Wednesday, August 20, 2025

Latest Posts

ನಟ ದರ್ಶನ್‌ ಬೇಲ್‌ ರದ್ದು – ಸುಪ್ರೀಂಕೋರ್ಟ್‌ ಹೇಳಿದ್ದೇನು?

- Advertisement -

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ, ನಟ ದರ್ಶನ್‌ ಬೇಲ್‌ ರದ್ದಾಗಿದೆ. ಹೈಕೋರ್ಟ್ ಜಾಮೀನು ನೀಡುವಾಗ ವಿವೇಚನೆ ಬಳಸಿಲ್ಲ ಎಂದಿರುವ ಸುಪ್ರೀಂಕೋರ್ಟ್‌, ಆರೋಪಿಗಳನ್ನು ತಕ್ಷಣವೇ ಬಂಧಿಸಲು ಆದೇಶಿಸಿದೆ. ಎ1 ಪವಿತ್ರಾ ಗೌಡ , ಎ2 ದರ್ಶನ್‌, ಎ6 ಜಗದೀಶ್‌, ಎ14 ಪ್ರದೂಷ್‌, ಎ11 ನಾಗರಾಜ್‌, ಎ7 ಅನುಕುಮಾರ್‌, ಎ12 ಲಕ್ಷ್ಮಣ್‌ ಶರಣಾಗದಿದ್ದರೆ, ವಶಕ್ಕೆ ಪಡೆಯಿರಿ ಅಂತಾ ಸೂಚನೆ ನೀಡಿದೆ.

ಇನ್ನು, ಸಾಕ್ಷಿಗಳ ವಿಚಾರಣೆಯನ್ನು ಶೀಘ್ರವೇ ಮುಗಿಸುವಂತೆ, ಕೆಳಹಂತದ ಕೋರ್ಟ್‌ಗೆ ನಿರ್ದೇಶನ ನೀಡಿದೆ. ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಿದ್ದಕ್ಕೆ ಸುಪ್ರಿಂ ಗರಂ ಆಗಿದೆ. ಜೈಲರ್‌ನನ್ನೇ ಸಸ್ಪೆಂಡ್‌ ಮಾಡಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಜೈಲಲ್ಲಿ ರಾಜಾತಿಥ್ಯ ಕೊಟ್ಟರೆ ಸುಮ್ಮನಿರಲ್ಲ. ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳುತ್ತೇವೆ. ದರ್ಶನ್‌ ಜೈಲಿನಲ್ಲಿದ್ದಾಗ ಯಾವುದೇ ಫೋಟೋ ಹೊರಬಂದರೆ ಕ್ರಮಕೈಗೊಳ್ಳುತ್ತೇವೆ. ಹೀಗಂತ ಪರಪ್ಪನ ಅಗ್ರಹಾರ ಜೈಲಾಧಿಕಾರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದೆ.

ದರ್ಶನ್‌ ಕೇಸ್‌ ಹಿಸ್ಟರಿ

ಜೂನ್‌ 07, 2024 – ರೇಣುಕಾಸ್ವಾಮಿ ಕೊಲೆ ಪ್ರಕರಣ ಬಯಲು
ಜೂನ್‌ 11, 2024 – ದರ್ಶನ್‌, ಪವಿತ್ರಾ ಗೌಡ ಬಂಧನ
ಆಗಸ್ಟ್‌ 29, 2025 – ಬಳ್ಳಾರಿಗೆ ದರ್ಶನ್‌ ಶಿಫ್ಟ್‌
ಅಕ್ಟೋಬರ್‌ 30, 2024 – ದರ್ಶನ್‌ಗೆ ಮೆಡಿಕಲ್‌ ಬೇಲ್
98 ದಿನಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ರಿಲೀಸ್
ಡಿಸೆಂಬರ್‌ 13, 2024 – ಎಲ್ಲಾ ಆರೋಪಿಗಳಿಗೆ ರೆಗ್ಯೂಲರ್‌ ಬೇಲ್‌
ಜನವರಿ 07, 2025 – ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ಜುಲೈ 17, 2025 – ಜಾಮೀನು ನೀಡಿದ್ದಕ್ಕೆ ಸುಪ್ರೀಂ ಅಸಮಾಧಾನ
ಜುಲೈ 22, 2025 – ವಕೀಲ ಸಿದ್ಧಾರ್ಥ್‌ ದವೆ ಸಮಯ ಕೇಳಿದ್ದಕ್ಕೆ ಮುಂದೂಡಿಕೆ
ಆಗಸ್ಟ್‌ 06, 2025 – ವಾದ, ಪ್ರತಿವಾದ ಸಲ್ಲಿಕೆ

2025ರ ಆಗಸ್ಟ್‌ 14ರಂದು, ಸುಪ್ರೀಂಕೋರ್ಟ್‌ ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಿ ತೀರ್ಪು ಹೊರಡಿಸಿದೆ.

 

 

 

- Advertisement -

Latest Posts

Don't Miss