- Advertisement -
ಇದ್ರೆ ನೆಮ್ದಿಯಾಗಿ ಇರಬೇಕು ಎನ್ನುತ್ತಿದ್ದ ನಟ ದರ್ಶನ್‌ಗೆ, ಡೆವಿಲ್ ಸಿನಿಮಾ ರಿಲೀಸ್‌ಗೂ ಮುನ್ನವೇ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದರ್ಶನ್ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ. ಈ ಹಿಂದೆ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್‌ಗೆ, ವಿಶೇಷ ವ್ಯವಸ್ಥೆ, ಆತಿಥ್ಯ ನೀಡಲಾಗಿತ್ತು. ಈ ಬಾರಿ ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಕೊಡಬಾರದೆಂದು ಕಟ್ಟಪ್ಪಣೆ ವಿಧಿಸಿದೆ. VIP ಟ್ರೀಟ್‌ಮೆಂಟ್ ಕೊಟ್ರೆ, ಜೈಲು ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ
ಸೆಂಟ್ರಲ್ ಜೈಲಿನಲ್ಲಿ ಸಿಕ್ಕಿದ್ದೇನು?
5 ಸ್ಟಾರ್ ಹೋಟೆಲ್ ಸೌಲಭ್ಯ
ವಿಶೇಷ ಬ್ಯಾರಕ್ ವ್ಯವಸ್ಥೆ
ಚಿಕನ್ ಬಿರಿಯಾನಿ,
ಮನೆಯೂಟ, ಪೌಷ್ಠಿಕ ಆಹಾರ,
ಟೀ-ಕಾಫಿ, ಸಿಗರೇಟ್, ಫೋನ್,
ಸಹ ಕೈದಿಗಳ ಜೊತೆ ಹರಟೆ
ರೌಡಿಶೀಟರ್ ಪುತ್ರನ ಜೊತೆ ವಿಡಿಯೋ ಕಾಲ್
ವಿಶೇಷ ಹಾಸಿಗೆ, ಮಂಚ
ಬಳ್ಳಾರಿ ಜೈಲಿನಲ್ಲಿ ಸಿಕ್ಕಿದ್ದೇನು?
ಸಿಂಗಲ್ ಸೆಲ್
ವಿಶೇಷ ಮಂಚ, ಹಾಸಿಗೆ
ಬೆನ್ನುನೋವಿನ ಕಾರಣಕ್ಕೆ ಸ್ಪೆಷಲ್ ಟ್ರೀಟ್‌ಮೆಂಟ್
ಸರ್ಜಿಕಲ್ ಕಮೋಡ್ ಚೇರ್
ಮನೆಯಿಂದಲೇ ಬಟ್ಟೆ ತರಿಸಿಕೊಳ್ತಿದ್ರು
ಪ್ರತ್ಯೇಕ ಟಿವಿ
- Advertisement -