ಬಿಜೆಪಿಗರಿಗಿಂತ ಒಂದು ದಿನ ಮೊದಲೇ ನಡೆದ ಜೆಡಿಎಸ್‌ನ ಸತ್ಯಯಾತ್ರೆ ಯಶಸ್ವಿಯಾಗಿದೆ. ಆಗಸ್ಟ್ 31ರಂದು ಹಾಸನದಿಂದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹೊರಟ ಸತ್ಯ ಯಾತ್ರೆ, ಧರ್ಮಸ್ಥಳದಲ್ಲಿ ಕಹಳೆ ಮೊಳಗಿಸಿತ್ತು. ಎಲ್ಲಿ ನೋಡಿದ್ರೂ ಕೇಸರಿ ಬಾವುಟಗಳೇ ರಾರಾಜಿಸಿದ್ವು. ಧರ್ಮಸ್ಥಳದ ಪರ ನಾವಿದ್ದೇವೆ ಅಂತಾ ಸಾರಿ ಸಾರಿ ಹೇಳಿದಂತೆ ಭಾಸವಾಗಿತ್ತು.

ಸತ್ಯಯಾತ್ರೆಯ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ, ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿಖಿಲ್, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು, ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ವಹಿಸಬೇಕೆದು ಆಗ್ರಹಿಸಿ, ಪಕ್ಷದ ವತಿಯಿದ ಜರುಗಿದ ಧರ್ಮಸ್ಥಳ ಸತ್ಯಯಾತ್ರೆ ಕಾರ್ಯಕ್ರಮಕ್ಕೆ, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ, ಪಕ್ಷದ ಎಲ್ಲಾ ನಾಯಕರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಅಂತಾ ಹೇಳಿದ್ದಾರೆ.
ಇನ್ನು, ಸತ್ಯಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭಕ್ತಪೂರ್ವಕವಾಗಿ ಸತ್ಕರಿಸಿ, ಅವರ ಆಶೀರ್ವಾದ ಪಡೆದು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದೇನೆ.

ಸಹಸ್ರಾರು ಭಜನಾ ಮಂಡಳಿಗಳು, ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರ, ಲಕ್ಷಾಂತರ ಕುಟುಂಬಗಳಿಗೆ ನೀಡಿರುವ ಆರ್ಥಿಕ ಸಹಾಯ, ಲಕ್ಷಾಂತರ ಜನರಿಗೆ ನೀಡಿರುವ ನ್ಯಾಯ, ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀಡಿರುವ ವಿದ್ಯಾದಾನ, ಕೋಟ್ಯಾಂತರ ಜನರಿಗೆ ನಡೆಯುವ ಅನ್ನದಾನ, ಇವೆಲ್ಲವೂ ನಿತ್ಯವೂ ನಡೆಯಬೇಕು. ಕೋಟ್ಯಾಂತರ ಭಕ್ತರ ಸೇವೆ ಮಾಡುತ್ತಿರುವ ಪೂಜ್ಯ ಖಾವಂದರಾದ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ತಿಳಿಸಲಾಯಿತು.

ಇದೇ ವೇಳೆ ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರಗಳ ಹಿಂದಿರುವ ಕಾಣದ ಕೈಗಳನ್ನು ಹಾಗೂ ದುಷ್ಟಶಕ್ತಿಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಹೀಗಂತ ನಿಖಿಲ್ ಕುಮಾರಸ್ವಾಮಿ ಪೋಸ್ಟ್ ಮಾಡಿದ್ದಾರೆ.


