ಸಂಚಾರ ನಿಯಮ ಉಲ್ಲಂಘನೆ ಮಾಡಿದವರು ಇನ್ನೂ ದಂಡ ಪಾವತಿಸದಿದ್ದರೆ, ಈ ಹೊತ್ತಿನಲ್ಲೇ ಅವಕಾಶವಿದೆ. ಬೆಂಗಳೂರಿನ ಸಂಚಾರ ಪೊಲೀಸರು ಟ್ರಾಫಿಕ್ ದಂಡದ ಮೇಲೆ ಶೇ.50ರ ರಿಯಾಯಿತಿಯನ್ನು ಘೋಷಿಸಿದ್ದು, ಈ ಸೌಲಭ್ಯ ಆಗಸ್ಟ್ 23ರಿಂದ ಸೆಪ್ಟೆಂಬರ್ 12 ರವರೆಗೆ ಲಭ್ಯವಿರಲಿದೆ.
ಈ ಆಫರ್ ಕೇವಲ 2023ರ ಫೆಬ್ರವರಿ 11ರವರೆಗೆ ದಾಖಲಾಗಿರುವ ಪ್ರಕರಣಗಳಿಗಷ್ಟೇ ಅನ್ವಯವಾಗುತ್ತದೆ. ಕಳೆದ ವರ್ಷ ನೀಡಿದ್ದಂತೆ, ಈ ವರ್ಷವೂ ಒಂದು ಬಾರಿಯ ಶ್ರೇಣಿಯ ರಿಯಾಯಿತಿಯನ್ನು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಘೋಷಿಸಿದೆ.
ಬಾಕಿ ಇರುವ ದಂಡ ವೀಕ್ಷಿಸುವುದು, ಪಾವತಿಸುವುದು ಹೇಗೆ?
ಆನ್‌ಲೈನ್ ಮೂಲಕ KSP App ಅಥವಾ BTP ASTraM App (ಬಿಟಿಪಿ ಅಸ್ತ್ರಂ) ಅನ್ನು ಡೌನ್‌ಲೋಡ್ ಮಾಡಿ. ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ. ಬಾಕಿ ಇರುವ ಚಲನ್‌ಗಳನ್ನು ವೀಕ್ಷಿಸಿ. ಪಾವತಿಸಲು ಬಯಸುವ ದಂಡವನ್ನು ಆಯ್ಕೆ ಮಾಡಿ.
ಶೇ.50 ರಿಯಾಯಿತಿಯೊಂದಿಗೆ ದಂಡದ ಮೊತ್ತ ತೋರಿಸಲಾಗುತ್ತದೆ. ಆನ್‌ಲೈನ್ ಪೇಮೆಂಟ್ ಆಯ್ಕೆ ಮಾಡಿ ಪಾವತಿಸಿ. ಇಲ್ಲ ಅಂದ್ರೆ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್ ಗಳ ಮೂಲಕವೂ ದಂಡ ಪಾವತಿ ಸಾಧ್ಯವಿದೆ.
ಟ್ರಾಫಿಕ್ ಫೈನ್ ಆಫ್‌ಲೈನ್ ಮೂಲಕ ಹೇಗೆ ಪಾವತಿ ಮಾಡಬಹುದು ಅಂದ್ರೆ ಹತ್ತಿರದ ಸಂಚಾರ ಪೊಲೀಸ್ ಠಾಣೆ ಅಥವಾ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ. ನಿಮ್ಮ ವಾಹನದ ನೋಂದಣಿ ವಿವರಗಳನ್ನು ಕೌಂಟರ್‌ನಲ್ಲಿ ನೀಡಿ. ಮೂಲ ದಂಡದ ಶೇ.50 ರಿಯಾಯಿತಿ ಮೊತ್ತವನ್ನು ಕೌಂಟರ್ ಮೂಲಕ ಪಾವತಿಸಬಹುದು.
ಶೇ.50ರ ರಿಯಾಯಿತಿ ಈ ಸೌಲಭ್ಯವು ಕೇವಲ ನಿರ್ದಿಷ್ಟ ಅವಧಿಗೆ ಮಾತ್ರ ಲಭ್ಯವಿದೆ. ಅಗತ್ಯವಿರುವವರು ಬಾಕಿ ಇರುವ ದಂಡವನ್ನು ಕಡಿಮೆ ಮೊತ್ತದಲ್ಲಿ ಪಾವತಿಸಿ ಈ ಅವಕಾಶವನ್ನು ತಪ್ಪದೇ ಉಪಯೋಗಿಸಿಕೊಳ್ಳುವುದು ಉತ್ತಮ.