Monday, August 4, 2025

Latest Posts

ಪ್ರಜ್ವಲ್‌ಗೆ ಜೀವಾವಧಿ, ಮೌನ ಮುರಿದ ನಿಖಿಲ್ – ಪ್ರಜ್ವಲ್ ಶಿಕ್ಷೆಗೆ ನಿಖಿಲ್ ಏನಂದ್ರು?

- Advertisement -

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ಆರಂಭವಾಗಿದೆ. ಜನಪ್ರತಿನಿಧಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೌನ ಮುರಿದು ಮಾತನಾಡಿದ್ದಾರೆ. ಇದರ ಜೊತೆಗೆ ಆರೋಪ ಕೇಳಿ ಬಂದ ಕೂಡಲೇ ಜೆಡಿಎಸ್‌ ಪಕ್ಷ ತೆಗೆದುಕೊಂಡ ತೀರ್ಮಾನದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕಳೆದ 14 ತಿಂಗಳ ಹಿಂದೆ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಹಲವು ವಿಡಿಯೋ ಸಾಕ್ಷ್ಯಾಧಾರಗಳು, ತನಿಖಾ ವರದಿಗಳ ಮೇಲೆ ಆಧಾರಿತವಾಗಿ ನ್ಯಾಯಾಲಯವು 2025ರ ಆಗಸ್ಟ್ 2ರಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಈ ತೀರ್ಪಿನ ಬಗ್ಗೆ ಮಾತನಾಡಿದ್ದಾರೆ. ನ್ಯಾಯಾಧೀಶರು, ನ್ಯಾಯಾಲಯ ತೀರ್ಪು ಕೊಟ್ಟ ಮೇಲೆ, ಕೋರ್ಟ್ ತೀರ್ಪಿಗೆ ತಲೆಬಾಗಬೇಕು. ಯಾರೇ ಇದ್ದರೂ ತಲೆಬಾಗಬೇಕು. ಈ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ. ಇದಕ್ಕಿಂತ ಹೆಚ್ಚು ನಾನು ಪ್ರತಿಕ್ರಿಯಿಸಲು ಬಯಸಲ್ಲ ಎಂದಿದ್ದಾರೆ.

ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಆರೋಪದಡಿ ಬಂದ ತಕ್ಷಣವೇ, ಜೆಡಿಎಸ್ ಪಕ್ಷವು ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಆರೋಪ ಬಂದ ತಕ್ಷಣವೇ ಜೆಡಿಎಸ್ ವರಿಷ್ಠರು ಅವರನ್ನು ಅಮಾನತುಗೊಳಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss