ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು ಸಂಸ್ಕರಣೆಗೆ ಒಂದಿಂಚೂ ಜಾಗವಿಲ್ಲ.
ಪ್ರತಿ ಕೈಗಾರಿಕಾ ಪ್ರದೇಶದಲ್ಲಿಯೂ ಒಂದು ತ್ಯಾಜ್ಯ ವಸ್ತು ಸಂಸ್ಕರಣಾ ಘಟಕಕ್ಕೆ ಸ್ಥಳ ನೊಗದಿ ಮಾಡಬೇಕೆಂಬ ನಿಯಮವಿದ್ದರೂ ಅನುಷ್ಠಾನಗೊಳ್ಳದ ಪರಿಣಾಮ ಮೈಸೂರಿನಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಮೈಸೂರು ಜಿಲ್ಲೆಯಲ್ಲಿ ಹೆಬ್ಬಾಳು ಮೇಟಗಳ್ಳಿ, ಹೂಟಗಳ್ಳಿ, ಬೆಳವಾಡಿ, ಕೂರ್ಗಳ್ಳಿ ಸೇರಿದಂತೆ 11 ಕೈಗಾರಿಕಾ ಪ್ರದೇಶಗಳಿವೆ. ಹೊಸದಾಗಿ ಅಡಕನಹಳ್ಳಿ, ತಾಂಡ್ಯ, ಕಡಕೊಳ, ಹಿಮ್ಮಾವು ಕೈಗಾರಿಕಾ ಪ್ರದೇಶಗಳು ತಲೆಎತ್ತಿವೆ. ಇಲ್ಲೆಲ್ಲೂತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯಾಗಿಲ್ಲ. ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಇಲ್ಲದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ತ್ಯಾಜ್ಯಗಳನ್ನು ಕೆಲವು ಏಜೆನ್ಸಿಗಳಿಗೆ ವಹಿಸುತ್ತಿವೆ.
ತ್ಯಾಜ್ಯವನ್ನು ಪಡೆಯುವ ಏಜೆನ್ಸಿಗಳು ಮರು ಬಳಕೆ ಮಾಡಬಹುದಾದ ವಸ್ತುಗಳನ್ನು ತಮ್ಮ ಬಳಿಯಲ್ಲಿಯೇ ಇರಿಸಿಕೊಂಡು ಉಳಿದ ತ್ಯಾಜ್ಯವನ್ನು ಎಲ್ಲೆಂದರಲ್ಲಿವಿಲೇವಾರಿ ಮಾಡುತ್ತಿದ್ದಾರೆ. ಇದಕ್ಕೆ 2017ರಲ್ಲಿಮೈಸೂರು ತಾಲೂಕಿನ ಶ್ಯಾದನಹಳ್ಳಿಯಲ್ಲಿಕೆಮಿಕಲ್‌ನಿಂದಾಗಿ ಗುಂಡಿ ನಿರ್ಮಾಣವಾಗಿ, ಅದರಲ್ಲಿಕೆಲವರು ಬಿದ್ದು ಗಾಯಗೊಂಡಿದ್ದ ದುರಂತವೇ ಸಾಕ್ಷಿಯಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ