Monday, August 4, 2025

Latest Posts

ರಮ್ಯಾಗೆ ಅಶ್ಲೀಲ ಮೆಸೇಜ್ – ಮತ್ತೆ ಇಬ್ಬರು ಲಾಕ್‌, ಅಶ್ಲೀಲ ವಿಡಿಯೋ ಕಳಿಸಿದ್ದವರು ಅರೆಸ್ಟ್!

- Advertisement -

ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟ ಕಾಮೆಂಟ್‌, ಅಶ್ಲೀಲ ಸಂದೇಶ ಕಳುಹಿಸಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸೈಬರ್ ಕ್ರೈಂ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೈಬರ್ ಕ್ರೈಂ ಅಧಿಕಾರಿಗಳ ಕಾರ್ಯಾಚರಣೆಯಿಂದ, ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ ಆರೋಪದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ದರ್ಶನ್‌ ಫ್ಯಾನ್ಸ್ ಕೆಟ್ಟ ಕೊಳಕು ಮೆಸೇಜ್‌ಗಳಿಂದ ಕೋಪಗೊಂಡ ರಮ್ಯಾ, ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ರಮ್ಯಾ ನೀಡಿದ ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದರು. ಮೊದಲು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ತನಿಖೆಯ ಹಿನ್ನೆಲೆಯಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಒಟ್ಟು ನಾಲ್ವರು ಆರೋಪಿಗಳು ಸಿಸಿಬಿ ವಶದಲ್ಲಿದ್ದಾರೆ.

ಬಂಧಿತರು ಕೇವಲ ಅಶ್ಲೀಲ ಮೆಸೇಜ್‌ಗಳಷ್ಟೇ ಅಲ್ಲದೆ, ಕೆಲವೊಂದು ಅಶ್ಲೀಲ ವಿಡಿಯೋಗಳನ್ನೂ ಕಳುಹಿಸಿದ್ದಾಗಿ ಮಾಹಿತಿ ಲಭಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ಆರೋಪಿಗಳ ಮೆಸೇಜ್‌ಗಳನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗುತ್ತಿದೆ.

ಇದೊಂದು ಸೈಬರ್ ಅಪರಾಧ ಪ್ರಕರಣವಾಗಿದ್ದು, ಐಟಿ ಆಕ್ಟ್‌ನ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂಥ ಅಶ್ಲೀಲ ಕಂಟೆಂಟ್‌ಗಳ ಹಂಚಿಕೆ ಕಾನೂನು ಬಾಹಿರವಾಗಿದೆ.Ramya

- Advertisement -

Latest Posts

Don't Miss