Monday, August 4, 2025

Latest Posts

ಜೈಲಲ್ಲಿ ಪ್ರಜ್ವಲ್ ಕೂಲಿ – ತಿಂಗಳಿಗೆ 15,720 ಸಂಬಳ!

- Advertisement -

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹಣೆಬರಹ ಬದಲಾಗಿದೆ. ಬರೀ ಹಣೆಬರಹ ಅಲ್ಲ. ರೇಪ್ ಮಾಡಿದ ತಪ್ಪಿಗೆ ಕಂಬಿ ಹಿಂದೆ ಜೀವನ ಪರ್ಯಂತ ಕಾಲ ಕಳೆಯುವಂತಾಗಿದೆ. ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಕಣ್ಣೀರು ಹಾಕಿರುವ ಪ್ರಜ್ವಲ್ ರೇವಣ್ಣ ಅವರು, ಪರಪ್ಪನ ಅಗ್ರಹಾರದ ಜೈಲಿನೊಳಗೆ ತಮ್ಮ ಕೈದಿ ಜೀವನವನ್ನ ಮುಂದುವರಿಸುತ್ತಿದ್ದಾರೆ.

ಮನೆ ಕೆಲಸದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿದೆ. ಐಪಿಸಿ ಸೆಕ್ಷನ್ 376(2)(K) ಅಡಿಯಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ, 5ಲಕ್ಷ ದಂಡ. ಐಪಿಸಿ ಸೆಕ್ಷನ್ 376(2)(N)ರ ಅಡಿಯಲ್ಲಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಡಿ ಜೀವನಪರ್ಯಂತ ಜೈಲು ವಾಸ, 5ಲಕ್ಷ ದಂಡ. ಐಪಿಸಿ ಸೆಕ್ಷನ್ 354(B)ಅಡಿಯಲ್ಲಿ 7ವರ್ಷ ಜೈಲು, 50 ಸಾವಿರ ದಂಡ. IPC 354(A), IPC 354(c), IPC 201, ಐಟಿ ಕಾಯ್ದೆ 66(E) ಅಡಿ 3ವರ್ಷ ಜೈಲು, 25 ಸಾವಿರ ದಂಡ. IPC 506ರಡಿ 2 ವರ್ಷ ಜೈಲು, 10 ಸಾವಿರ ದಂಡ ವಿಧಿಸಿದೆ. ಇದರಲ್ಲಿ ₹11.25 ಲಕ್ಷ ಸಂತ್ರಸ್ತೆಗೆ ನೀಡಲು ಆದೇಶವಾಗಿದೆ.

ನಿನ್ನೆ ರಾತ್ರಿ ಪ್ರಜ್ವಲ್ ರೇವಣ್ಣ ಸಜಾಬಂಧಿ ಖೈದಿಯಾಗಿ ಅಧಿಕೃತವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇಂದು ಬೆಳಗ್ಗೆ 15528 ಎಂದು ಹೊಸ ಕೈದಿ ಸಂಖ್ಯೆಯೊಂದಿಗೆ ಜೈಲು ಬಟ್ಟೆ ಹಾಕಿಕೊಂಡಿದ್ದಾರೆ. ಬೆಳಗಿನ ತಿಂಡಿಗೆ ಅವಲಕ್ಕಿ ಉಪ್ಪಿಟ್ಟು ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಅವರು ಇನ್ನು ಮುಂದೆ ಪ್ರತಿದಿನ ಕಡ್ಡಾಯವಾಗಿ 8 ಗಂಟೆ ಕೆಲಸ ಮಾಡಬೇಕು. ಬೇಕರಿ, ಗಾರ್ಡನ್, ಕರಕುಶಲ, ಹೈನುಗಾರಿಕೆ, ತರಕಾರಿ ಬೆಳೆಯುವುದು, ಮರಗೆಲಸ — ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೆಲಸ ಮಾಡಬೇಕು.

ನ್ಯಾಯಾಲಯದ ಆದೇಶದಂತೆ ಪ್ರಜ್ವಲ್ ರೇವಣ್ಣ ಅವರಿಗೆ ನಿನ್ನೆಯಿಂದಲೇ ಜೀವಾವಧಿ ಶಿಕ್ಷೆ ಆರಂಭವಾಗಿದೆ. ಕಾರಾಗೃಹದಲ್ಲಿ ಮೊದಲ ಒಂದು ವರ್ಷ ಅತ್ಯಾಚಾರದ ಅಪರಾಧಿಗೆ ಕೂಲಿ ಕೇವಲ ₹524 ರೂಪಾಯಿ ಮಾತ್ರ. ಅಂದ್ರೆ ತಿಂಗಳಿಗೆ 15,720 ರೂಪಾಯಿ ನೀಡಲಾಗತ್ತೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತೆ. ಹೀಗೆ ಸಜಾಬಂಧಿ ಖೈದಿಯಾದ ಕಾರಣ ಪ್ರಜ್ವಲ್ ಜೀವನ ಶೈಲಿ ಸಂಪೂರ್ಣ ಬದಲಾಗಲಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss