ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾಚಾರ ಕೇಸ್ ಅಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಭರ್ಜರಿ ಗೆಲುವು ಸಾಧಿಸಿದ್ರು. ಆದ್ರೆ, 2024ರಲ್ಲಿ ಸ್ವಯಂಕೃತ ಅಪರಾಧಗಳಿಂದ ಹೀನಾಯ ಸೋಲು ಅನುಭವಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದೆ.
ಮತದಾನಕ್ಕೆ ಕೇವಲ 6 ದಿನ ಇರುವಾಗ, ಪ್ರಜ್ವಲ್ ಅಶ್ಲೀಲ ವೀಡಿಯೋಗಳು ವೈರಲ್ ಆಗಿದ್ವು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಾವಿರ ಫೋಟೋ, 2 ಸಾವಿರ ವೀಡಿಯೋಗಳು ಲೀಕ್ ಆಗಿದ್ವು. ಅದೂ ಕೂಡ ತನ್ನದೇ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಬಹಳ ಸುದ್ದಿಯಾಗಿತ್ತು. ಬಳಿಕ ಜೆಡಿಎಸ್‌ನಿಂದಲೇ ಪ್ರಜ್ವಲ್‌ನನ್ನ ಉಚ್ಚಾಟನೆ ಮಾಡಲಾಗಿತ್ತು.
ಅಪರಾಧಿ ಪ್ರಜ್ವಲ್ ವಿರುದ್ಧ ಇನ್ನೂ 3 ಕೇಸ್‌ಗಳು ಬಾಕಿ ಇವೆ. ಸದ್ಯಕ್ಕಂತೂ ಪ್ರಜ್ವಲ್ ರೇವಣ್ಣ ಅವರು ಜೈಲಿನಿಂದ ಬಿಡುಗಡೆ ಅನ್ನೋದು ಹಗಲುಗನಸಾಗಿದೆ. ಇಂಥಾ ಹೊತ್ತಲ್ಲಿ, 2029ರ ಲೋಕಸಭಾ ಚುನಾವಣೆಗೆ, ಜೆಡಿಎಸ್ ಅಭ್ಯರ್ಥಿ ಯಾರು ಅನ್ನೋ ಚರ್ಚೆಗಳು ಶುರುವಾಗಿವೆ. ಪ್ರಜ್ವಲ್ ಬದಲಿಗೆ ಅವರ ತಾಯಿ ಭವಾನಿ ರೇವಣ್ಣಗೆ, ಜೆಡಿಎಸ್ ಎಂಪಿ ಟಿಕೆಟ್ ಸಿಗಲಿದೆ ಎನ್ನಲಾಗ್ತಿದೆ.
ಹಾಸನ ಕ್ಷೇತ್ರದಲ್ಲಿ ಹೆಚ್.ಡಿ. ದೇವೇಗೌಡರು, ಹೆಚ್.ಡಿ. ರೇವಣ್ಣ ಹಿಡಿತವಿದೆ. ಹೀಗಾಗಿ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಗೆದ್ದು ಬೀಗಿದ್ರು. ಸದ್ಯ, ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿದೆ. 2029ರ ಚುನಾವಣೆಯಲ್ಲಿ, ಮತ್ತೆ ಜೆಡಿಎಸ್ ಅಧಿಕಾರಕ್ಕೆ ತರಬೇಕೆನ್ನುವುದು ದೊಡ್ಡಗೌಡರ ರಣತಂತ್ರ. ಈ ನಿಟ್ಟಿನಲ್ಲಿ ರೇವಣ್ಣ ಪತ್ನಿ ಭವಾನಿ ಅವರೇ, ಅಖಾಡಕ್ಕೆ ಇಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.