Wednesday, August 20, 2025

Latest Posts

ಅಯ್ಯೋ ಪಾಪ… ಸಿದ್ದಿ ಸಾವಿನ ಕಾರಣ ಕೇಳಿ ಎಲ್ರೂ ಶಾಕ್‌ – ಕಾಮಿಡಿ ಕಲಾವಿದನ ದುರಂತಕ್ಕೆ ಬಿಗ್ ಟ್ವಿಸ್ಟ್!

- Advertisement -

ಕಾಮಿಡಿಯಿಂದ ಮನೆ ಮಾತಾದ ಕಲಾವಿದ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಂದ್ರಶೇಖರ್ ಸಿದ್ದಿ, ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ.

ಚಂದ್ರಶೇಖರ್ ಸಿದ್ದಿ ಕಾಮಿಡಿ ಕಿಲಾಡಿಗಳಲ್ಲಿ ಅಬ್ಬರಿಸಿದ್ದ ಪ್ರತಿಭಾವಂತ ಕಲಾವಿದ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಚಿಮನಳ್ಳಿಯ ಸಿದ್ದಿ ಜನಾಂಗಕ್ಕೆ ಸೇರಿದ ಇವರು, ತಮ್ಮ ಕಷ್ಟದ ಹಿನ್ನೆಲೆಯ ನಡುವೆಯೂ ಟಿವಿ ಲೋಕದಲ್ಲಿ ಹೆಜ್ಜೆ ಇಟ್ಟಿದ್ದರು.

ಸಣ್ಣಪುಟ್ಟ ಧಾರಾವಾಹಿಗಳಲ್ಲಿ, ಹಾಸ್ಯ ಪಾತ್ರಗಳಲ್ಲಿ ಜನರ ಮನಗೆದ್ದಿದ್ದರು. ಆದರೆ ಸಮಯ ಸರಿಯಾಗಿ ಸಹಕಾರ ನೀಡಲಿಲ್ಲ. ಅವಕಾಶಗಳು ಕಡಿಮೆಯಾದವು. ನಂತರ ಅವಕಾಶ ಸಿಗದೇ ನೊಂದಿದ್ದರು. ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ.

ಜುಲೈ 31 ರಂದು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ ಚಂದ್ರಶೇಖರ್ ನ ಮೃತದೇಹ ಪತ್ತೆಯಾಗಿತ್ತು. ಆತ್ಮಹತ್ಯೆಗೆ ಕಾರಣ ತಿಳಿಯದ ಕುಟುಂಬದವರು ಕೂಡಲೇ ಪೊಲೀಸರಿಗೆ ದೂರು ನೀಡಿದರು.

ಆದ್ರೆ ಈಗ ಮೂಕ ಸಾಕ್ಷಿಯಂತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಇದರಲ್ಲಿ ಪತ್ನಿ ಪೊರಕೆಯಿಂದ, ಕಟ್ಟಿಗೆಯಿಂದ ಚಂದ್ರಶೇಖರ್ ಮೇಲೆ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ವಿಡಿಯೋ ಕಂಡ ಪ್ರೇಕ್ಷಕರು ಫುಲ್ ಶಾಕ್ ಆಗಿದ್ದಾರೆ. ದಂಪತಿ ಕಲಹವೇ ಆತ್ಮಹತ್ಯೆ ಆತ್ಮಹತ್ಯೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

- Advertisement -

Latest Posts

Don't Miss