Tuesday, October 28, 2025

Latest Posts

ನಿನ್ನ ಹೆರಿಗೆ ಮಾಡಿಸ್ತೀನಿ.. ದೇಶಪಾಂಡೆ ಧಿಮಾಕಿಗೆ ಭುಗಿಲೆದ್ದ ಆಕ್ರೋಶ

- Advertisement -

ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್‌.ವಿ ದೇಶಪಾಂಡೆಯವರು ಮಹಿಳೆಯರ ಬಗ್ಗೆ ನಾಲಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ. ಉತ್ತರ ಕನ್ನಡದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಉಡಾಫೆ ಉತ್ತರ ಕೊಟ್ಟಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಜಿಲ್ಲಾ ಉಪವಿಭಾಗ ಜೋಯಿಡಾ ತಾಲೂಕಿಗೆ ಆಸ್ಪತ್ರೆ ಬೇಕೆಂದು ಹಲವಾರು ವರ್ಷಗಳಿಂದ ಸ್ಥಳೀಯರು ಆಗ್ರಹಿಸುತ್ತಲೇ ಬಂದಿದ್ದಾರೆ. ಗರ್ಭಿಣಿಯರು ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಈ ಭಾಗಕ್ಕೆ ಉತ್ತಮ ದರ್ಜೆಯ ಸರ್ಕಾರಿ ಆಸ್ಪತ್ರೆಯ ಅವಶ್ಯಕತೆ ಇದೆ.

ಇದೇ ವಿಚಾರವಾಗಿ ದೇಶಪಾಂಡೆ ಅವ್ರನ್ನ, ಪತ್ರಕರ್ತೆ, ಗ್ಯಾರಂಟಿ ನ್ಯೂಸ್‌ನ ಮಹಿಳಾ ಸಂಪಾದಕಿ ರಾಧಾ ಹಿರೇಗೌಡರ್‌ ಪ್ರಶ್ನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ದೊಡ್ಡ ಕೂಗಿದೆ. ಪ್ರವಾಹ ಬಂದ್ರೆ ಹೆರಿಗೆಗೂ ಕಷ್ಟ ಪಡುವಂತಹ ಪರಿಸ್ಥಿತಿ ಅಂತಾ ಪ್ರಶ್ನಿಸಿದ್ರು. ಇದಕ್ಕೆ ಆರ್‌.ವಿ. ದೇಶಪಾಂಡೆ ಉದ್ಧಟತನದ ಉತ್ತರ ನೀಡಿದ್ದಾರೆ. ನಿನ್ನದೇನು ಹೆರಿಗೆ ಇದ್ರೆ ಹೇಳು ಮಾಡಿಸ್ತೀನಿ. ಬೇರೆ ಆಸ್ಪತ್ರೆಗೆ ಸೇರಿಸೋಣ ಅಂತಾ, ಕಣ್ಣುಮಿಟುಕಿಸುತ್ತಾ ಅಶ್ಲೀಲವಾಗಿ ಅಪಹಾಸ್ಯ ಮಾಡಿದ್ದಾರೆ.

ಆರ್‌.ವಿ. ದೇಶಪಾಂಡೆ ಅವರ ಕೀಳು ಮಟ್ಟದ ಮಾತಿಗೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯ ಪತ್ರಕರ್ತೆ ರಾಧಾ ಹೀರೇಗೌಡರ್‌ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಗಳು ಕೇಳಿ ಬರ್ತಿವೆ. ಇನ್ನು, ವಿಪಕ್ಷಗಳು ಕೂಡ, ಹಿರಿಯ ಕಾಂಗ್ರೆಸ್ಸಿಗನನ್ನ ತರಾಟೆಗೆ ತೆಗೆದುಕೊಂಡಿವೆ. ಜೆಡಿಎಸ್‌ ಟ್ವೀಟ್‌ ಮೂಲಕ ಗುಡುಗಿದ್ದು, ಆರ್‌.ವಿ. ದೇಶಪಾಂಡೆ ಅವರೇ ನಿಮ್ಮದು ಅದೆಂತಹ ಕೀಳು ಮನಸ್ಥಿತಿ ? ಜಿಲ್ಲೆಗೆ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಿಕೊಡಿ ಅಂತ ಪ್ರಶ್ನೆ ಮಾಡಿದ ಹಿರಿಯ ಪತ್ರಕರ್ತೆಗೆ, ನಿನ್ನ ಹೆರಿಗೆಯಾಗಲಿ ಎನ್ನುವುದು, ನೀವು ಸ್ತ್ರೀಯರಿಗೆ ಕೊಡುವ ಗೌರವವೇ ?. ನಿಮ್ಮ ಈ ಉದ್ಧಟತನ ಮಾತುಗಳು ಮಹಿಳೆಯರ ಕುಲಕ್ಕೆ ಮಾಡಿರುವ ಅಪಮಾನ. ಈ ಕೂಡಲೇ ಆ ಮಹಿಳಾ ಪತ್ರಕರ್ತೆಗೆ ಕ್ಷಮೆ ಕೇಳಿ ಅಂತಾ ಆಗ್ರಹಿಸಿದೆ.

- Advertisement -

Latest Posts

Don't Miss