Friday, August 29, 2025

Latest Posts

ಮಹಿಳೆ ಇಲ್ಲದೆ ಮಗು ಜನನ : ಈ ರೋಬೋಟ್ ರೇಟ್ ಎಷ್ಟು?

- Advertisement -

ಈಗ ನಾವೆಲ್ಲಾ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಯಂತ್ರಗಳು ಹಾಗೂ ರೋಬೋಟ್‌ಗಳದ್ದೇ ಕಾರುಬಾರು. ರೆಸ್ಟೋರೆಂಟ್‌ಗಳಲ್ಲಿ ಕೆಲಸಗಳಿಗೆ ರೋಬೋಟ್ ಗಳನ್ನು ಬಳಸುವುದೇ ಹೆಚ್ಚು. ಆದರೆ ಮಗುವಿಗೆ ಜನ್ಮ ನೀಡುವ ಕೆಲಸವನ್ನು ಕೂಡ ಈ ರೋಬೋಟ್‌ಗಳೇ ಮಾಡಿದರೆ ಹೇಗಿರುತ್ತೆ, ಇದನ್ನು ಊಹಿಸಲು ಅಸಾಧ್ಯ. ಆದರೆ ಈಗ ಹೇಳೋ ವಿಷ್ಯವನ್ನು ನೀವು ನಂಬಲೇಬೇಕು.

ಒಂದು ಮಗುವಿಗೆ ಜನ್ಮ ನೀಡಬೇಕಾದರೆ ಹೆಣ್ಣು ಸಾಕಷ್ಟು ತ್ಯಾಗಗಳನ್ನು ಮಾಡುತ್ತಾಳೆ, ನೋವನ್ನು ಅನುಭವಿಸುತ್ತಾಳೆ. ಆದರೆ ಇನ್ನು ಮುಂದೇ ಹೆಣ್ಮಕ್ಕಳು ಹೆರಿಗೆ ನೋವನ್ನು ಅನುಭವಿಸುವ ಅಗತ್ಯವೇ ಇಲ್ಲ. ಯಾಕಂದ್ರೆ ಚೀನಾದ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ರೋಬೋಟ್ ಮಗುವಿಗೆ ಜನ್ಮ ನೀಡುವ ಹೊಸ ಆವಿಷ್ಕಾರಕ್ಕೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಅಗತ್ಯವಿಲ್ಲದೇ, ಮಗುವಿನ ಬೆಳೆವಣಿಗೆ ಸೇರಿದಂತೆ, ಜನ್ಮ ನೀಡುವುದು ಹೀಗೆ ಎಲ್ಲಾ ಪ್ರಕ್ರಿಯೆಗಳನ್ನು ಈ ರೋಬೋಟ್‌ಗಳೇ ಮಾಡಲಿದೆ.

ರೋಬೋಟ್‌ಗಳಿಂದಲೇ ಜೀವಂತ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಯೂ ಹುಟ್ಟಿಕೊಂಡದ್ದು ಚೀನಾದಲ್ಲಿ. ಅಚ್ಚರಿಕಾರಿ ಹಾಗೂ ಊಹೆ ಮಾಡಲು ಸಾಧ್ಯವಾಗದಂತಹ ಈ ತಾಯಿ ರೋಬೋಟ್‌ನ್ನು ಚೀನಾದ ಗೌಂಝುಗು ಪ್ರಾಂತ್ಯದ ಕೈವಾ ಟೆಕ್ನಾಲಜಿಯೂ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಸಿಂಗಾಪೂರನ ನನ್ಯಾಂಗ್ ಟೆಕ್ನಾಲಜಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಝಾಂಗ್ ಖಿಪೆಂಗ್ ನೇತೃತ್ವದಲ್ಲಿ ಈ ಸಂಶೋಧನೆಯಲ್ಲಿ ನಡೆಸಲಾಗಿದೆ. 2026ರ ವೇಳೆಗೆ ತಾಯಿ ರೋಬೋಟ್‌ನ ಮೂಲ ಮಾದರಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಹೆಣ್ಣು ಗರ್ಭದಲ್ಲಿ ಮಗುವಿನ ಬೆಳವಣಿಗೆಯ ವೇಳೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಹೀಗಿರುವಾಗ ರೋಬೋಟ್‌ನಿಂದ ಮಗು ಪಡೆಯುವುದು ಎಂದರೆ ನಂಬಲು ಕಷ್ಟವೇ. ಆದರೆ ಈ ರೋಬೋಟ್ ಹೊಟ್ಟೆಯಲ್ಲಿ ಕೃತಕ ಗರ್ಭವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಗರ್ಭಕ್ಕೆ ವಿರ್ಯ ಹಾಗೂ ಅಂಡಾಣುಗಳನ್ನು ಸಂಯೋಜಿಸಿ ಹಾಕಲಾಗುತ್ತದೆ.

ಇನ್ನು ಈ ರೋಬೋಟ್‌ನಲ್ಲಿರುವ ಈ ಕೃತಕ ಗರ್ಭದಲ್ಲಿ ಕೃತಕ ಆಮ್ನಿಯೊಟಿಕ್ ದ್ರವದಲ್ಲಿ ಭ್ರೂಣವು ಬೆಳವಣಿಗೆಯಾಗಲಿದೆ. ತಾಯಿಯ ಗರ್ಭದಲ್ಲಿ ಹೇಗೆ ಬೆಚ್ಚಗಿನ ವಾತಾವರಣವಿರುತ್ತದೆಯೋ ಅದೇ ರೀತಿ ಇಲ್ಲಿಯೂ ಅಂತಹದ್ದೇ ವಾತಾವರಣವನ್ನು ಸೃಷ್ಟಿಸಲಾಗಿದೆಯಂತೆ. ಆರ್ಥಿಕವಾಗಿ ಸದೃಢರಾಗಿರುವವರು ಇದರಿಂದ ಮಗು ಪಡೆಯಬಹುದು. ಆದರೆ ಈ ರೋಬೋಟ್ ಬೆಲೆ ಬರೋಬ್ಬರಿ 12.23 ಲಕ್ಷ ರೂಪಾಯಿ ಎನ್ನಲಾಗಿದೆ. ಆದರೆ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಪರಿಣಾಮದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss