ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಅರೆಸ್ಟ್ ಆಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಇದ್ದರೂ ದರ್ಶನ್ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಬೇಲ್ ರದ್ದು ಮಾಡಿದ್ದ ಸುಪ್ರೀಂಕೋರ್ಟ್, ತಕ್ಷಣವೇ ಬಂಧಿಸುವಂತೆ ಆದೇಶಿಸಿತ್ತು. ಸುಪ್ರೀಂ ಆದೇಶದಂತೆ, ದರ್ಶನ್‌ಗಾಗಿ ಪೊಲೀಸರು ಹುಡುಕಾಡಿದ್ದಾರೆ. ದರ್ಶನ್ ಕುಟುಂಬಸ್ಥರನ್ನೂ ಪೊಲೀಸರು ವಿಚಾರಿಸಿದ್ದರು.
ತಮಿಳುನಾಡಿನತ್ತ ಹೋಗಿದ್ದ ದರ್ಶನ್‌ಗೆ, ಬೇಲ್ ರದ್ದಾದ ವಿಷಯವನ್ನು ಕೂಡಲೇ ತಿಳಿಸಲಾಗಿದೆ. ಸಂಜೆ 4.30ರೊಳಗೆ ತಾವೇ ಬಂದು ಸೆರೆಂಡರ್ ಆಗೋದಾಗಿ ದರ್ಶನ್ ಹೇಳಿದ್ದಾರೆ. ಅಷ್ಟರಲ್ಲಾಗಲೇ ದರ್ಶನ್‌ಗಾಗಿ, ಹೊಸಕೆರೆಹಳ್ಳಿಯಲ್ಲಿ ನಿವಾಸದಲ್ಲಿ ಪೊಲೀಸರು ಕಾದು ಕುಳಿತಿದ್ರು.
ಪ್ರೇಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್‌ಮೆಂಟಿನ 15ನೇ ಮಹಡಿಯಲ್ಲಿ, 4,154ನೇ ನಂಬರ್‌ನಲ್ಲಿ ವಿಜಯಲಕ್ಷ್ಮೀ ಫ್ಲಾಟ್ ಇದೆ. ಮಧ್ಯಾಹ್ನದ ಬಳಿಕ ಫ್ಲ್ಯಾಟ್‌ಗೆ ಬಂದ ದರ್ಶನ್, ಮಾಧ್ಯಮಗಳ ಕಣ್ಣು ತಪ್ಪಿಸಲು ಕಾರನ್ನೇ ಬದಲಿಸಿದ್ರು.
ಬೆಂಗಳೂರಿನಿಂದ ಹೋಗುವಾಗ ಕೆಂಪು ಬಣ್ಣದ ರ್ಯಾಂಗ್ಲರ್ ಜೀಪ್‌ನಲ್ಲಿ ಹೋಗಿದ್ರು. ಆದರೆ ಬರುವಾಗ ಇನ್ನೋವಾ ಕಾರಲ್ಲಿ ವಾಪಸ್ ಆಗಿದ್ದಾರೆ. ಬೆಂಗಳೂರಿನ ಹೊರವಲಯಕ್ಕೆ ಬರುತ್ತಿದ್ದಂತೆ ನೈಸ್ ರೋಡಲ್ಲಿ, ಜೀಪ್ ಬಿಟ್ಟು ಕಾರಿಗೆ ಹತ್ತಿದ್ದಾರೆ. ಇದನ್ನ ಇನ್ಸ್‌ಪೆಕ್ಟರ್ ಒಬ್ಬರು ನೋಡಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ದರ್ಶನ್‌ಗಾಗಿ ರಣಹದ್ದಿನ ರೀತಿ ಹೊಸಕೆರೆಹಳ್ಳಿ ನಿವಾಸದಲ್ಲಿ ಕಾಯುತ್ತಿದ್ದ ಪೊಲೀಸರು ಅಲರ್ಟ್ ಆಗಿದ್ರು. ಅಪಾರ್ಟ್‌ಮೆಂಟ್ ಸುತ್ತ, ವಿಜಯಲಕ್ಷ್ಮೀ ನಿವಾಸ ಬಳಿ ಕಾದು ಕುಳಿತಿದ್ರು. ಮಧ್ಯಾಹ್ನದ ಬಳಿಕ ಮನೆಗೆ ದರ್ಶನ್ ಎಂಟ್ರಿ ಕೊಟ್ಟಿದ್ರು. ಮಾಧ್ಯಮಗಳ ಕಣ್ಣು ತಪ್ಪಿಸಲು, ಫ್ಲ್ಯಾಟಿನ ಹಿಂಬದಿ ಗೇಟ್‌ನಿಂದ ಎಂಟ್ರಿ ಕೊಟ್ಟಿದ್ರು.
ವಿಜಯಲಕ್ಷ್ಮೀ ಫ್ಲಾಟ್ ಬಳಿ ಕಾದು ನಿಂತಿದ್ದ ಪೊಲೀಸರು, ದರ್ಶನ್ ಬರುತ್ತಿದ್ದಂತೆ ಲಾಕ್ ಮಾಡಿದ್ದಾರೆ. ಗೋವಿಂದ ರಾಜನಗರ ಠಾಣೆ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ, ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್ ನಾಗೇಶ್ ನೇತೃತ್ವದ ತಂಡ, ದರ್ಶನ್‌ನನ್ನ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸದ್ಯ, ಅನ್ನಪೂರ್ಣೇಶ್ವರಿ ಠಾಣೆಗೆ ದರ್ಶನ್‌ನನ್ನ ಕರೆದುಕೊಂಡು ಹೋಗಿದ್ದಾರೆ. ಬಿಳಿ ಬಣ್ಣದ ಮಾಸ್ಕ್ ಧರಿಸಿ ಪೊಲೀಸರ ಜೊತೆ, ದರ್ಶನ್ ಹೋಗಬೇಕಾಯ್ತು.