Wednesday, October 15, 2025

Latest Posts

ಕಾಂಗ್ರೆಸ್‌ನವರೇ ಇದನ್ನೆಲ್ಲಾ ಮಾಡಿಸ್ತಿದ್ದಾರೆ – ಪ್ರಹ್ಲಾದ್‌ ಜೋಶಿ

- Advertisement -

ಹಿಂದೂಗಳು 3 ಮಕ್ಕಳನ್ನು ಪಡೆಯಿರಿ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಕರೆಗೆ, ಕಾಂಗ್ರೆಸ್‌ನವರು ವ್ಯಂಗ್ಯವಾಡಿದ್ರು. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷದವರಿಗೆ ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಮಾಡಿಕೊಂಡ್ರು ನಡೆಯುತ್ತದೆ. ಹಿಂದೂಗಳಿಗೆ ಮೋಹನ್‌ ಭಾಗವತ್‌ ಕರೆ ಕೊಟ್ರೆ ನೋವಾಗುತ್ತದೆ.

ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಿದ್ದೇ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನವರು ದುರುಳರಿದ್ದಾರೆ. ಸಿದ್ದರಾಮಯ್ಯ ಸಮಾಜವಾದಿ ಅಂದ್ಕೊಂಡು, ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಹೆಣ ಹೂತ ಬಳಿಕ ವಾಪಸ್‌ ತರಲು ಅಧಿಕಾರ ಇದೆಯಾ? ಅವನನ್ನು ಏಕೆ ಮೊದಲೇ ಕೇಳಲಿಲ್ಲ. ಕಾಂಗ್ರೆಸ್‌ನವರೇ ಇದನ್ನೆಲ್ಲಾ ಮಾಡಿಸ್ತಿದ್ದಾರೆ. ಸೆಪ್ಟಂಬರ್‌ 1ರಂದು ಧರ್ಮಸ್ಥಳಕ್ಕೆ ಹೋಗ್ತಿದ್ದೇವೆ. ದಕ್ಷಿಣ ಕನ್ನಡದಲ್ಲಿ ಎಲ್ಲಾ ವೇಳೆಯಲ್ಲೂ ಹಿಂದುತ್ವದ ಪರವಾದ ವಾತಾವರಣ ಇದೆ. ಶ್ರದ್ಧೆ ಕಡಿಮೆಯಾದ್ರೆ ನಮ್ಮ ಕಡೆ ಬರಬಹುದು ಅಂತಾ ಹೀಗೆಲ್ಲಾ ಮಾಡ್ತಿದ್ದಾರೆ.

ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರ ತಾಯಿಯ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ. ಇವರು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಮಿತ್ ಶಾ ಅವರ ತಲೆ ಕಡಿಯಬೇಕೆಂದು ಹೇಳುತ್ತಾರೆ. ಜನ ಇವರನ್ನು ಎಂದಿಗೂ ನಂಬುವುದಿಲ್ಲ. ಕಾಂಗ್ರೆಸ್ ಮನಸ್ಥಿತಿ ಏನೆಂಬುದು ಈ ದೇಶದ ಜನರಿಗೆ ಗೊತ್ತಾಗಿದೆ.

ಹುಬ್ಬಳ್ಳಿಗೆ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ನುಸುಳುಕೋರರ ಆಗಮನವಾಗಿದೆ. ಇದರಿಂದ ಸ್ಥಳೀಯರ ಹಕ್ಕುಗಳನ್ನು ಕಸಿಯುವ ಕೆಲಸ ನಡೆದಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಯುದ್ಧ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ಕೊಟ್ಟು ವೋಟ್ ಬಚಾವ್ ಹೋರಾಟ ಮಾಡುತ್ತಿದೆ ಅಂತಾ ಪ್ರಹ್ಲಾದ್‌ ಜೋಶಿ ಗುಡುಗಿದ್ದಾರೆ.

- Advertisement -

Latest Posts

Don't Miss