Thursday, November 13, 2025

Latest Posts

ಬುರುಡೆ ಗ್ಯಾಂಗ್ ರಹಸ್ಯ ಬಯಲು – ಬುರುಡೆ ಪ್ಲ್ಯಾನ್‌ಗೂ ಮುನ್ನ ‘ರಿಹರ್ಸಲ್’!

- Advertisement -

ಧರ್ಮಸ್ಥಳ ‘ಬುರುಡೆ ಗ್ಯಾಂಗ್’ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಪಡೆದಿದೆ. ರಾಜ್ಯಾದ್ಯಂತ ಸಂಚಲನ ಸೃಷಿಸಿದ್ದ ಈ ಪ್ರಕರಣದಲ್ಲಿ ಇದೀಗ ಎಸ್ಐಟಿ ಬೆಂಗಳೂರಿನಲ್ಲೇ ಮಹತ್ವದ ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚಿದೆ. ಬುರುಡೆ ಯೋಜನೆಗೆ ಮುನ್ನ ವಿಡಿಯೋ ರಿಹರ್ಸಲ್ ನಡೆದಿರುವುದು ಈಗ ದೃಢಪಟ್ಟಿದೆ.

ಧರ್ಮಸ್ಥಳದ ಬಳಿ ಬುರುಡೆ ಪತ್ತೆಯಾದ ಪ್ರಕರಣದ ತನಿಖೆಯಲ್ಲಿ, ಚಿನ್ನಯ್ಯನ ಹೆಸರಿನಲ್ಲಿ ದಾಖಲಾಗಿದ್ದ ಹೇಳಿಕೆಗಳು ಈಗ ಹೊಸ ತಿರುವು ತಂದಿವೆ. SIT ಬೆಂಗಳೂರು ಬಾಗಲುಗುಂಟೆ ಬಳಿ ಇರುವ ಜಯಂತ್ ಎಂಬಾತನ ಮನೆಗೆ ದಾಳಿ ನಡೆಸಿದ್ದು, ಅಲ್ಲಿಂದ ದೊಡ್ಡ ಪ್ರಮಾಣದ ಮಾಹಿತಿಯನ್ನು ವಶಪಡಿಸಿಕೊಂಡಿದೆ.

ಚಿನ್ನಯ್ಯನ ಹೇಳಿಕೆಯಂತೆ, ಈ ಪ್ರಕರಣದ ಹಿಂದೆ ಪೂರ್ವ ಯೋಜನೆ, ವಿಡಿಯೋ ರೆಕಾರ್ಡಿಂಗ್, rehearsals ಕೂಡ ನಡೆದಿವೆ. ವಿಡಿಯೋ ರೆಕಾರ್ಡ್ ಮಾಡಿ, ಬಳಿಕ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಅದು ಡಿಲೀಟ್ ಮಾಡಲಾಯಿತು. ಬುರುಡೆ ಪ್ಲಾನ್ ಯಾವುದೇ ತಾತ್ಕಾಲಿಕ ಇಂಪ್ರೊವೈಸೇಶನ್ ಅಲ್ಲ, ನಿಖರವಾಗಿ ರೂಪಗೊಂಡ ಸಂಚು ಎಂಬುದು ದೃಢಪಟ್ಟಿದೆ.

ಇದಾದ ಬಳಿಕ ವಿಜಯನಗರದಿಂದ ವಿದ್ಯಾರಣ್ಯಪುರದ ಸರ್ವೀಸ್ ಅಪಾರ್ಟ್‌ಮೆಂಟ್‌ಗೂ ‘ಬುರುಡೆ ಗ್ಯಾಂಗ್’ ಶಿಫ್ಟ್ ಆಗಿದೆ. ಅಲ್ಲಿ ಮತ್ತೊಮ್ಮೆ ಸಭೆ ಸೇರಿ, ಮುಂದಿನ ಪ್ಲಾನ್‌ಗೆ ಸಿದ್ಧತೆ ನಡೆದಿದೆ. ಈ ಎಲ್ಲ ಕ್ರಿಯೆಗಳಲ್ಲಿ ಜಯಂತ್ ಹಾಗೂ ಗಿರೀಶ್ ಮಟ್ಟಣ್ಣನವರ್ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ.

ಪೊಲೀಸರ ಪ್ರಕಾರ, ಈ ಪ್ಲ್ಯಾನ್ ಎರಡು ವರ್ಷಗಳ ಹಿಂದೆಯೇ ರೂಪಗೊಂಡಿತ್ತಂತೆ. ಬುರುಡೆ ಗ್ಯಾಂಗ್, ನೇತ್ರಾವತಿ ನದಿ ತೀರ, ಬಂಗ್ಲೆಗುಡ್ಡ ಸೇರಿದಂತೆ ವಿವಿಧ ಕಾಡು ಪ್ರದೇಶಗಳಲ್ಲಿ rehearsals ನಡೆಸಿ, 30ಕ್ಕೂ ಹೆಚ್ಚು ಜಾಗಗಳನ್ನು ಗುರುತಿಸಿದೆ.

ಆ ಜಾಗಗಳಲ್ಲಿ ಶವ ಹೂತಿರುವದಾಗಿ ಚಿನ್ನಯ್ಯ ಹೇಳಿದ್ದರೂ, ಪ್ರಾಥಮಿಕ ತನಿಖೆಯಲ್ಲಿ ಈ ವಿವರಣೆಗಳು ಅನುಮಾನಾಸ್ಪದವಾಗಿದೆ. ಗ್ಯಾಂಗ್ ತಾನೇ ನಕ್ಷೆ ಸಿದ್ಧಪಡಿಸಿ, ಪ್ರತಿದಿನ ಶೋಧ ಕಾರ್ಯಾಚರಣೆ ಬಳಿಕ ಮಹೇಶ್ ಶೆಟ್ಟಿ ತಿಮರೋಡಿಯ ಮನೆಯಲ್ಲಿರುವ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest Posts

Don't Miss