Monday, August 4, 2025

Latest Posts

ಆ.5ಕ್ಕೆ ಸಾರಿಗೆ ಬಂದ್ – ಪ್ರಯಾಣಿಕರೇ ಎಚ್ಚರ, ನೌಕರರ ಮುಷ್ಕರ vs ಸರ್ಕಾರದ ತಂತ್ರ!

- Advertisement -

ಆಗಸ್ಟ್ 5ರಿಂದಲೇ ಕರ್ನಾಟಕದಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧಾರ ಮಾಡಿದ್ದಾರೆ. ಆದ ಕಾರಣ ಆಗಸ್ಟ್ 4ರಂದು ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC), NWKRTC, NEKRTC ಹಾಗೂ BMTC ನೌಕರರನ್ನು ಒಳಗೊಂಡಿರುವ ಜಂಟಿ ಕ್ರಿಯಾ ಸಮಿತಿ ಈ ಮುಷ್ಕರಕ್ಕೆ ಕರೆ ನೀಡಿದೆ. ವೇತನ ಪರಿಷ್ಕರಣೆ, ಹಿಂದಿನ ಬಾಕಿ ವೇತನ ಬಿಡುಗಡೆ ಹಾಗೂ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದು, ಈ ಬಾರಿಗೆ ಕಟ್ಟುನಿಟ್ಟಾಗಿ ಮುಷ್ಕರ ನಡೆಯಲಿದೆ.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 4ರಂದು ಬೆಳಿಗ್ಗೆ 11:30ಕ್ಕೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ನೌಕರರ ಬೇಡಿಕೆಗಳ ಕುರಿತು ಚರ್ಚೆ ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಸಭೆಯಿಂದ ಮುಷ್ಕರ ತಡೆಯಲು ಸಾಧ್ಯವಾಗಬಹುದೆಂಬ ನಿರೀಕ್ಷೆಯಿದೆ.

ಈ ಮುಷ್ಕರದ ಪೂರ್ವಭಾವಿಯಾಗಿ ನೌಕರರು ಈಗಾಗಲೇ ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಪ್ರಯಾಣಿಸೋ ಪ್ರಯಾಣಿಕರ ಪರಿಸ್ಥಿತಿ ಏನು ಎಂಬ ಚಿಂತೆ ಬಂದೊದಗಿದೆ.

ಸರ್ಕಾರವೂ ಮುಷ್ಕರದ ಪರಿಣಾಮವನ್ನು ಕಡಿಮೆಗೊಳಿಸಲು ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನ ಮಾಡುತ್ತಿದೆ. ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರ ಜತೆ ಸಭೆ ನಡೆಸಿದ್ದು, ಸಾರ್ವಜನಿಕರ ಸೇವೆಯಲ್ಲಿ ಖಾಸಗಿ ಬಸ್‌ಗಳನ್ನು ಬಳಸಲು ಪ್ಲ್ಯಾನ್ ರೂಪಿಸಿದೆ.

ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರ ಅಸೋಸಿಯೇಷನ್ ಜತೆ ಸಭೆ ನಡೆಸಿದೆ. ಖಾಸಗಿ ಸಾರಿಗೆ ಸಂಘದಿಂದಲೂ ಹಲವು ಬೇಡಿಕೆ ಇಟ್ಟಿದ್ದಾರೆ. 15 ದಿನಗಳ ಟ್ಯಾಕ್ಸ್ ವಿನಾಯಿತಿ, ಪರ್ಮಿಟ್ ನೀಡುವುದು, ಪೆನಾಲ್ಟಿಗಳಲ್ಲಿ 50% ರಿಯಾಯಿತಿ, BMTC ಬಸ್‌ಗಳು ಹೊರ ಜಿಲ್ಲೆಗಳಲ್ಲಿ ಸಂಚರಿಸಬಾರದು, 60:40 ಅನುಪಾತದಲ್ಲಿ ಸರಕಾರಿ ಮತ್ತು ಖಾಸಗಿ ಸಾರಿಗೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದರೆ ಖಾಸಗಿ ಬಸ್‌ಗಳು ಸಹಕಾರ ನೀಡುತ್ತವೆ ಎಂದು ಖಾಸಗಿ ಸಾರಿಗೆ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಅವರು ತಿಳಿಸಿದ್ದಾರೆ.

ಮುಷ್ಕರ ನಡೆದಿದ್ದೇ ಆದ್ರೆ, ಆದರೆ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಲಿದೆ. ಆಗಸ್ಟ್ 4ರ ಮುಖ್ಯಮಂತ್ರಿಗಳ ಸಭೆಯಿಂದ ಬದಲಾವಣೆಯ ನಿರೀಕ್ಷೆ ಇದೆ. ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸೂಕ್ತ ಪರಿಹಾರ ದೊರೆತರೆ, ಈ ಮುಷ್ಕರದ ಅಗತ್ಯವೇ ಇರಲ್ಲ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss