ಭಾರತದಲ್ಲಿ ನಡೆದಿರುವ ಒಂದು ಮಹತ್ವದ ಆರ್ಥಿಕ ಬೆಳವಣಿಯಿಂದ, ಜವಳಿ ಉದ್ಯಮ, ಲಕ್ಷಾಂತರ ಕಾರ್ಮಿಕರ ಜೀವನ ಮತ್ತು ರಫ್ತು ಆಧಾರಿತ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದು ಸ್ಪಷ್ಟವಾಗಿದೆ. ಯಾಕಂದ್ರೆ ಭಾರತದಿಂದ – ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು ಖರೀದಿಯನ್ನ ನಿಲ್ಲಿಸಿದ್ದಾರೆ.
ಇತ್ತೀಚೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದಂತೆ, ಭಾರತದಿಂದ ಆಮದು ಮಾಡುವ ಎಲ್ಲಾ ಗಾರ್ಮೆಂಟ್ಸ್ ಮೇಲೂ ಶೇ. 50ರಷ್ಟು ಟ್ಯಾರಿಫ್ ಅಥವಾ ಸುಂಕ ವಿಧಿಸಲಾಗಿದೆ. ಇದರಿಂದಾಗಿ ಅಮೆರಿಕ ಮೂಲದ ಪ್ರಮುಖ ಇ-ಕಾಮರ್ಸ್ ಮತ್ತು ರೀಟೇಲ್ ಸಂಸ್ಥೆಗಳಾದ ಅಮೇಜಾನ್, ವಾಲ್ಮಾರ್ಟ್, ಟಾರ್ಗೆಟ್, ಗ್ಯಾಪ್ ಮುಂತಾದವುಗಳು ಭಾರತದಿಂದ ಖರೀದಿಯನ್ನು ಸ್ಥಗಿತಗೊಳಿಸಿವೆ.
ಈ ಸುಂಕದ ಪರಿಣಾಮವಾಗಿ, ಭಾರತಕ್ಕೆ ಇರುವ ರಫ್ತು ವೆಚ್ಚ ಶೇಕಡ 30ರಿಂದ 35ರಷ್ಟು ಹೆಚ್ಚಾಗುತ್ತಿದೆ. ಅಂದರೆ, ಈಗ ಭಾರತೀಯ ಕಂಪನಿಗಳು ಅದೇ ಉತ್ಪನ್ನವನ್ನು ಶೇ. 50ರಷ್ಟು ಕಡಿಮೆ ಬೆಲೆಗೆ ಮಾರಲು ಒತ್ತಡದಲ್ಲಿವೆ. ಈ ಸುಂಕದ ಹೊರೆಯನ್ನು ಆಮದುದಾರ ಅಲ್ಲ, ರಫ್ತುದಾರನೇ ಭರಿಸಬೇಕು ಎಂದು ಅಮೆರಿಕನ್ ಮಾರಾಟಗಾರರು ಹೇಳುತ್ತಿದ್ದಾರೆ.
ವರದಿ ಪ್ರಕಾರ, ರಫ್ತು ವೆಚ್ಚ ಶೇ. 30-35ರಷ್ಟು ಹೆಚ್ಚಾಗಬುದು. ಇದರಿಂದ ಅಮೆರಿಕಕ್ಕೆ ರಫ್ತಾಗುವ ಈ ಉದ್ಯಮದ ಸರಕುಗಳಲ್ಲಿ ಶೇ. 40-50ರಷ್ಟು ಇಳಿಮುಖವಾಗಬಹುದು. ಉದ್ಯಮದ ಅಂದಾಜು ಪ್ರಕಾರ, ಹೀಗಾದಲ್ಲಿ ಜವಳಿ ಉದ್ಯಮಕ್ಕೆ 4-5 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗಬಹುದು.
ಭಾರತದ ಪ್ರಮುಖ ಗಾರ್ಮೆಂಟ್ಸ್ ಕಂಪನಿಗಳಾದ ವೆಲ್ಸ್ಪನ್ ಲಿವಿಂಗ್, ಗೋಕಲ್ದಾಸ್ ಎಕ್ಸ್ಪೋರ್ಟ್ಸ್, ಇಂಡೋ ಕೌಂಟ್, ಟ್ರಿಡೆಂಟ್ ಮೊದಲಾದವುಗಳ ಪ್ರಮುಖ ಮಾರುಕಟ್ಟೆ ಅಮೆರಿಕವೇ ಆಗಿದೆ. ಇವುಗಳ ಮಾರಾಟ ಶೇ. 40-70ರಷ್ಟು ಕಡಿಮೆ ಆಗುವ ಸಂಭವ ಇದೆ.
ಅಮೆರಿಕ, ಬಾಂಗ್ಲಾದೇಶ ಮತ್ತು ವಿಯೆಟ್ನಾಂನ ಮೇಲೂ ಟ್ಯಾರಿಫ್ ವಿಧಿಸಿದೆ, ಆದರೆ ಅವುಗಳಿಗೆ ಶೇ. 20ರಷ್ಟು ಮಾತ್ರ. ಇದು ಭಾರತಕ್ಕೆ ಹಾಕಿದ ಶೇ. 50ರ ಹೊರೆ ಹೋಲಿಸಿದರೆ, ಅತ್ಯಂತ ಕಡಿಮೆ. ಹೀಗಾಗಿ, ಅಮೆರಿಕ ಕಂಪನಿಗಳು ಈಗ ಭಾರತೀಯ ಕಂಪನಿಗಳ ಬದಲು ಈ ದೇಶಗಳಿಂದ ಗಾರ್ಮೆಂಟ್ಸ್ ಖರೀದಿಸಲು ಮುಂದಾಗಿವೆ.