ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರೀ ಕ್ರೇಜ್ ಹುಟ್ಟಿದೆ. ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವನ್ನು ಹಿಟ್ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ. ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಹೌದು ಥಲೈವಾ ರಜನಿಕಾಂತ್ – ದಕ್ಷಿಣ ಭಾರತ ಮಾತ್ರವಲ್ಲ, ಪ್ಯಾನ್ ಇಂಡಿಯಾ ಮಟ್ಟದಲ್ಲೂ ಬಹು ದೊಡ್ಡ ಸ್ಟಾರ್. ಇನ್ನೊಂದೆಡೆ, ಲೋಕೇಶ್ ಕನಕರಾಜ್ – ‘ಕೈದಿ’, ‘ವಿಕ್ರಂ’, ‘ಮಾಸ್ಟರ್’ ಮುಂತಾದ ಹಿಟ್ ಸಿನೆಮಾ ನೀಡಿದ್ದಾರೆ. ಈ ಇಬ್ಬರೂ ಕೈಜೋಡಿಸುತ್ತಿರುವುದು ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ತಂದಿದೆ. ‘ಕೂಲಿ’ ಸಿನೆಮಾ ಮಾಸ್ , ಕ್ಲಾಸ್ , ಆಕ್ಷನ್ ಎಲ್ಲಾ ಅಂಶಗಳನ್ನೊಳಗೊಂಡ ಮಾಸಿವ್ ಎಂಟರ್‌ಟೈನರ್ ಆಗಿರಲಿದೆ ಎಂಬ ನಿರೀಕ್ಷೆ ಇದೆ.
ಸಿನಿಮಾ ಇನ್ನು ರಿಲೀಸ್ ಆಗಿಲ್ಲ, ಆದರೆ ಬಾಕ್ಸ್ ಆಫೀಸ್‌ನಲ್ಲಿ ಮುಂಗಡ ಬುಕ್ಕಿಂಗ್ ಆಗ್ತಾಯಿದೆ. ಇತ್ತೀಚಿನ ವರದಿಗಳ ಪ್ರಕಾರ, ಕೂಲಿ ಈಗಾಗಲೇ ಮುಂಗಡ ಮಾರಾಟದಿಂದಲೇ ₹20 ಕೋಟಿ ಪೂರೈಸಿದೆ . ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕ, ಯುಕೆ, ಮಲೇಶಿಯಾ, ಆಸ್ಟ್ರೇಲಿಯಾ ಮುಂತಾದ ವಿದೇಶಿ ಮಾರುಕಟ್ಟೆಗಳಲ್ಲಿ ಈ ಸಿನಿಮಾ ಭಾರಿ ಓಪನಿಂಗ್ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಟ್ರೇಡ್ ಅನಾಲಿಸ್ಟ್‌ಗಳ ಪ್ರಕಾರ, ಈ ಸಿನೆಮಾ ಮೊದಲ ದಿನವೇ ₹100+ ಕೋಟಿ ಕಲೆಕ್ಷನ್ ತಲುಪುವ ಸಾಮರ್ಥ್ಯವಿದೆ. ರಜನಿಕಾಂತ್ ಅಭಿಮಾನಿಗಳು, ಫಸ್ಟ್ ಡೇ ಫಸ್ಟ್ ಶೋ ನೋಡಲು ಥಿಯೇಟರ್‌ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಅಭಿಮಾನಿಗಳ ಉತ್ಸಾಹ ಮತ್ತು ಮುಂಗಡ ಬುಕಿಂಗ್ ವ್ಯಾಪ್ತಿಯನ್ನು ನೋಡಿದರೆ, ಈ ಚಿತ್ರವು ಮೊದಲ ದಿನವೇ ಭಾರಿ ಕಲೆಕ್ಷನ್ ಗಳಿಸುವ ಸಾಧ್ಯತೆಯಿದೆ.