ
8) ಚುನಾವಣೆಗೆ 6 ದಿನ ಮುಂಚಿತವಾಗಿ ವೀಡಿಯೋ ಬಿಟ್ಟಿದ್ದಾರೆ
9) 6 ತಿಂಗಳಿಂದ ತಂದೆ ತಾಯಿ ಮುಖ ನೋಡಿಲ್ಲ
10) ನನ್ನ ರೆಕಾರ್ಡ್‌ ಪರಿಶೀಲಿಸಿ.. ನಾನು ಮೆರಿಟ್ ವಿದ್ಯಾರ್ಥಿ
11) ನಾನು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದ್ದೇನೆ
12) ನಾನು ಮಾಡಿದ ಒಂದೇ ತಪ್ಪೆಂದರೆ ರಾಜಕೀಯದಲ್ಲಿ ಬೇಗ ಬೆಳೆದದ್ದು
13) ಅದೇ ನನಗೆ ಇಂದು ಮುಳುವಾಗಿದೆ
14) ನಾನೇ ರೇಪ್‌ ಮಾಡಿದ್ದರೆ ಯಾರಿಗೂ ಏಕೆ ಹೇಳಲಿಲ್ಲ?
15) ಸಂತ್ರಸ್ತೆ ಸ್ವಯಂಪ್ರೇರಿತವಾಗಿ ಏಕೆ ದೂರು ನೀಡಲಿಲ್ಲ?
16) ನಾನು ಯಾವುದೇ ತಪ್ಪು ಮಾಡಿಲ್ಲ
17) ನಾನು ಯಾರ ಮೇಲೂ ಆರೋಪ ಮಾಡಲ್ಲ
18) ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ
19) ನನ್ನ ಕುಟುಂಬವನ್ನು ಟಾರ್ಗೆಟ್‌ ಮಾಡಿದ್ದಾರೆ
20) ಶಿಕ್ಷೆ ಪ್ರಮಾಣ ಕಡಿಮೆ ಮಾಡಿ

ಅಂತಾ ಪ್ರಜ್ವಲ್‌ ರೇವಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಪಾಪದ ಕೊಡ ತುಂಬಿದಾಗ ಕಣ್ಣೀರು ಕೂಡ ಸಹಾಯಕ್ಕೆ ಬರೋದಿಲ್ಲ. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದ ಮೇಲೆ ಅವಮಾನ, ಶಿಕ್ಷೆ ಸಹಿಸಿಕೊಳ್ಳಲೇ ಬೇಕು. ಇದು ಪ್ರಜ್ವಲ್‌ ರೇವಣ್ಣ ಪಾಲಿಗೆ ಅಕ್ಷರಶಃ ನಿಜವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ನೀಚ ಕೆಲಸ ಮಾಡುವ ಎಲ್ಲರಿಗೂ, ಪ್ರಜ್ವಲ್‌ ರೇವಣ್ಣ ಸ್ಥಿತಿ ಉದಾಹರಣೆಯಾಗಿದೆ.

ತಾಯಿ ವಯಸ್ಸಿನ ಮಹಿಳೆಯೊಬ್ರು, ಪರಿಪರಿಯಾಗಿ ಕೇಳಿಕೊಂಡ್ರೂ ಬಿಟ್ಟಿರಲಿಲ್ಲ. ನಿಮ್ಮ ತಾತಾ, ತಂದೆಗೂ ಊಟ ಬಡಿಸಿದ್ದೇನೆ. ಬಿಟ್ಟುಬಿಡು ಅಂದ್ರೂ, ಕನಿಕರ ತೋರಿರಲಿಲ್ಲ. ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಜ್ವಲ್ ರೇವಣ್ಣ ಅವರು ತಾನು ಮಾಡಿದ ತಪ್ಪಿಗೆ ನ್ಯಾಯಾಲಯದ ಕಟಕಟೆಯಲ್ಲಿ ನಿಂತು, ಬಿಕ್ಕಿ ಬಿಕ್ಕಿ ಅಳುವಂತಾಗಿದೆ.

3 ಅತ್ಯಾಚಾರ, 1 ಲೈಂಗಿಕ ದೌರ್ಜನ್ಯ ಸೇರಿ, ಒಟ್ಟು 4 ಪ್ರಕರಣಗಳಲ್ಲಿ ಪ್ರಜ್ವಲ್‌ ರೇವಣ್ಣ ಲಾಕ್‌ ಆಗಿದ್ದಾರೆ. ಕೆ.ಆರ್‌.ನಗರ ಮಹಿಳೆ ಮೇಲಿನ ಅತ್ಯಾಚಾರ ಕೇಸ್‌, ಸದ್ಯ, ನಿರ್ಣಾಯಕ ಹಂತ ತಲುಪಿದೆ. ಅತ್ಯಾಚಾರ ಬಳಿಕ ಸಂತ್ರಸ್ತೆಯನ್ನು ಅಪಹರಿಸಲಾಗಿತ್ತು. ಈ ಕೇಸ್‌ನಲ್ಲಿ ಮಾಜಿ ಸಚಿವ ರೇವಣ್ಣ ಸೇರಿ, 8 ಮಂದಿ ಜೈಲಿಗೆ ಹೋಗಿದ್ರು. ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ, ನಿರೀಕ್ಷಣಾ ಜಾಮೀನು ಪಡೆದಿದ್ರು.

ಸಂತ್ರಸ್ತೆಯನ್ನು ರಕ್ಷಿಸಿದ್ದ ಎಸ್‌ಐಟಿ ಟೀಂ, ಹೇಳಿಕೆ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಪ್ರಜ್ವಲ್‌ ರೇವಣ್ಣ ಮೊಬೈಲ್‌ನಲ್ಲಿದ್ದ ವೀಡಿಯೋ ಕೂಡ, ಬಹುದೊಡ್ಡ ಸಾಕ್ಷಿಯಾಗಿದೆ. ಕಳೆದ 2024ರ ಲೋಕಸಭಾ ಚುನಾವಣೆ ವೇಳೆ, ಪ್ರಜ್ವಲ್‌ ರೇವಣ್ಣನದ್ದು ಎನ್ನಲಾದ, ಅಶ್ಲೀಲ ದೃಶ್ಯಗಳಿದ್ದ ಪೆನ್‌ಡ್ರೈವ್‌ ಹಂಚಲಾಗಿತ್ತು. ಹೊಳೆನರಸೀಪುರದ ಮಹಿಳೆಯೊಬ್ರು, ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಲಾಗಿತ್ತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್‌ ಬಂಧನವಾಗಿತ್ತು.

- Advertisement -

Latest Posts

Don't Miss