ಧರ್ಮಸ್ಥಳದಲ್ಲಿ ದೂರು ಕೊಟ್ಟಿರುವ ಸುಜಾತಾ ಭಟ್ ರಿಲೀಸ್ ಮಾಡಿದ್ದು, ಅನನ್ಯಾ ಭಟ್ ಫೋಟೋ ಅಲ್ಲ. 2007ರಲ್ಲಿ ಮೃತಪಟ್ಟಿದ್ದ ವಾಸಂತಿ ಎಂಬಾಕೆಯ ಫೋಟೋ ರಿಲೀಸ್ ಮಾಡಿದ್ದಾರೆ ಎನ್ನಲಾಗ್ತಿದೆ.
ಕಳೆದ ಜುಲೈ 20ರಂದು ದಕ್ಷಿಣ ಕನ್ನಡ ಎಸ್‌ಪಿಗೆ, ಸುಜಾತಾ ಭಟ್ ದೂರು ನೀಡಿದ್ರು. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ. ಆಕೆ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಓದ್ದುತ್ತಿದ್ಲು. 2003ರಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ನಾಪತ್ತೆಯಾಗಿದ್ಲು. ದೇವಸ್ಥಾನದ ಸಿಬ್ಬಂದಿ, ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನ ಕೆಲವರು ನೋಡಿದ್ದಾರೆ. ಬೆಳ್ತಂಗಡಿ ಠಾಣೆಗೆ ಹೋದಾಗ, ದೂರು ದಾಖಲಿಸಿಕೊಳ್ಳದೆ ಬೈದು ಕಳಿಸಿದ್ರು ಅಂತಾ, ಸುಜಾತಾ ಭಟ್ ದೂರಿನಲ್ಲಿ ಉಲ್ಲೇಖಿಸಿದ್ರು.
ಬಳಿಕ ಅನನ್ಯಾ ಭಟ್ ಪ್ರಕರಣದ ತನಿಖೆಗೆ, ಎಸ್‌ಐಟಿ 1 ತಂಡ ಮುಂದಾಗಿತ್ತು. ಈ ವೇಳೆ ಅನನ್ಯಾ ಭಟ್ ಬಗ್ಗೆ ವಿವರಗಳನ್ನು ಕೇಳಿದ್ದಾರೆ. ಆದ್ರೆ ಸುಜಾತಾ ಭಟ್ ಕೊಟ್ಟಿಲ್ಲ. ಮಣಿಪಾಲದ ವೈದ್ಯಕೀಯ ಕಾಲೇಜಿನಲ್ಲಿ ವಿಚಾರಿಸಿದ್ರೂ, ಸುಳಿವಿಲ್ಲ. ಇಲ್ಲಿಂದ ಅಧಿಕಾರಿಗಳಿಗೆ, ಸುಜಾತಾ ಭಟ್ ಮೇಲೆ ಅನುಮಾನ ಶುರುವಾಗಿತ್ತು.
ಸದ್ಯ, ಸುಜಾತಾ ಭಟ್, ಮಗಳೆಂದು ಹೇಳಿ ಫೋಟೋವೊಂದನ್ನ ರಿಲೀಸ್ ಮಾಡಿದ್ರು. ಆದ್ರೀಗ, ಬೇರೆ ಫೋಟೋವನ್ನು, ಕೊಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ.
ರಂಗಪ್ರಸಾದ್ ಎನ್ನುವರರ ಸೊಸೆ ವಾಸಂತಿ ಅಂತೆ. 2005ರ ನಂತರ ಬೆಂಗಳೂರಿಗೆ ಸುಜಾತಾ ಭಟ್ ಬಂದಿದ್ದು ನಿಜ. ರಂಗಪ್ರಸಾದ್ ಎಂಬುವರ ಜೊತೆ, ಲೀವಿಂಗ್ ರಿಲೇಷನ್‌ಷಿಪ್‌ಗೆ ಬಿದ್ದಿದ್ದು ಸತ್ಯ ಎನ್ನಲಾಗ್ತಿದೆ. ಈ ರಂಗಪ್ರಸಾದ್ ಬಿಇಎಲ್‌ನ ನಿವೃತ್ತ ಸಿಬ್ಬಂದಿ. ಅವರ ಪತ್ನಿ ಕೂಡ ಬಿಇಎಲ್‌ನಲ್ಲಿ ಕೆಲಸ ಮಾಡ್ತಿದ್ರು. ಪತ್ನಿ ಮೃತಪಟ್ಟ ಬಳಿಕ ರಂಗಪ್ರಸಾದ್ ಒಬ್ಬಂಟಿಯಾಗಿ ಇದ್ದರು. ರಂಗಪ್ರಸಾದ್ ಮನೆ ಕೆಂಗೇರಿ ಉಪನಗರದಲ್ಲಿದೆ. ಇವರಿಗೆ ಒಬ್ಬ ಮಗ ಹಾಗೂ ಮಗಳು. ಪತ್ನಿಯ ನಿಧನದ ಬಳಿಕ ಇಬ್ಬರೂ ಮಕ್ಕಳಿಗೆ ಮದುವೆ ಮಾಡಿದ್ದಾರೆ. ಈ ಹಂತದಲ್ಲಿ ಒಬ್ಬಂಟಿಯಾಗಿದ್ದ ರಂಗಪ್ರಸಾದ್‌ಗೆ ಸುಜಾತಾ ಪರಿಚಯವಾಗಿದೆ. ಕೆಲವೇ ದಿನಗಳಲ್ಲಿ ರಂಗಪ್ರಸಾದ್ ಮನೆಗೇ ಸುಜಾತಾ ಸೇರಿಕೊಂಡಿದ್ರಂತೆ.
ಗಂಡನನ್ನು ತೊರೆದು ಕೊಡಗಿನಲ್ಲಿದ್ದ ತವರು ಮನೆ ಸೇರಿಕೊಂಡಿದ್ದ ಸೊಸೆ ವಾಸಂತಿ, ಅನುಮಾನಾಸ್ಪದವಾಗಿ 2007ರಲ್ಲಿ ಸಾವನ್ನಪ್ಪಿದ್ರು. ಬಳಿಕ ಕುಡಿತಕ್ಕೆ ಬಿದ್ದಿದ್ದ ಮಗ ಶ್ರೀವತ್ಸ, 2011ರಲ್ಲಿ ಸಾವನ್ನಪ್ಪಿದ್ದ. ಬಳಿಕ ಇಡೀ ಮನೆ ಮೇಲೆ ಹಿಡಿತ ಸಾಧಿಸಿದ ಸುಜಾತ, ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನ ಮೂಲಕ, ಮನೆಯನ್ನೇ ಮಾರಿಸಿಬಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಬಾಡಿಗೆ ಮನೆಯಲ್ಲಿದ್ದ ರಂಗನಾಥ್ 2025ರ ಜನವರಿ 12ರಂದು ಮೃತಪಟ್ಟಿದ್ದಾರಂತೆ.