Friday, August 29, 2025

Latest Posts

ದಲಿತರಿಗೆ ಮೀಸಲಾತಿ ಹಣ ‘ಗ್ಯಾರಂಟಿ’ ಯೋಜನೆಗೆ?

- Advertisement -

ದಲಿತರ ಅಭಿವೃದ್ದಿ ಕಾರ್ಯಗಳಿಗೆ ಮೀಸಲಾಗಿದ್ದ ಎಸ್ ಸಿಪಿ-ಟಿಎಸ್‌ಪಿ ಯೋಜನೆಯ ೧೩ ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಧಾನ ಸಭೆಯಲ್ಲಿ ಪ್ರಶ್ನೋತ್ರ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ೨೦೨೫-೧೬ ನೇ ಸಾಲಿನ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಸುದಾಯದವರ ಅಭಿವೃದ್ದಿಗೆ ಹಂಚಿಕೆಯಾದ ಅನುದಾನವೆಷ್ಟು?, ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಬೇರೆ ಬೇರೆ ಇಲಾಖೆಗಳಿಗೆ ಎಷ್ಟು ಹಣ ಹಂಚಿಯಾಗಿದೆ ಎಂದು ಪ್ರಶ್ನಿಸಿದರು.

ಎಸ್‌ ಸಿಪಿ, ಟಿಎಸ್‌ ಪಿ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ದಿಗೆ ೪೨,೦೭೧ ಕೋಟಿ ರೂ. ಅನುದಾನ ಹಂಚಿಕೆಯಾಗಿದೆ ಎಂಬ ಉತ್ತರವನ್ನು ಸಚಿವರು ಕೊಟ್ಟಿದ್ದಾರೆ. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ದಿಗೆ ಕೊಟ್ಟಿರುವುದು ೭,೦೨೫ ಕೋಟಿ ರೂ ಮಾತ್ರ. ಆದರೆ ೩೪ ಇಲಾಖೆಗಳಿಗೆ ೪೨ ಸಾವಿರ ಕೋಟಿ ರೂ. ನೀಡಲಾಗಿದೆ. ನನ್ನ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ ವೆಲ್‌ ಕೊರಡಸಲು ೧೪೦೦ ಅರ್ಜಿಗಳು ಬಂದಿವೆ. ಆದರೆ ಒಂದೇ ಒಂದು ಬೋರ್‌ ಬವೆಲ್‌ ಕೊಟ್ಟಿದ್ದಾರೆಎಂದು ಕಿಡಿಕಾರಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಶೇ.೨೪ ರ ಅನುದಾನ ಹಂಚಿಕೆಯನ್ನು ಹಣಕಾಸು ಸಚಿವರು ಮಾಡುವುದಲ್ಲ. ಸಂಬಂಧಿತ ಇಲಾಖೆ ಸಚಿವರೇ ಮಾಡಬೇಕು. ದಲಿತರಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಕಿಯುದಕ್ಕೆ ನಿಮಗೆಷ್ಟು ಧೈರ್ಯ ಎಂದು ಪ್ರಶ್ನಿಸಿದರು. ಶಾಸಕ ಆರ್‌ ಜ್ಜಾನೇಂದ್ರ ಮಾತಮಾಡಿ, ಅಂಬೇಡ್ಕರ್‌, ದಲಿತರ ಬಗ್ಗೆ ಧ್ವನಿ ಎತ್ತುವ, ಸಂವಿಧಾನದ ಪೀಠಿಕೆಯನ್ನು ಎತ್ತಿ ಹಿಡಿಯುವ ಸಚಿವ ಮಹಾದೇವಪ್ಪ ಅವರು ದಲಿತರ ಕೋಟ್ಯಂತರ ಹಣವನ್ನು ಬೇರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಸಹಮತ ವ್ಯಕ್ತಪಡಿಸಿದರು. ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಮಾತನಾಡಿ , ಯೋಜನೆ ಅನುದಾನ ದುರುಪಯೋಗ ಆಗಿಲ್ಲ. ಬೇರೆ ಯೋಜನೆಗಳಿಗೆ ಬಳಕೆ ಮಾಡಿಲ್ಲ, ಫಲಾನುಭವಿಗಳ ಪಟ್ಟಿ ತರಿಸುವಂತೆ ಮತ್ತು ಒಂದು ವೇಳೆ ಅನುದಾನ ಬೇರೆ ಯೋಜನೆಗಳ ಬಳಕಕೆ ಆಗಿದ್ದಾರೆ ಮರಳಿ ಕೊಡುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಸಚಿವರ ಉತ್ರ ಪ್ರತಿಪಕ್ಷದವರಿಗೆ ಸಮಾಧಾನ ತರಲಿಲ್ಲ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss