ನಟಿ ರಮ್ಯಾ ಅವರ ದೂರಿನ ಬಳಿಕವೂ ಕಾಮೆಂಟ್ಸ್‌ಗಳ ಹಾವಳಿ ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸದ್ದು ಮಾಡುತ್ತಿರುವ ಹೆಸರು ಸೋನು ಶೆಟ್ಟಿ. ‘ಐ ಯಾಮ್ ಸೋನು ಶೆಟ್ಟಿ’ ಎಂಬ ಖಾತೆಯಲ್ಲಿ ವಿಡಿಯೋ ಹಾಕ್ತಾ, ಪ್ರಭಾವ ಬೀರ್ತಾ, ನೇರವಾಗಿ ದರ್ಶನ್ ಬಗ್ಗೆ ಮಾತನಾಡಿದ್ರು. ದರ್ಶನ್ ರೌಡಿ ಆಗಬೇಕಾಗಿದ್ದವರು… ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ ಅಂತ ಇತ್ತೀಚಿಗೆ ವಿವಾದ ಮಾಡಿಕೊಂಡಿದ್ದರು. ಆ ಬಳಿಕ ದರ್ಶನ್ ಫ್ಯಾನ್ಸ್ ಸೋನು ಶೆಟ್ಟಿ ಅವರ ಸೋಶಿಯಲ್ ಮೀಡಿಯಾ ಖಾತೆಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸೋನು ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸೋನು ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ 69 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಡಿ ಬಾಸ್ ನನಗೆ ಇಷ್ಟ ಇಲ್ಲ. ಅವರ ಫ್ಯಾನ್ಸ್ ಮೊದಲು ಬದಲಾಗಬೇಕು. ಫ್ಯಾನ್ಸ್ ಗೆ ಬುದ್ದಿ ಕಲಿಸಬೇಕು ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅವರು ಅಭಿಪ್ರಾಯ ಹೇಳುವ ಬೆನ್ನಲ್ಲೇ ಅಪಮಾನ, ಬೆದರಿಕೆ, ಕೆಟ್ಟ ಕಾಮೆಂಟ್‌ಗಳು ಈಗ ಸುದ್ದಿಯ ಕೇಂದ್ರವಾಗಿವೆ.
ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದರೂ ಕೂಡ ಟ್ರೊಲ್ ಮಾಡಿರುವ ಅವರ ವಿಡಿಯೋಗಳು ವೈರಲ್ ಆಗ್ತಿವೆ. ಪಬ್ಲಿಸಿಟಿಗಾಗಿ ಎಲ್ಲವೂ ಮಾಡ್ತಿದ್ದಾರೆ ಅಂತ ಜನ ಹೇಳ್ತಿದ್ದಾರೆ. ನನಗೆ ದರ್ಶನ್ ಹೆಸರೇ ಬೇಕಿಲ್ಲ ಪಬ್ಲಿಸಿಟಿಗೆ, ಅದರ ಅಗತ್ಯವೂ ಇಲ್ಲ ಅಂತ ಸೋನು ತಿರುಗೇಟು ಕೊಟ್ಟಿದ್ದಾರೆ.
ದರ್ಶನ್ ಫ್ಯಾನ್ಸ್ ನಮ್ಮನ್ನು ಟ್ರೋಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವುದು ಸೋನು ಶೆಟ್ಟಿ ಮೊದಲೇನಲ್ಲ. ಇದಕ್ಕೂ ಮುನ್ನ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕೂಡ ಇಂಥದ್ದೇ ಆರೋಪ ಮಾಡಿದ್ದರು. ಕೆಲ ದಿನಗಳ ಹಿಂದೆ ನಟಿ ರಮ್ಯಾ ಕೂಡ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ರು. ಬರೋಬ್ಬರಿ 42 ಇನ್‌ಸ್ಟಾಗ್ರಾಮ್ ಅಕೌಂಟ್‌ಗಳ ವಿರುದ್ಧ ದೂರು ನೀಡಿದ್ದರು.
ನಟಿ ರಮ್ಯಾ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಬಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿ ಬೇರೆ ಜಿಲ್ಲೆಯಲ್ಲಿರುವ ಇಂತಹ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲು ಹುಡುಕಾಟ ನಡೆಸುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ