Friday, August 29, 2025

Latest Posts

ಸಿದ್ದು, ಡಿಕೆ ಪ್ಲ್ಯಾನ್ B ರೆಡಿ! ಮಾಜಿ CM ಸ್ಫೋಟಕ ಸುಳಿವು

- Advertisement -

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಶೆಟ್ಟರ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ. ಇದೊಂದು ಸಹಜ ಬಿಕ್ಕಟ್ಟು ಅಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ, ಇದನ್ನೇ ಮುಂದಿಟ್ಟು ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಒಳಜಗಳಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಡಿಕೆಶಿ ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸುಮ್ಮನೆ ಕೂರಲು ಸಿದ್ಧರಾಗಿಲ್ಲ. ಎಕ್ಸಿಕ್ಯೂಟ್ ಮಾಡೋ ಪ್ಲಾನ್ ಈಗಾಗಲೇ ಆರಂಭವಾಗಿದೆ ಎಂಬಂತಹ ಉಲ್ಲೇಖಗಳು ಇದು ರಾಜ್ಯ ಸರ್ಕಾರದ ಭವಿಷ್ಯಕ್ಕೆ ಸಂಕಟವನ್ನೇ ತರುತ್ತದೆ ಎನ್ನುವುದು ಶೆಟ್ಟರ್ ಅಭಿಪ್ರಾಯವಾಗಿದೆ.

RSS ಕುರಿತಾಗಿ ಮಾತನಾಡಿದ ಶೆಟ್ಟರ್ ಅವರು, ಕಾಂಗ್ರೆಸ್‌ನ ಹಲವು ನಾಯಕರು ವೈಯಕ್ತಿಕವಾಗಿ RSS ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಮೆಚ್ಚುಗೆಗಾಗಿ RSS ವಿರುದ್ಧ ಮಾತನಾಡುತ್ತಾರೆ. ಇದು ತುಷ್ಟೀಕರಣ ರಾಜಕೀಯವಾಗಿದೆ.

ಡಿ.ಕೆ ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಹಾಡಿದ್ದು, ಬಳಿಕ ಕ್ಷಮೆಯಾಚಿಸಿದ್ದಾರೆ. ಇದು ದ್ವಂದ್ವ ಮನಸ್ಥಿತಿಯ ಉದಾಹರಣೆ. ಒಂದು ಕಾಲದಲ್ಲಿ ಪ್ರಭಾವಶಾಲಿಯಾಗಿದ್ದ ಪಕ್ಷ, ಈಗ ಓಲೈಕೆ ರಾಜಕಾರಣದಲ್ಲಿ ಸಿಲುಕಿದೆ. ಅಲ್ಪಸಂಖ್ಯಾತ ಸಮುದಾಯಗಳ ವಿಶ್ವಾಸವನ್ನೂ ಕಳೆದುಕೊಳ್ಳುವ ಅಪಾಯದಲ್ಲಿದೆ. ಕಾಂಗ್ರೆಸ್ ತನ್ನ ಮತ ಬ್ಯಾಂಕ್ ರಾಜಕೀಯದಿಂದ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಬಿಜೆಪಿ ಯಾವುದೇ ರೀತಿಯ ರಾಜಕೀಯ ಆಟ ಆಡುತ್ತಿಲ್ಲ. ಅವರು ಯಾರಿಗೂ ಅರಿಶಿನ ಕುಂಕುಮ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಅಂತರ ವಿರೋಧಗಳು, ಗಂಭೀರ ರಾಜಕೀಯ ಕುಸಿತಕ್ಕೆ ಕಾರಣವಾಗುತ್ತವೆ. ಮತ ಬ್ಯಾಂಕ್ ರಾಜಕೀಯ ಮತ್ತು ತುಷ್ಟೀಕರಣದ ರಾಜಕೀಯದಿಂದಾಗಿ, ಕಾಂಗ್ರೆಸ್ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಂಡಿದೆ. ಈ ರೀತಿಯ ಒಳಜಗಳಗಳು ಪಕ್ಷವನ್ನು ಇನ್ನಷ್ಟು ಹಿನ್ನಡೆಯಾಗುವ ಹಾಗೆ ಮಾಡುತ್ತಿದೆ ಎಂದು ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss