Friday, September 12, 2025

Latest Posts

ಕಡಿಮೆ ಆಗ್ತಿದೆ ವರುಣಾರ್ಭಟ ಸೆಪ್ಟೆಂಬರ್‌ 11ರವರೆಗೂ ಮಳೆ ಅಲರ್ಟ್!

- Advertisement -

ರಾಜ್ಯಾದ್ಯಂತ ಜೋರಾಗಿದ್ದ ಮಳೆಯ ಅಬ್ಬರ ಇಂದಿನಿಂದ ಕಡಿಮೆಯಾಗಲಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 11ರವರೆಗೂ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ,ತುಮಕೂರು, ವಿಜಯನಗರದಲ್ಲಿ ಮಳೆ ಮುಂದುವರೆಯಲಿದೆ.

ಆಗುಂಬೆ, ಉಪ್ಪಿನಂಗಡಿ, ಸುಳ್ಯ, ಕಮ್ಮರಡಿ, ಗೋಪಾಲನಗರ, ಭಾಗಮಂಡಲ, ಪುತ್ತೂರು, ಮಂಗಳೂರು, ಗೇರುಸೊಪ್ಪ, ಉಡುಪಿ, ಟಿಜಿ ಹಳ್ಳಿ, ಶೃಂಗೇರಿ, ಸಿದ್ದಾಪುರ, ಮಾಣಿ, ಮಾಗಡಿ, ಕುಣಿಗಲ್‌, ಕಳಸ, ಧರ್ಮಸ್ಥಳ, ಕ್ಯಾಸಲ್‌ ರಾಕ್‌, ಬೆಂಗಳೂರು ನಗರ, ಬೆಳ್ತಂಗಡಿ, ತ್ಯಾಗರ್ತಿ, ಸೋಮವಾರಪೇಟೆ, ಶಕ್ತಿನಗರ, ಪೊನ್ನಂಪೇಟೆ, ನಾಪೋಕ್ಲು, ಮೂಡುಬಿದಿರೆ, ಮಂಗಳೂರು, ಕುಮಟಾ, ಕೊಟ್ಟಿಗೆಹಾರ, ಕೊಪ್ಪ, ಕಾರ್ಕಳ, ಜಯಪುರ, ಗೋಕರ್ಣ, ಬಂಟವಾಳ, ವಿಜಯಪುರ, ಮುಲ್ಕಿ, ಕೆಂಭಾವಿ, ಕಾರವಾರ, ಕದ್ರಾ, ಕೋಣನೂರು, ಹೊನ್ನಾವರ, ಹಳಿಯಾಳ, ಇಂಡಿ, ಹೊನ್ನಾವರ, ಬಾಳೆಹೊನ್ನೂರು, ಅರಕಲಗೂಡು, ಚಿಕ್ಕಬಳ್ಳಾಪುರ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣವಿದೆ. ಎಚ್‌ಎಎಲ್ ನಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ ನಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 29.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್ಪೋರ್ಟ್ನಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss