ಈ ಬಾರಿ ದೇಶಾದ್ಯಂತ ಅದ್ಧೂರಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಕೋವಿಂಡ್ 19 ಕಾರಣದಿಂದ ಪ್ರತೀ ವರ್ಷದಂತೆ ಈ ವರ್ಷ ಅದ್ದೂರಿ ಗಣೇಶೋತ್ಸವ ಆಚರಣೆ ಮಾಡುವಂತಿಲ್ಲ. ಆದ್ರೆ ಈ ಬಾರಿಯ ಗಣೇಶ ಚತುರ್ಥಿ ಸಿಂಪಲ್ ಆಗಿದ್ರೂ ಡಿಫ್ರೆಂಟ್ ಆಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೋಡೋಣ ಬನ್ನಿ.

ವಿಶ್ವದೆಲ್ಲೆಡೆ ಕೊರೊನಾ ಭೀತಿ ಹೆಚ್ಚಿದೆ. ಹಲವರು ಗುಣಮುಖರಾಗಿದ್ದರೂ ಕೂಡ, ಕೊರೊನಾ ವೈರಸ್ ತಗುಲಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ಹಲವರ ಜೀವನ ಅಸ್ತವ್ಯಸ್ತವಾಗಿದೆ. ಆದ್ದರಿಂದ ಈ ಬಾರಿ ಬರುವ ಗಣೇಶ ಕೊರೊನಾ ಮಹಾಮಾರಿಯಿಂದ ಜನರನ್ನ ಬಚಾವ್ ಮಾಡಲಿ, ಅವನ ಕೃಪೆಯಿಂದ ಜನ ಮೊದಲಿನಂತೆ ಜೀವನ ನಡೆಸುವಂತಾಗಲಿ ಎಂದು ಈ ಬಾರಿ ಗಣೇಶ ಮೂರ್ತಿಯನ್ನು ಡಿಫ್ರೆಂಟ್ ಆಗಿ ನಿರ್ಮಿಸಲಾಗುತ್ತಿದೆ.
ಈ ಬಾರಿಯ ಗಣಪ, ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಹಿಡಿದು, ಕೊರೊನಾ ಸಂಹರಿಸಲು ಬರುತ್ತಿದ್ದಾನೆ. ಈ ಬಾರಿಯ ಗಣೇಶೋತ್ಸವದ ಕಾನ್ಸೆಪ್ಟ್ ಈ ರೀತಿ ಇದ್ದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಕೆಲ ಗಣೇಶ ಡಾಕ್ಟರ್ ರೂಪದಲ್ಲಿ ಬಂದ್ರೆ ಅವನ ಜೊತೆ ಇಲಿ ನರ್ಸ್ ಆಗಿ ಬಂದಿದೆ. ಕೆಲ ಗಣೇಶ ಕೊರೊನಾ ಸಂಹಾರನಾಗಿ ಕಂಡಿದ್ದಾನೆ. ಇನ್ನು ಕೆಲ ಗಣೇಶ ಕೊರೊನಾಸುರನ ಮೇಲೆ ನಿಂತು ನಾಟ್ಯವಾಡುವಂತೆ ಕಂಡಿದ್ದಾನೆ.
ಒಟ್ಟಿನಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ನಮಗೆ ಕೊರೊನಾ ಕಾನ್ಸೆಪ್ಟ್ ಕಾಣುವುದಂತೂ ನಿಜ. ಗಣೇಶನ ಆಗಮನದಿಂದ ಕೊರೊನಾಸುರನ ಆರ್ಭಟ ನಿಂತು ಜನಜೀವನ ಉತ್ತಮವಾಗಿರಲಿ ಎಂಬುದೇ ಎಲ್ಲರ ಆಶಯ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.