Wednesday, August 20, 2025

Latest Posts

75 ಹುಲಿಗಳ ಸಾವು – ಬೆಚ್ಚಿ ಬೀಳಿಸಿದ ಅಂಕಿ-ಅಂಶ!

- Advertisement -

ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ 75 ಹುಲಿಗಳು ಮೃತಪಟ್ಟಿವೆ. ರಾಜ್ಯದ ಐದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಳೆದ ಐದು ವರ್ಷಗಳಲ್ಲಿ 2020 ರಿಂದ 2025ರ ಅವಧಿಯಲ್ಲಿ ಒಟ್ಟು 75 ಹುಲಿಗಳು ಸಾವನ್ನಪ್ಪಿದ್ದು, ಇದರಲ್ಲಿ 62 ನೈಸರ್ಗಿಕ, ಹಾಗು 13 ಅನೈಸರ್ಗಿಕ ಕಾರಣಗಳಿಂದ ಮೃತಪಟ್ಟಿರುವುದು ವರದಿಯಾಗಿದೆ.

ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ-ಅಂಶಿ ಮತ್ತು ಬಿ.ಆರ್.ಟಿ. ಹುಲಿಸಂರಕ್ಷಿತ ಪ್ರದೇಶಗಳು. ಅರಣ್ಯ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 26 ಮತ್ತು ಬಂಡೀಪುರದಲ್ಲಿ 22, ಬಿ.ಆರ್.ಟಿ 8, ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳು ಸಾವನ್ನಪ್ಪಿವೆ.

ಮೃತ್ಯುವೊಂದರ ಹಿಂದೆ ಇರುವ ನೈಸರ್ಗಿಕ ಕಾರಣಗಳಲ್ಲಿ ವಯೋಸಹಜ ಕಾಯಿಲೆಗಳು, ಹುಲಿಗಳ ನಡುವಿನ ಸಂಘರ್ಷ ಮತ್ತು ಬಾಧ್ಯ ರೋಗಗಳು ಮುಖ್ಯವಾಗಿವೆ ಎಂದಿದ್ದಾರೆ. ಆದರೆ 13 ಅನೈಸರ್ಗಿಕ ಸಾವುಗಳು ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿವೆ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಹುಲಿಗಳಾಗಿಯೇ ವಿಷಪ್ರಾಶನದಿಂದ ಐದು ಸಾವುಗಳು ಸಂಭವಿಸಿದ್ದು, ತನಿಖೆಯಲ್ಲಿ ಸೇಡು ತೀರಿಸಿಕೊಳ್ಳಲು ಹುಲಿಗೆ ವಿಷಮಿಶ್ರಿತ ಮಾಂಸ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಆರೋಪಿ ಬಂಧನವಾಗಿದೆ.

ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಇಡಲಾಗಿದ್ದ ಬಲೆಗಳಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಹುಲಿ ಸಿಕ್ಕಿ ಸಾವನ್ನಪ್ಪಿವೆ. ಒಂದು ಹುಲಿ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದೆ. ರೈಫಲ್ ದಾಳಿ ಮತ್ತು ಗುಂಡಿಗೆ ಎರಡು ಹುಲಿಗಳು ಬಲಿಯಾಗಿವೆ. ಮೈಸೂರಿನ ವ್ಯಾಪ್ತಿಯಲ್ಲಿ ಕೇವಲ ಒಂದರಿಂದ ಎರಡು ವರ್ಷದ ಗಂಡು ಎಳೆಯ ಹುಲಿಯನ್ನೂ ಬೇಟೆದಾರರು ಕೊಂದಿದ್ದಾರೆ. ಸದ್ಯ ಈ ಸಾವಿನ ಸಂಖ್ಯೆಗಳು ಹುಲಿ ಸಂರಕ್ಷಣೆಗೆ ದೊಡ್ಡ ಎಚ್ಚರಿಕೆಯಾಗಿವೆ.

- Advertisement -

Latest Posts

Don't Miss