ಇಂದು ಸರಯೂ ನದಿ ದಡದ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವಿತ್ತು. ಎಷ್ಟೋ ವರ್ಷದ ರಾಮಮಂದಿರ ಕನಸು ನನಸಾಗುವ ಸಮಯ ಬಂದಿದ್ದು, ಮಂದಿರಕ್ಕಾಗಿ ಭೂಮಿ ಪೂಜೆ ನೆರವೇರಿತು. ಕೇಸರಿಮಯವಾಗಿದ್ದ ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಅಂದದ ಉಡುಪು ತೊಡಿಸಿ, ಅಲಂಕರಿಸಲಾಗಿತ್ತು.

ಪೂಜೆಗಾಗಿ ಅಯೋಧ್ಯೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮೊದಲು ಹನುಮಾನ್ ಗಢಿಗೆ ಹೋಗಿ ರಾಮಬಂಟ ಹನುಮನಿಗೆ ಪೂಜೆ ಸಲ್ಲಿಸಿದರು. ನಂತರ ರಾಮಮಂದಿರ ಭೂಮಿ ಪೂಜೆಯ ನೆನಪಿಗಾಗಿ ರಾಮಮಂದಿರ ಕಟ್ಟುವ ಜಾಗದಲ್ಲಿ ಪಾರಿಜಾತದ ಗಿಡ ನೆಟ್ಟರು. ನಂತರ ರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಧಾನಿ ಮೋದಿ, ಹೋಮ ಹವನದಲ್ಲಿ ಭಾಗವಹಿಸಿದರು.
ತದನಂತರ ಅಭಿಜಿನ್ ಲಘ್ನ, ಶತಭಿಷ ನಕ್ಷತ್ರದಲ್ಲಿ ಸಾಧು ಸಂತರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿದ್ದು, 40 ಕೆಜಿ ಬೆಳ್ಳಿ ಇಟ್ಟಿಗೆ ಇಟ್ಟು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.
ತದನಂತರ ಜೈ ಶ್ರೀರಾಮ್ ಎಂಬ ಘೋಷಣೆ ಕೂಗುವ ಮೂಲಕ ಮಾತು ಶುರು ಮಾಡಿದ ಪ್ರಧಾನಿ ಮೋದಿ, ಇದು ಬರೀ ಅಯೋಧ್ಯೆಯಲ್ಲಿ ಕೇಳಿಬರುತ್ತಿರುವ ಕೂಗಲ್ಲ ಬದಲಾಗಿ ಇಡೀ ವಿಶ್ವಾದಲ್ಲಿ ಜೈ ಶ್ರೀರಾಮ್ ಎಂಬ ಕೂಗು ಕೇಳಿಬರುತ್ತಿದೆ. ಇಡೀ ದೇಶ ಇಂದು ರಾಮನಾಮ ಜಪ ಮಾಡುತ್ತಿದೆ, ಭಾವುಕವಾಗಿದೆ. ಎಷ್ಟೋ ವರ್ಷದ ಕನಸು ನನಸಾಗಿದೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.
ನೀವು ಶ್ರೀರಾಮನ ಶಕ್ತಿ ನೋಡಿ. ಗೋಪುರ ಕೆಡವಲಾಯಿತು. ಅಸ್ತಿತ್ವ ಮುಚ್ಚಿಹಾಕಲು ನೋಡಲಾಯಿತು. ಆದ್ರೆ ಇಂದಿಗೂ ರಾಮ ನಮ್ಮ ನಿಮ್ಮ ಮನಸ್ಸಿನಲ್ಲಿದ್ದಾನೆ. ಇಂದು ರಾಮಮಂದಿರಕ್ಕಾಗಿ ಅಯೋಧ್ಯೆಯಲ್ಲಿ ಭೂಮಿಪೂಜೆಯಾಗುತ್ತಿದೆ. ಈ ದೇವಸ್ಥಾನ ರಾಷ್ಟ್ರದ ಪ್ರತೀಕವಾಗುತ್ತದೆ. ದೇಶದ ಕೋಟಿ ಕೋಟಿ ಸಾಮೂಹಿಕ ಸಂಕಲ್ಪದ ಶಕ್ತಿಯ ಪ್ರತೀಕವಾಗಿರುತ್ತದೆ. ವಿಶ್ವದ ಮೂಲೆ ಮೂಲೆಯಿಂದ ಜನ ಈ ಮಂದಿರ ಕಾಣಲು ಬರುತ್ತಾರೆ. ಇನ್ನುಮುಂದೆ ಅಯೋಧ್ಯೆಯ ಭವ್ಯತೆ ಹೆಚ್ಚುತ್ತದೆ. ಹಲವು ಬದಲಾವಣೆಗಳಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಲ್ಲಿಯೂ ಆತ್ಮನಿರ್ಭರದ ಮಾತನಾಡಿದ ಪ್ರಧಾನಿ, ಸ್ವಾವಲಂಬಿ ಭಾರತ ಕಟ್ಟುವಲ್ಲಿ ನಾವೆಲ್ಲ ಖಂಡಿತ ಸಫಲರಾಗುತ್ತೇವೆ. ನಾವೆಲ್ಲ ಮುಂದುವರೆಯುತ್ತೇವೆ, ದೇಶ ಮುಂದುವರಿಯುತ್ತದೆ ಎಂಬ ನಂಬಿಕೆ ನನಗಿದೆ. ನಿಮಗೆಲ್ಲ ರಾಮ ಸುಖವಾಗಿಟ್ಟಿರಲಿ, ಎಲ್ಲ ದೇಶ ವಾಸಿಗಳ ಮೇಲೆ ರಾಮ ಸೀತೆಯ ಆಶೀರ್ವಾದವಿರಲಿ ಎಂದರು.
ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮೋಹನ್ ಭಾಗವತ್, ಬಾಬಾ ರಾಮ್‌ದೇವ್, ನಿರ್ಮಲಾನಂದ ಸ್ವಾಮೀಜಿ, ಉಮಾಭಾರತಿ ಸೇರಿ ಕೆಲವೇ ಕೆಲವು ಗಣ್ಯರು ಭಾಗವಹಿಸಿದ್ದರು. ರಾಮಮಂದಿರ ಹೋರಾಟಕ್ಕೆ ಸಾಥ್ ಕೊಟ್ಟ ದೇಶದ ಕೆಲ ಸಾಧು ಸಂತರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.