ಭಾರತದ ಸರಕುಗಳ ಆಮದಿನ ಮೇಲೆ, ಶೇಕಡ 50ರಷ್ಟು ಸುಂಕ ವಿಧಿಸಿರುವ ಅಮೆರಿಕಾ ಕ್ರಮವನ್ನು, ಚೀನಾ ಖಂಡಿಸಿದೆ. ಈ ಮೂಲಕ ಭಾರತಕ್ಕೆ ಬೆಂಬಲ ಘೋಷಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಯನ್ನು, ಚೀನಾ ರಾಯಭಾರಿ ಕ್ಸು ಫೀಹಾಂಗ್ ಟೀಕಿಸಿದ್ದಾರೆ.
ಬೆದರಿಸುವವನಿಗೆ ಒಂದು ಇಂಚು ಕೊಟ್ಟರೆ, ಅವನು ಒಂದು ಮೈಲಿ ಆಕ್ರಮಿಸುತ್ತಾನೆ. ಹೀಗಂತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೇಳೆ ಚೀನಾದ ವಿದೇಶಾಂಗ ಸಚಿವರು ಮತ್ತು ಬ್ರೆಜಿಲ್ ಅಧ್ಯಕ್ಷರ ಮುಖ್ಯ ಸಲಹೆಗಾರರ ನಡುವಿನ, ಮಾತುಕತೆಯ ಭಾಗವನ್ನು ಉಲ್ಲೇಖಿಸಿದ್ದಾರೆ.
ಇತರ ದೇಶಗಳನ್ನು ನಿಗ್ರಹಿಸಲು ಸುಂಕಗಳನ್ನು ಅಸ್ತ್ರವಾಗಿ ಬಳಸುವುದು, ಯುಎನ್ ಚಾರ್ಟರ್ ಉಲ್ಲಂಘನೆಯಾಗುತ್ತದೆ. ಡಬ್ಲ್ಯುಟಿಒ ನಿಯಮಗಳನು ದುರ್ಬಲಗೊಳಿಸುತ್ತದೆ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ರಷ್ಯಾದಿಂದ ತೈಲ ಖರೀದಿ ವಿಚಾರವಾಗಿ, ಚೀನಾದ ಮೇಲೂ ಹೆಚ್ಚುವರಿ ಸುಂಕ ವಿಧಿಸುವ ಬಗ್ಗೆ, ಟ್ರಂಪ್ ಬೆದರಿಕೆಯೊಡ್ಡಿದ್ದಾರೆ. ಈ ನಡುವೆ ಚೀನಾ ರಾಯಭಾರಿಯ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.