ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುಜಾತ ಭಟ್ ನನ್ನ ಮಗಳು ಅಂತ ಕೊಟ್ಟಿದ್ದ ಫೋಟೋ ಬಗ್ಗೆ ಗುಮಾನಿಗಳು ಎದ್ದಿದ್ದವು. ಯಾರದ್ದೋ ಫೋಟೋ ಕೊಟ್ಟು ಸುಜಾತ ಭಟ್ ಈಗ ಸಿಕ್ಕಿ ಹಾಕಿಕೊಂಡ್ರಾ ಎಂಬ ಪ್ರಶ್ನೆಗಳು ಎದ್ದಿವೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆಗಿದ್ದವು. ಅಸಲಿಗೆ ಸುಜಾತ ಭಟ್‌ಗೆ ಮಕ್ಕಳೇ ಇಲ್ಲ ಎಂದು ಅವರ ಸಂಬಂಧಿಗಳು ತಿಳಿಸಿದ್ದರು. ಹೀಗಾಗಿ ಸುಜಾತ ಭಟ್ ಒತ್ತಡಕ್ಕೆ ಸಿಲುಕ್ಕಿದ್ದು ತಾನು ಮಾಡಿದ್ದ ಆರೋಪಕ್ಕೆ ಯಾವುದಾದರೊಂದು ಸಾಕ್ಷಿ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಇದರ ಬೆನ್ನಲ್ಲೇ ಲಾಯರ್ ಜೊತೆ ಬಂದ ಸುಜಾತ ಭಟ್. ಇವಳೇ ನನ್ನ ಮಗಳು ಅನನ್ಯಾ ಭಟ್ ಎಂದು ಫೋಟೋ ರಿಲೀಸ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಇರೋದು ಅನನ್ಯಾ ಭಟ್ ಅಲ್ಲ. ನನ್ನ ತಂಗಿ ವಾಸಂತಿ ಎಂದು ಕೊಡಗಿನ ವಿಜಯ್ ಎಂಬುವರು ಹೇಳಿದ್ದಾರೆ.
2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಳು. ಆಕೆಯನ್ನು ಹುಡುಕಿಕೊಡಿ ಎಂದು ಮಹಿಳೆ ಸುಜಾತ ಭಟ್ ಆರೋಪ ಮಾಡಿದ್ದರು. ಅಲ್ಲದೆ ಎಸ್ಐಟಿಗೆ ದೂರು ನೀಡಿದ್ದರು. ಇನ್ನು ಸುಜಾತ ಭಟ್ ತೋರಿಸಿರುವ ಫೋಟೋದಲ್ಲಿರುವುದು ನನ್ನ ತಂಗಿ ವಾಸಂತಿ. ಆಕೆ 2007ರಲ್ಲಿ ಮೃತಪಟ್ಟಿದ್ದಳು ಎಂದು ವಿಜಯ್ ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಘಟನೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ. ಈಗ ಇದು ಕೇವಲ ನಾಪತ್ತೆ ಪ್ರಕರಣವಲ್ಲ, ಆದರೆ ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಗಮನಸೆಳೆಯುವ ಮಹತ್ವದ ವಿವಾದವಾಯಿತು. ಈಗ, ಸುಜಾತ ಭಟ್ ಅವರ ಉದ್ದೇಶಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ