ನಟ ದರ್ಶನ್ ತಮ್ಮ ಸ್ವಯಂಕೃತ ಅಪರಾಧಗಳಿಂದಲೇ ಮತ್ತೆ ಜೈಲಿಗೆ ಹೋಗುವಂತಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಕೀಲರು, ಪ್ರತಿಯೊಂದು ಅಂಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜಾಮೀನನನ್ನ ಏಕೆ ರದ್ದು ಮಾಡಬೇಕು. ಇಲ್ಲವಾದ್ರೆ ಏನಾಗಲಿದೆ. ಹೈಕೋರ್ಟ್ ಜಾಮೀನು ತೀರ್ಪಿನಲ್ಲಿರುವ ಲೋಪವೇನು ಅನ್ನೋ ಬಗ್ಗೆ ಸಮರ್ಥವಾಗಿ ವಾದ ಮಂಡಿಸಿದ್ರು.
1) ಜಾಮೀನು ದುರ್ಬಳಕೆ
ಬೆನ್ನು ನೋವಿನ ನೆಪದಲ್ಲಿ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದಿದ್ದ ದರ್ಶನ್, ಚಿಕಿತ್ಸೆಯ ನೆಪವೊಡ್ಡಿ ಬೇಲ್ ಪಡೆದಿದ್ರು. ಆದ್ರೆ ಜಾಮೀನು ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತಾ, ಸರ್ಕಾರಿ ಪರ ವಕೀಲರು ಆರೋಪಿಸಿದ್ರು. ಬೆನ್ನುನೋವಿನ ನೆಪ ಹೇಳಿ ನ್ಯಾಯಾಲಯಕ್ಕೂ ಗೈರಾಗಿದ್ರು. ಆದರೆ ಮರುದಿನವೇ ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ರು.
2) ಸಾಕ್ಷಿ ಜೊತೆ ದರ್ಶನ್
ಜಾಮೀನು ಸಿಕ್ಕ ಬಳಿಕ ಪ್ರಕರಣದ ಪ್ರಮುಖ ಸಾಕ್ಷಿ ಚಿಕ್ಕಣ್ಣ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನ, ರಾತ್ರಿ ದರ್ಶನ್ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ಚಿಕ್ಕಣ್ಣ ಕೂಡ ಭಾಗಿಯಾಗಿದ್ರು. ದರ್ಶನ್ ಪ್ರಭಾವಿ ವ್ಯಕ್ತಿ. ತಮ್ಮ ಪ್ರಭಾವ ಬಳಸಿ, ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ.
3) ಬಟ್ಟೆ ಮೇಲೆ ಮೃತನ ಡಿಎನ್‌ಎ ಕಲೆ
ಕೊಲೆ ನಡೆದ ಸ್ಥಳದ ಮಣ್ಣು ಮತ್ತು ದರ್ಶನ್ ಪಾದಕ್ಷೆಯ ಮಣ್ಣು ಹೊಂದಾಣಿಕೆಯಾಗಿದೆ. ಮುಖ್ಯವಾಗಿ ಮೃತ ರೇಣುಕಾಸ್ವಾಮಿಯ ಡಿಎನ್‌ಎ ಕಲೆಗಳು, ಆರೋಪಿಗಳ ಬಟ್ಟೆ ಮೇಲೆ ಪತ್ತೆಯಾಗಿದೆ.
4) ಎಲೆಕ್ಟ್ರಾನಿಕ್ ಸಾಕ್ಷ್ಯ
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ವಿಧಿವಿಜ್ಞಾನದ ಸಾಕ್ಷಿ ಜೊತೆಗೆ, ಸಿಸಿಟಿವಿ ದೃಶ್ಯಗಳ ಸಾಕ್ಷಿಗಳೂ ಇವೆ. ಈ ಮೂಲಕ ಕೊಲೆಯಲ್ಲಿ ದರ್ಶನ್ ಪಾತ್ರ ಬಯಲಾಗಿದೆ.
5) ಹೈಕೋರ್ಟ್‌ನಿಂದ ಅವಸರದ ತೀರ್ಮಾನ
ಸೆಷನ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಕೇಸ್, ಆರೋಪ ನಿಗದಿ ಹಂತಕ್ಕೆ ಬಂದಿಲ್ಲ. ಸಾಕ್ಷಿ ವಿಚಾರಣೆ ವಿಳಂಬ ಹಿನ್ನೆಲೆ, ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೊಂದು ಅವಸರದ ತೀರ್ಮಾನ. ಮಧ್ಯಪ್ರವೇಶ ಮಾಡುವ ಅವಶ್ಯಕತೆ ಇದೆ. ರೇಣುಕಾಸ್ವಾಮಿ ಹಲ್ಲೆ ಮಾಡಿರುವುದಾಗಿ ಕೇಸ್‌ನ 76, 91ನೇ ಪ್ರತ್ಯಕ್ಷ ಸಾಕ್ಷಿಗಳು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿವೆ. ಹೈಕೋರ್ಟ್ ಈ ಅಂಶವನ್ನು ಪರಿಗಣಿಸಿಲ್ಲ.