Friday, August 8, 2025

Latest Posts

ಮಡೆನೂರು ಮನು ಬಾಳಲ್ಲಿ ಹೊಸ ಮಿಂಚು!

- Advertisement -

ಕಾಂಪ್ರಮೈಸ್‌ ಆಗಿದ್ಯಂತೆ. ಮಡೆನೂರು ಮನು ಹಾಗೂ ಮಿಂಚು ಇಬ್ಬರು ತಮ್ಮ ಕೋಪ, ತಾಪಗಳನ್ನ ಮರೆತಿದ್ದಾರೆ. ಮನಸ್‌ ಪೂರ್ತಿಯಾಗಿ, ಖುಷಿಯಾಗಿ ಮತ್ತೆ ಒಟ್ಟಿಗೆ ಸ್ಮೈಲ್‌ ಮಾಡಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು, ಮಿಂಚು ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ. ಒಪ್ಪಂದದ ಮೇರೆಗೆ ಮನು ಮೇಲಿನ‌ ಕೇಸ್‌ ಅನ್ನು ಮನಸ್ ಪೂರ್ತಿಯಾಗಿ, ಮಿಂಚು ಹಿಂಪಡೆದಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋನಲ್ಲಿ ಮನು ಮತ್ತು ಮಿಂಚು ಒಟ್ಟಾಗಿ ಕಾಣಿಸಿಕೊಂಡಿದ್ರು. ಬಳಿಕ ಮಿಂಚು ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಮನು, ಶಿಕಾರಿಪುರ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅತ್ಯಾಚಾರ ಮಾಡಿದ್ದಾರೆ ಅನ್ನೋ ಕೇಸ್ ದಾಖಲಾಗಿತ್ತು. ಗರ್ಭಿಣಿಯಾದ ನನಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ ಅಂತಾ, ಮಿಂಚು ಆರೋಪಿಸಿದ್ರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ, ಅತ್ಯಾಚಾರ ಆರೋಪದಡಿ ಕೇಸ್‌ ದಾಖಲಿಸಲಾಗಿತ್ತು. ಮನು ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಮನು ನಟನೆಯ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್‌ಗೆ ಒಂದು ದಿನ ಮುಂಚೆ, ಮೇ 22ರಂದು ಮಿಂಚು ವಿಡಿಯೋ ವೈರಲ್‌ ಆಗಿತ್ತು. ತಮ್ಮ ಮೇಲಿನ ಆರೋಪಗಳಿಗೆಲ್ಲಾ ಮಡೆನೂರು ಮನು, ಫೇಸ್‌ಬುಕ್‌ ಲೈವ್‌ನಲ್ಲೇ ಕ್ಲಾರಿಟಿ ಕೊಟ್ಟಿದ್ರು. ಬಳಿಕ ಹಾಸನದ ಶಾಂತಿಗ್ರಾಮದ ಬಳಿ ಮಡೆನೂರು ಮನು ಅವರನ್ನ, ಪೊಲೀಸರು ವಶಕ್ಕೆ ಪಡೆದಿದ್ರು. ಧಾರವಾಡ ಹೈಕೋರ್ಟ್‌ ಪೀಠದಲ್ಲಿ, ಅತ್ಯಾಚಾರ ಕೇಸ್‌ ವಾಪಸ್ ತೆಗದುಕೊಡಿದ್ದು, ಮನು-ಮಿಂಚು ವಿವಾದ ಸುಖಾಂತ್ಯಗೊಂಡಿದೆ.

- Advertisement -

Latest Posts

Don't Miss