Thursday, August 28, 2025

Latest Posts

ಅನುಶ್ರೀ ಮದುವೆಗೆ ಕೌಂಟ್‌ಡೌನ್ ಶುರು – ಮದುವೆ ತಯಾರಿಯಲ್ಲಿ ಫುಲ್ ಬ್ಯುಸಿ!

- Advertisement -

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಟಿವಿ ಪ್ರೇಕ್ಷಕರಿಗೆ ಸ್ಫೂರ್ತಿದಾಯಕ ಮುಖವಾಗಿರುವ ಅನುಶ್ರೀ, ತಮ್ಮ ಮದುವೆಯ ದಿನಾಂಕ, ಸ್ಥಳ ಮತ್ತು ಮುಹೂರ್ತ ಬಹಿರಂಗಪಡಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಅವರ ವಿವಾಹ ಆಮಂತ್ರಣ ಪತ್ರಿಕೆಯ ಪ್ರಕಾರ, ಅನುಶ್ರೀ ಮತ್ತು ರೋಷನ್ ಅವರ ಮದುವೆ 2025ರ ಆಗಸ್ಟ್ 28ರಂದು, ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿರುವ ರೆಸಾರ್ಟ್ ನಲ್ಲಿ ನಡೆಯಲಿದೆ. ವಿವಾಹ ಮೂರ್ತ ಬೆಳಿಗ್ಗೆ 10:56ಕ್ಕೆ ನಿಗದಿಯಾಗಿದ್ದು, ಸಾಂಪ್ರದಾಯಿಕ ವಿಧಾನದಂತೆ ಕಾರ್ಯಕ್ರಮ ನಡೆಯಲಿದೆ. ಅವರ ಲಗ್ನಪತ್ರಿಕೆ ವೈರಲ್ ಆಗಿದ್ದು, ಕನ್ನಡ ಚಿತ್ರರಂಗದ ಹಲವು ಗಣ್ಯರು ಈ ಮದುವೆಗೆ ಆಗಮಿಸುವ ನಿರೀಕ್ಷೆ ಇದೆ.

ವರ ರೋಷನ್ ಅವರು ಕೊಡಗಿನ ರಾಮಮೂರ್ತಿ ಮತ್ತು ಸಿಸಿಲಿಯಾ ದಂಪತಿಯ ಪುತ್ರರಾಗಿದ್ದು, ವೃತ್ತಿಯಲ್ಲಿ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುಶ್ರೀ ಹಾಗೂ ರೋಷನ್ ಅವರದ್ದು ಪ್ರೇಮ ವಿವಾಹ ಎನ್ನಲಾಗಿದೆ. ಅವರು ಈ ಮೊದಲು ಪುನೀತ್ ಅವರ ಮನೆಯಲ್ಲಿ ಭೇಟಿ ಆದರು. ಆ ಬಳಿಕ ಇಬ್ಬರ ಮಧ್ಯೆ ಪರಿಚಯ ಬೆಳೆದು, ಪ್ರೀತಿ ಮೂಡಿತು. ಈಗ ಪರಸ್ಪರ ಮನೆಯವರ ಒಪ್ಪಿಗೆ ಪಡೆದು ಅವರು ವಿವಾಹ ಆಗುತ್ತಿದ್ದಾರೆ. ಸಂಭ್ರಮ ಬೈ ಸ್ಪಾನ್​ಲೈನ್ಸ್ ಸ್ಟುಡಿಯೋಸ್​ನಲ್ಲಿ ಈ ಮದುವೆ ನೆರವೇರುತ್ತಿದೆ.

ಈ ಕುರಿತು ಕಳೆದ ಕೆಲವು ತಿಂಗಳುಗಳಿಂದ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಬಹುಮಾನ್ಯ ನಿರೂಪಕಿ ತಮ್ಮ ವೈವಾಹಿಕ ಜೀವನದ ಕುರಿತು ಹೆಚ್ಚು ಚರ್ಚೆ ಮಾಡದಿದ್ದರೂ, ಈ ವರ್ಷದ ಆರಂಭದಲ್ಲಿ 2025 ನನ್ನ ಮದುವೆಯ ವರ್ಷವಾಗಬಹುದು ಎಂಬ ರೀತಿಯಲ್ಲಿ ಅವರು ನೀಡಿದ್ದ ಹೇಳಿಕೆಗೆ ಈಗ ಪೂರ್ತಿ ಸ್ಪಷ್ಟತೆ ಸಿಕ್ಕಿದೆ.

ಮದುವೆಗೂ ಕೂಡ ಅನುಶ್ರೀ ಭರ್ಜರಿ ಶಾಪಿಂಗ್ ಮಾಡ್ತಿದ್ದಾರೆ. ಸೀರೆ ಖರೀದಿ ಆಭರಣಗಳ ಖರೀದಿ ಜೋರಾಗಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಆಭರಣಗಳ ಪ್ರಮೋಷನ್ ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ.

ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಅನುಶ್ರೀ, ವೈಯಕ್ತಿಕ ಸವಾಲುಗಳನ್ನು ಎದುರಿಸುತ್ತಾ ತಮ್ಮದೇ ಆದ ಖಾಸಗಿ ಮತ್ತು ವೃತ್ತಿಪರ ಪ್ರಸ್ಥಾನವನ್ನು ಕಟ್ಟಿಕೊಂಡರು. ಇಂದು ಅವರು ಅನೇಕ ಯುವತಿಯರಿಗೆ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ.

ಈಗ, ಅವರು ತಮ್ಮ ಆಯ್ಕೆಯ ಸಂಗಾತಿಯೊಂದಿಗೆ ಜೀವನದ ಹೊಸ ಹಾದಿಯನ್ನು ಆರಂಭಿಸಲು ಸಜ್ಜಾಗುತ್ತಿದ್ದಾರೆ. ಅವರ ಈ ಹೊಸ ಪ್ರಯಾಣಕ್ಕೆ ಅಭಿಮಾನಿಗಳು ಹಾರೈಕೆ ನೀಡುತ್ತಿದ್ದು, ಈ ಮದುವೆ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಮತ್ತೊಂದು ಚಿರಸ್ಥಾಯಿಯಾಗಿ ನಿಂತುಹೋಗುವ ಹಬ್ಬವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

- Advertisement -

Latest Posts

Don't Miss