ದರ್ಶನ್ ಅವರು ಬೇಲ್ ರದ್ದಾಗಿ, ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತೂಮ್ಮೆ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ನಟಿ ರಮ್ಯ ಸಾಮಾಜಿಕ ಜಾಲಾತಾಣಗಳಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಅಂತಾ ಸಾಕಷ್ಟು ಪೋಸ್ಟ್ಗಳನ್ನು ಹಾಕಿದ್ದರು. ಇದಕ್ಕೆ ಸಿಡೆದಿದ್ದ ರಮ್ಯಾ ಅವರು ದರ್ಶನ್ ಫ್ಯಾನ್ಸ್ ನಿಂದ ಅಶ್ಲೀಲ ಕಮೆಂಟ್ ಗಳು ಬಂದಾಗ ಕಾನೂನು ಕ್ರಮ ಕೈಗೊಂಡಿದ್ದರು.
ಇದೆಲ್ಲಾ ಆದ ನಂತರ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ನಟಿ ರಮ್ಯಾ, ನನ್ನಿಂದ ಹೆಣ್ಣು ಮಕ್ಕಳಿಗೆ ಧೈರ್ಯ ಬಂದಿರೊದು ಖುಷಿಯಾಗಿದೆ. ಕಮೀಷನರ್ ಹತ್ತಿರ ಮಾತನಾಡಿದ್ದೇನೆ, ಎಷ್ಟೊ ಅರೆಸ್ಟ್ಗಳು ಆಗುತ್ತ ಇದೆ. ಇನ್ನು ಹಾಗಬೇಕು ಆದರೆ ಎಷ್ಟೊಂದು ಜನ ಅವರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಇಲ್ಲಿವರೆಗೆ ಏಳು ಜನ ಅರೆಸ್ಟ್ ಆಗಿದ್ದಾರೆ. ಮುಂದಕ್ಕೆ ಇನ್ನಷ್ಟು ಜನ ಅರೆಸ್ಟ್ ಆಗ್ತಾರೆ. ಕಮೆಂಟ್ ಸೆಕ್ಷನ್ ಸ್ವಚ್ಚ ಭಾರತ ಆಗಿದೆ.
ರೇಣುಕಾ ಸ್ವಾಮಿ ಕುಟುಂಬಕ್ಕೆ ಅದರಲ್ಲೂ ಅವರ ಹೆಂಡತಿಗೆ ನ್ಯಾಯ ಸಿಕ್ಕಿದೆ. ದರ್ಶನ್ ನನಗೆ ಪರಿಚಯ ಅವರ ಜೊತೆ ಕೆಲಸ ಮಾಡಿದ್ದೇನೆ. ಲೈಟ್ ಬಾಯ್ ಆಗಿ ಇಂಡಸ್ಟ್ರಿ ಗೆ ಬಂದು ತುಂಬಾ ಚೆನ್ನಾಗಿ ಬೆಳೆದ್ರು ನಮ್ಮ ಇಂಡಸ್ಟ್ರಿಯಲ್ಲಿ. ಒಳ್ಳೆಯ ಹೆಸರು ಮಾಡಿದ್ರು, ಆ ಬೆಳವಣಿಗೆ ನೋಡಿ ಹೆಮ್ಮೆಯಾಗಿತ್ತು. ಆದರೆ ಇವತ್ತು ಈಗೆಲ್ಲಾ ಆಗ್ದೆ ಹೋಗಿದ್ರೆ ಇನ್ನು ಚೆನ್ನಾಗಿ ಇರುತ್ತ ಇದ್ರು. ಆದರೆ ಅವರೇ ಅವರ ಜೀವನ ಹಾಳು ಮಾಡಿಕೊಂಡರು.
ನಾವು ಒಂದು ಸಮಾಜದಲ್ಲಿದ್ದೀವಿ. ಕಾನೂನು ಅಂದ್ರೆ ಒಂದೇ ಸೋ ನನಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಖುಷಿಯಿದೆ. ಇನ್ನು ದರ್ಶನ್ ಅವರು ಜೈಲಿಗೆ ಹೋಗಿದ್ರಿಂದ ಇಂಡಸ್ಟ್ರಿ ಗೆ ಲಾಸ್ ಆಗುತ್ತಾ ಎಂಬ ಪ್ರಶ್ನೆ ಗೆ ಉತ್ತರ ಕೊಟ್ಟ ರಮ್ಯ, ಕಥೆ ಚೆನಾಗಿದ್ರೆ ದೊಡ್ಡ ಹೀರೋನೆ ಬೇಕಾಗಿಲ್ಲ ಎಲ್ಲ ಬಂದು ಸಿನಿಮಾ ನೋಡ್ತಾರೆ. ಸಿನಿಮಾನೆ ಮುಖ್ಯ ಅಲ್ಲ ಸಮಾಜ ಮುಖ್ಯ ಎಂದು ಹೇಳಿದರು.
ವಿಜಯಲಕ್ಷ್ಮಿ ಅವರು ಒಂದು ಹೆಣ್ಣು ಅವರಿಗೂ ಅರ್ಥ ಆಗುತ್ತೆ. ಈ ತರ ಎಲ್ಲಾ ಮಾಡಬಾರದು ತಪ್ಪು ಅಂತಾ. ನನಗೆ ನಂಬಿಕೆ ಇದೆ ವಿಜಯಲಕ್ಷ್ಮಿಯವರು ಅವರ ಅಭಿಮಾನಿಗಳನ್ನು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಲಿ ಅದು ಒಳ್ಳೆಯ ಬೆಳವಣಿಗೆ ಎಂದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ