ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ RJD, ಕಾಂಗ್ರೆಸ್ ನಿಂದನೆ ಮಾಡಿರೋ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ ಮೋದಿ ತಾಯಿಯ ಬಗ್ಗೆ ಕೆಟ್ಟ ಪದ ಬಳಕೆ ಮಾಡಲಾಗಿದೆ. ಆಕ್ಷೇಪಾರ್ಹ ಹೇಳಿಕೆಯ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿಷಯ ನನಗೆ ತುಂಬಾ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬಿಹಾರದಲ್ಲಿ RJD, ಕಾಂಗ್ರೆಸ್ ನಾಯಕರ ಮತದಾನ ಅಧಿಕಾರ ಯಾತ್ರೆ ನಡೆದಿದೆ. ಈ ಸಂದರ್ಭದಲ್ಲಿ ವೇದಿಕೆಯಿಂದ ಪ್ರಧಾನಿ ಮೋದಿ ಅವರನ್ನು ನಿಂದಿಸಲಾಗಿದೆ. ಕೆಲವು ಅಪರಿಚಿತ ವ್ಯಕ್ತಿಗಳನ್ನು ತೋರಿಸುವ ವೀಡಿಯೊ ಕ್ಲಿಪ್ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವಿವಾದ ಭುಗಿಲೆದ್ದಿದೆ.
ನನಗೆ ನೋವಾಗಿದೆ. ನನ್ನ ತಾಯಿಯನ್ನು ಮಾತ್ರ ಅವಮಾನಿಸಿಲ್ಲ. ಭಾರತದ ಪ್ರತಿಯೊಬ್ಬ ತಾಯಿ ಮತ್ತು ಅಕ್ಕ- ತಂಗಿಯರನ್ನು ಅವಮಾನಿಸಿದ್ದಾರೆ. ದೇಶ ಸೇವೆ ಮಾಡಲು ನನ್ನನ್ನು ಆಶೀರ್ವದಿಸುವ ಮೂಲಕ, ದೇಶ ಸೇವೆ ಮಾಡಲು ನನಗೆ ಕಳುಹಿಸಿದ್ದಾರೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗ ತನ್ನ ಸೇವೆ ಮಾಡಬೇಕೆಂದು ಬಯಸುತ್ತಾಳೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗ ಬೆಳೆಯಬೇಕೆಂದು ಬಯಸುತ್ತಾಳೆ.
ನನ್ನ ತಾಯಿ ಅವಳಿಗಾಗಿ ಅಲ್ಲ. ನಿಮ್ಮಂತ ಕೋಟ್ಯಾಂತರ ತಾಯಂದಿರ ಸೇವೆ ಮಾಡಬೇಕು ಅದಕ್ಕಾಗಿ ತನ್ನಿಂದ ದೂರ ಮಾಡಿ ನನ್ನನ್ನ ಹೋಗೋಕೆ ಬಿಟ್ರು. ನನ್ನ ತಾಯಿಯ ದೇಹವು ಈಗ ಈ ಜಗತ್ತಿನಲ್ಲಿಲ್ಲ. ಇದು ನಿಮಗೆಲ್ಲರಿಗೂ ಗೊತ್ತು. ಕೆಲ ದಿನಗಳ ಹಿಂದೆ, 100 ವರ್ಷಗಳನ್ನು ಪೂರೈಸಿದ ನಂತರ, ಅವರು ನಮ್ಮೆಲ್ಲರನ್ನೂ ಬಿಟ್ಟು ಹೋದ್ರು.
ಆ ನನ್ನ ತಾಯಿಗೆ, ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ಯಾರ ಶರೀರ ಈಗ ಇಲ್ಲವೋ ಅಂತಹ ನನ್ನ ತಾಯಿಗೆ ಆರ್‌ಜೆಡಿ ಕಾಂಗ್ರೆಸ್ ನಿಂದ ಹಂತವಾಗಿ ಕೆಟ್ಟ ಕೆಟ್ಟದಾಗಿ ನಿಂದಿಸಲಾಗಿದೆ.
ತಾಯಂದಿರೇ, ಸಹೋದರಿಯರೇ, ನಾನು ನಿಮ್ಮ ಮುಖಗಳನ್ನು ನೋಡುತ್ತಿದ್ದೇನೆ. ನಿಮಗೂ ಎಷ್ಟು ನೋವಾಗಿರಬೇಕು. ಕೆಲವು ತಾಯಂದಿರ ಕಣ್ಣಲ್ಲಿ, ಕಣ್ಣೀರು ಕಾಣಿಸುತ್ತಿದೆ. ಇದು ನೋವು ಕೊಡೋ ಸಂಗತಿ ಆ ತಾಯಿಯ ತಪ್ಪೇನು? ಹೀಗೆಂದು ತಿಳಿಸಿರುವ ನರೇಂದ್ರ ಮೋದಿ ಅವರು ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


