ಧರ್ಮಸ್ಥಳ ನಿಗೂಢ ಸಾವುಗಳ ಕೇಸ್ ನಿರ್ಣಾಯಕ ಹಂತ ತಲುಪಿದೆ. ಕುತೂಹಲ ಘಟ್ಟದಲ್ಲಿ ದೂರುದಾರ, ಅನಾಮಿಕನ ಮೇಲೆ ಒತ್ತಡ ಹೇರಲಾಗಿದೆ ಎನ್ನುವ ಬಹುದೊಡ್ಡ ಆರೋಪ ಕೇಳಿ ಬಂದಿದೆ. ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿರುವುದರಿಂದ ತೀವ್ರ ಸಂಚಲನ ಸೃಷ್ಟಿಯಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ವೇಗವಾಗಿದೆ. ಸ್ಥಳ ಮಹಜರು ವೇಳೆ ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಉತ್ಖನನ ಕಾರ್ಯ ಇಂದೂ ಸಹ ನಡೆದಿದೆ. ಈಗಾಗಲೇ 8 ಸ್ಟಾರ್ಟ್ಗಳನ್ನು ಅಗೆದು ನೋಡಲಾಗಿದೆ. ಅವುಗಳಲ್ಲಿ 8ನೇ ಜಾಗದಲ್ಲಿ ಮಾತ್ರ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ತನಿಖೆ ನಿರ್ಣಾಯಕ ಹಂತ ತಲುಪಿರುವ ಹೊತ್ತಲ್ಲಿ ಅನಾಮಿಕನ ಮೇಲೆ ಒತ್ತಡ ಹೇರಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ದೂರುದಾರ ಭೀಮನ ಮೇಲೆ ಇನ್ಸ್‌ಪೆಕ್ಟರ್ ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. SIT ತನಿಖೆಗಾಗಿ ನೇಮಕ ಮಾಡಿರೋ SI ಮಂಜುನಾಥ ಗೌಡ ಎಂಬುವವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಕೇಸ್ ಹಿಂಪಡೆವಂತೆ ಅನಾಮಿಕನ ಮೇಲೆ SI ಒತ್ತಡ ಹೇರಿದ್ದರು ಎನ್ನಲಾಗ್ತಿದೆ. SITಯಲ್ಲಿ ಮಂಜುನಾಥ್ ಗೌಡ ಇರಬಾರದು ಎಂದು ಆಗ್ರಹ ಕೇಳಿ ಬಂದಿದೆ.
ಶಿರಸಿ ಠಾಣೆಯಲ್ಲಿ ಕೆಲಸ ಮಾಡ್ತಿರೋ SI ಮಂಜುನಾಥ ಗೌಡ ಅವರನ್ನು ಎಸ್‌ಐಟಿ ತನಿಖೆಗೆಂದು ನೇಮಕ ಮಾಡಲಾಗಿತ್ತು. ಇದೀಗ ಮಂಜುನಾಥ್ ಗೌಡ ವಿರುದ್ಧ ಒತ್ತಡ ಹೇರಿದ ಆರೋಪ ಕೇಳಿ ಬಂದಿದೆ. ಅನಾಮಿಕನ ಪರ ವಕೀಲರು ಈ ಬಗ್ಗೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಗೆ ದೂರು ನೀಡಿದ್ದಾರೆ. ಈ SI ಮಂಜುನಾಥ್ ಗೌಡ ತಂಡದಲ್ಲಿ ಇದ್ರೆ ಅನಾಮಿಕನನ್ನ ಮಹಜರಿಗೆ ಕರೆತರಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ.
ಬೆಳ್ತಂಗಡಿ ಠಾಣೆಯಲ್ಲಿ ಆಗಸ್ಟ್ 1ರಂದು ಅನಾಮಿಕನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ. SIT ಕಚೇರಿಯಲ್ಲೇ ಬಾಗಿಲು ಮುಚ್ಚಿ ಬೆದರಿಕೆ ಹಾಕಿದ್ರಂತೆ. ಕೇಸ್ ಹಿಂಪಡೆಯದಿದ್ರೆ ನೀನು ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತೆ. ನಿನ್ನನ್ನ ಕಸ್ಟಡಿಗೆ ಪಡೆಯಬೇಕಾಗುತ್ತೆ ಎಂದು ಅನಾಮಿಕನಿಗೆ ಇನ್ಸ್‌ಪೆಕ್ಟರ್ ಮಂಜುನಾಥಗೌಡ ಬೆದರಿಕೆ ಹಾಕಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಪ್ರಕರಣವನ್ನು ಹಿಂಪಡೆಯಲು ಎಸ್‌ಐ ಈ ವ್ಯಕ್ತಿಯ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಮಂಜುನಾಥ್ ಗೌಡ ಅವರನ್ನು ಎಸ್‌ಐಟಿ ತಂಡದಿಂದ ಹೊರಗಿಡಲಾಗಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.
ಇತ್ತೀಚೆಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಎಸ್‌ಐ ಮಂಜುನಾಥ್ ಗೌಡ ಅವರನ್ನು ಎಸ್‌ಐಟಿ ತನಿಖೆಗೆ ನೇಮಿಸಲಾಗಿತ್ತು. ಈಗ, ಮಂಜುನಾಥ್ ಗೌಡ ವಿರುದ್ಧ ಒತ್ತಡದ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆ ಅನಾಮಿಕಾ ಪರ ವಕೀಲರು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ದೂರು ನೀಡಿದ್ದರು. ಈ ಎಸ್‌ಐ ಮಂಜುನಾಥ ಗೌಡ ತಂಡದಲ್ಲಿದ್ದರೆ, ಅನಾಮಿಕಾನನ್ನು ಸ್ಥಳ ಮಹಜರಿಗೆ ಕರೆತರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.